"ಹಿರಿಯರೇ ನಮ್ಮ ಮನೆ ದೇವರು,ಹಿರಿಯನ್ನು ಗೌರವಿಸಿ ಪ್ರೀತಿಸಿ"

Mar 25, 2026 - 16:31
 0  21
"ಹಿರಿಯರೇ ನಮ್ಮ ಮನೆ ದೇವರು,ಹಿರಿಯನ್ನು ಗೌರವಿಸಿ ಪ್ರೀತಿಸಿ"

ನಮ್ಮ ಮನೆಯ ಹಿರಿಯರು ನಮ್ಮ ಮನೆ ದೇವರು ಇದ್ದಂತೆ.
ಹಿರಿಯರೆಂದರೆ,ನಮ್ಮ ಅಜ್ಜ ಅಜ್ಜಿ ತಂದೆ ತಾಯಿ ಇವರೆಲ್ಲರೂ ಹಿರಿಯರು.ನಾವು ಇವರಿಗೆ ಬಹಳ ಗೌರವ ನೀಡಬೇಕು ನಮ್ಮ ಜೀವನದಲ್ಲಿ.ಹಿರಿಯರೆ ನಮ್ಮ ಜೀವಾಳ.ಹಿರಿಯರಿಲ್ಲದ  ಮನೆ ದೇವರೇ ಇಲ್ಲದ ಗುಡಿಯಂತೆ.

ನಮ್ಮ ತಂದೆ ತಾಯಿ ಹಿರಿಯ ಜೀವಗಳು.ನಾವು ನಮ್ಮ ತಂದೆ ತಾಯಿಗೆ ಮೊದಲು ಗೌರವ ನೀಡುವುದನ್ನು ಕಲಿಯಬೇಕು.ಹೊರಗಿನ ಸಮಾಜದಲ್ಲೂ ಹಿರಿಯರನ್ನು ಕಂಡಾಗ ಅವರನ್ನು ಗೌರವದಿಂದ, ಆತ್ಮೀಯವಾಗಿ ಮಾತನಾಡಿಸಬೇಕು.
ಮಕ್ಕಳಿಗೆ ಹೆತ್ತು ಇಂಥ ಅದ್ಭುತ ಜಗತ್ತನ್ನು ಪರಿಚಯಿಸಿದವರೇ ತಂದೆ ತಾಯಿಗಳು.
ತಾಯಿಯಾದವಳು ಮಕ್ಕಳು ಮಗುವಾಗಿದ್ದಾಗ, ಹೊಟ್ಟೆ ಹಸಿದಾಗ ಮಗುವಿನ ನಿಸ್ಸಹಾಯಕತೆಯನ್ನು ಅರಿತು ನಮಗೆ ತನ್ನ ಮೊಲೆಯುಣಿಸಿ ನಮ್ಮನ್ನು  ಆರೈಕೆ ಮಾಡಿ ಪಾಲನೆ ಪೋಷಣೆ ಮಾಡುತ್ತಾ ಬೆಳೆಸಿ ದೊಡ್ಡವರಾಗಿ ಮಾಡಿರುತ್ತಾರೆ.

ನಾವು ಬೆಳೆದು ದೊಡ್ಡವರಾದಂತೆ ನಮಗೆ ಶಾಲೆಗೆ ಕಳುಹಿಸಿ ಒಳ್ಳೆ ಶಿಕ್ಷಣ ಕೊಡಿಸಿ ಜೊತೆಗೆ ಸಂಸ್ಕಾರವನ್ನು ಕಲಿಸುತ್ತಾರೆ.
ಮಕ್ಕಳ ಭವಿಷ್ಯ ರೂಪಿಸಲು ತಂದೆ ತಾಯಿ ಇಬ್ಬರೂ ಹಗಲಿರುಳು ಶ್ರಮಿಸುತ್ತಾರೆ.
ತಾವು ಒಂದು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿ, ಮಕ್ಕಳಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಹಾಕುತ್ತಾರೆ.ಒಳ್ಳೊಳ್ಳೆ ಬಟ್ಟೆ ಬರೀ,ಪಾಟಿ ಪುಸ್ತಕ ಕೊಡಿಸುತ್ತಾ ನಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಿ ಇಂಜಿನಿಯರ್ ಡಾಕ್ಟರ್ ಆಗಲಿ ಎಂಬ ಮಹಾದಾಸೆ ಇಟ್ಟುಕೊಂಡು ಮಕ್ಕಳಿಗೆ ಬೆಳೆಸುತ್ತಾರೆ.ತಂದೆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದಿಗೂ.


