ಶಾಲೆಯ ಮುಖ್ಯಗುರುಗಳಾದ ಶ್ರೀಶೈಲ ಸಜ್ಜನ ಗುರುಗಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿದರು
ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳ ಗ್ರಾಮದ ಕ್ರಾಸ್ ನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರುವರಿ 14 ಶನಿವಾರದಂದು ಶಾಲೆಯ ಮುಖ್ಯಗುರುಗಳಾದ ಶ್ರೀಶೈಲ ಸಜ್ಜನ ಗುರುಗಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿದರು. ಢವಳಗಿ ಗ್ರಾಮದ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆ ಲೆಕ್ಕ ಪರಿಶೋಧಕರಾದ ಗೌರವಯುತ ಡಾ. ಎಮ್ ಕೆ ಗುಡಿಮನಿ, ಮುದ್ದೇಬಿಹಾಳ ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ(KUWJ) ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ ಎನ್ ಬೀರಗೊಂಡ(ಮುತ್ತು), ಮತ್ತು ಹಾಗೂ ಸಾವಿತ್ರಿ ಬಾಯಿ ಪುಲೆ ಮತ್ತು ಜ್ಯೋತಿಬಾ ಪುಲೆ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ ಎಸ್ ಕೆ ಗಡಿಯಪ್ಪನವರ್, ಶ್ರೀಮತಿ ಬಸಮ್ಮ C, ಸಿ ಪಿ ಮುತ್ತಿನ, ಜಲಾಲ್ ಶೇಕ್ , ಮಹಾಂತೇಶ ಪೂಜಾರಿ, ಹಾಗೂ ಪ್ರಶಾಂತ ಗುಡದಿನ್ನಿ ಅವರ ಪರವಾಗಿ ಅವರ ತಂದೆಯವರನ್ನು ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮುಂಚೆ ಕಾರ್ಯಕ್ರಮದಲ್ಲಿ ವಿದ್ಯಾ ದೇವತೆಯಾದ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
