ತಂದೆಯ ಸ್ಮರಣೆಯಲ್ಲಿ, ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ
ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ದಿ.ಫಕಿರಪ್ಪ ಭೀಮಪ್ಪ ವಣಕ್ಯಾಳ ರವರು ಆರಕ್ಷರಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದರು.ಬಹಳ ಬಡತನದಲ್ಲಿ ತಮ್ಮ ಎರಡು ಗಂಡು ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡಿದರು.ತಂದೆಯ ಮಾರ್ಗದರ್ಶನದಂತೆ,ಅವರ ಬಡತನ ಗಮನಿಸಿದ ಮಕ್ಕಳು ಕಷ್ಟಪಟ್ಟು ಹಿರಿಯ ಮಗ ವಿಜಯಕುಮಾರ ವಣಿಕ್ಯಾಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೆಳಗಾಂ ಜಿಲ್ಲೆ, ಎರಡನೇಯ ಮಗ ಬಸವರಾಜ ವಣಿಕ್ಯಾಳ ಪ್ರೌಢ ಶಾಲೆಯ ಸಹ ಶಿಕ್ಷಕರಿಗಾಗಿ ನೌಕರಿ ಪಡೆದರು. ನಾವುಗಳು ತಂದೆಯವರ ನೆನಪಿಗಾಗಿ ಏನಾದರೂ ಕಾರ್ಯ ಮಾಡಬೇಕು ಎಂದು ಮನಗಂಡ ಇವರು ಶ್ರೀಯುತರ ನೆನಪಿನಲ್ಲಿ ಶಿಕ್ಷಣ ಪ್ರತಿಷ್ಠಾನದ ಮೂಲಕ ಬಸರಕೋಡ ಗ್ರಾಮದ 3 ಪ್ರಾಥಮಿಕ ಶಾಲೆಗಳಿಗೆ ಪ್ರತಿ ವರ್ಷ, ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ 1000/-,500/-,250/- ರೂ ಪ್ರೋತ್ಸಾಹ ಧನ, ಜೋತೆಗೆ ಅತ್ಯುತ್ತಮ ಇಂಗ್ಲಿಷ್ ಶಬ್ದ ಸಂಗ್ರಹ ಪುಸ್ತಕ, ಹಾಗೂ ಪ್ರಶಸ್ತಿ ಪತ್ರ ನಿಡುವ ಕಾರ್ಯ ಕಳೆದ ಐದು ವರ್ಷಗಳಿಂದ ಮಾಡಿಕೋಂಡು ಬರುತ್ತಿದ್ದಾರೆ.ನಾವುಗಳು ಒಂದೆ ಶಾಲೆಯಲ್ಲಿ ಕಲತಿರಬಹುದು ಆದರೆ ಊರಿನ 3 ಶಾಲೆಯ ಮಕ್ಕಳಿಗೆ ನಮ್ಮ ಪ್ರೋತ್ಸಾಹ ಧನ ಇರಲಿ ಎಂದು ಈ ಕಾರ್ಯ ಮಾಡ್ತಾಯಿದ್ದಾರೆ... ಪುಟ್ಟ ಹಳ್ಳಿಯಲ್ಲೂ ಇಂತಹ ಕಾರ್ಯ ಸ್ಲಾಗನಿಯ ಎಂದು ಗ್ರಾಮಸ್ಥರು ಹೇಳಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