ಮಕ್ಕಳು ದೊಡ್ಡವರಾದ ಮೇಲೆ ದಿನ ಕಳೆದಂತೆ ತಂದೆ ತಾಯಿಗಳ ವಯಸ್ಸು ಇಳಿಯುತ್ತಾ ಹೋಗುತ್ತದೆ.ಆಗ ತಂದೆ ತಾಯಿಗೆ ಮಕ್ಕಳು ಆಶ್ರಯವಾಗಬೇಕು.ಮುಪ್ಪಿನ ಕಾಲದಲ್ಲಿ ಹಿರಿಯರಿಗೆ ಪರಾವಲಂಬಿ ಜೀವನ ಅನಿವಾರ್ಯವೂ ಆಗಿ ಬಿಡುತ್ತದೆ. ವಯಸ್ಸಾದಂತೆ ಶಕ್ತಿ ಕ್ಷಣಿಸುತ್ತಾ ಹೋಗುತ್ತದೆ, ಆಗ ಅವರು ಮಕ್ಕಳ ಮೊಮ್ಮಕ್ಕಳ ಆಶ್ರಯವನ್ನು ಬಯಸುತ್ತಾರೆ. ಕೇವಲ ಅವರ ಲಾಲನೆ ಪಾಲನೆ ಉಪಚಾರ ಅಷ್ಟೇ ಅಲ್ಲ, ಇಳಿ ವಯಸ್ಸಿನಲ್ಲಿ ಹಿರಿಯರು ಪ್ರೀತಿ ಮಮತೆ ಕಾಳಜಿಯನ್ನು ಬಯಸುತ್ತಾರೆ.ಇವೆಲ್ಲಾ ಅವರಿಗೆ ಯಾರಿಂದ ಸಿಗುತ್ತದೆ ಅವರೊಂದಿಗೆ ಸದಾ ಲವಲವಿಕೆಯಿಂದ ಇರುತ್ತಾರೆ.ಆರೋಗ್ಯದಿಂದಲೂ ಇರುತ್ತಾರೆ.

ದಯವಿಟ್ಟು ಯಾರೂ ತಮ್ಮ ತಂದೆ ತಾಯಿಗೆ ಅನಾಥಾಶ್ರಮಕ್ಕೆ ಕಳುಹಿಸಬೇಡಿ. ಆದಷ್ಟು ಅವರಿಗೆ ಮನೆಯಲ್ಲಿಯೇ ಇಟ್ಟುಕೊಂಡು ಕಾಳಜಿ ಪ್ರೀತಿಯನ್ನು ಮಾಡಿ. ಸಾಧ್ಯವಾದಷ್ಟು ಆರೈಕೆಯನ್ನು ಮಾಡಿ, ಹಿರಿಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಅವರ ಆಶೀರ್ವಾದವನ್ನು ಪಡೆಯಿರಿ. 
ಮನುಷ್ಯನ ದೈಹಿಕ ಆರೋಗ್ಯ ಚೆನ್ನಾಗಿರಬೇಕಾದರೆ ಮೊದಲು ಮಾನಸಿಕ ಆರೋಗ್ಯವು ಸದೃಢವಾಗಿ ಇರಬೇಕಾಗುತ್ತದೆ ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯ ಚೆನ್ನಾಗಿರಬೇಕಾದರೆ ಪ್ರೀತಿ ವಿಶ್ವಾಸ ಕಾಳಜಿ ಅನುಕಂಪ ದಯೆ ಇವೆಲ್ಲವೂ ಸಿಗಲೇಬೇಕು ಯಾರಿಂದಾದರೂ ಸರಿ.ಆಗ ಮನಸ್ಸು ಮತ್ತು ದೇಹದ ಅದರ ಆರೋಗ್ಯ ಚೆನ್ನಾಗಿರುತ್ತದೆ. ಆಯುಷ್ಯವೂ ಹೆಚ್ಚುತ್ತದೆ.
ಹಿರಿಯ ನಾಗರಿಕರನು ನಿಮ್ಮ ತಂದೆ ತಾಯಿಯನ್ನು  ಗೌರವಿಸಿ ಪ್ರೀತಿಸಿ ನನ್ನ ಕಳಕಳಿಯ ವಿನಂತಿ ಎಲ್ಲರಿಗೂ..

ಲೇಖಕಿ:-ವಿಶಾಲಾಕ್ಷಿ ಕಾಳೆ ✍️ 
ತಾ ಇಂಡಿ ಜಿಲ್ಲಾ ವಿಜಾಪುರ.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456