ಅನುಷ್ಠಾನ ಮೂರ್ತಿಗಳಾದ ಬೆಳ್ಳಟ್ಟಿ ಪೂಜ್ಯ ಬಸವರಾಜ ಮಹಾಸ್ವಾಮಿಗಳವರಿಗೆ 'ಪ್ರವಚನಾಚಾರ್ಯ:'ಪ್ರಶಸ್ತಿ ಪ್ರದಾನ
ಹಾವೇರಿ :-ತಾಲೂಕಿನ ಅಗಡಿ ಜಂಗಮ ಸುಕ್ಷೇತ್ರ ಪ್ರಭುಸ್ವಾಮಿಮಠದ ಲಿಂಗ್ಯಕ್ಯ ಮಹಾತಪಸ್ವಿ ಪೂಜ್ಯ ಸಂಗನಬಸವ ಮಹಾಸ್ವಾಮಿಗಳು ಹಾಗೂ ಪೂಜ್ಯ ರುದ್ರಮುನಿ ಸ್ವಾಮಿಗಳ ಉಬಯ ಶ್ರೀಗಳ ಪುಣ್ಯಸ್ಮರಣೆ ಹಾಗೂ ಪೂಜ್ಯ ಗುರುಸಿದ್ದ ಮಹಾಸ್ವಾಮಿಗಳ ಪಟ್ಟಾಧಿಕಾರದ ದಶಮನೋತ್ಸವ ಸವಿನೆನಪಿನ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ 9 ದಿನಗಳಕಾಲ 'ಶರಣ ಪರಿಚಾ ಮೃತ' ಪ್ರವಚನ ಮಾಡಿದ ಬೆಳ್ಳಟ್ಟಿ ಶ್ರೀ ಬಸವರಾಜ ಮಹಾಸ್ವಾಮಿಗಳವರಿಗೆ ಅಗಡಿ ಶ್ರೀಮಠ ದಿಂದ ಪ್ರವಚನಾಚಾರ್ಯ: ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಶ್ರೀಮಠದ ಕ್ಷೇತ್ರಾದಿಪತಿಗಳಾದ ಪೂಜ್ಯ ಗುರುಸಿದ್ದ ಮಹಾಸ್ವಾಮಿಗಳು, ಹಂಸಬಾವಿಯ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಹತ್ತಿಮತ್ತೂರಿನ ಪೂಜ್ಯ ನಿಜಗುಣ ಶಿವಯೋಗಿ ಮಹಾಸ್ವಾಮಿಗಳು, ಲಿಂಗನಾಯಕನಹಳ್ಳಿಯ ಪೂಜ್ಯ ಚನ್ನವೀರಮಹಾಸ್ವಾಮಿಗಳು,ಕಂಪ್ಲಿ, ಗೋಲಗೇರಿ,ಸರ್ವ ಶ್ರೀಗಳು ಮಾತನಾಡಿ ಬೆಳ್ಳಟ್ಟಿ ಶ್ರೀಗಳು ತಮ್ಮ ಅರ್ಥಪೂರ್ಣ ವಾದ ಪ್ರವಚನದಿಂದ ಹಾಗೂ ಶ್ರೀಮಠದ ಉಬಯ ಶ್ರೀಗಳು ಹಾಗೂ ಅನೇಕ ಶರಣರ ಜೀವನ ಚರಿತ್ರೆ ತಿಳಿಸಿ ಭಕ್ತ ರನ್ನ
ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನ ಕಡೆಗೆ ಪರಿವರ್ತನೆ ಮಾಡಿದ್ದಾರೆ ಎಂದರು.
ಅತಿಥಿಗಳಾದ ಶ್ರೀ ವಿರೂಪಾಕ್ಷಪ್ಪ ಬಳ್ಳಾರಿ, ಸಿದ್ದರಾಜ ಕಲಕೋಟಿ,ಗವಿಸಿದ್ದಪ್ಪ ದ್ಯಾಮಣ್ಣನವರ, ನಾಗರಾಜ ಬಸಗೇಣ್ಣಿ, ಶಂಬಣ್ಣ ಬಸಗೇಣ್ಣಿ, ಮುತ್ತಣ್ಣ ಯಾಲಿಗಾರ, ಮಾರುತಿ ಗೊರವರ, ನೀಲಪ್ಪ ಚಾವಡಿ, ಪರಮೇಶಪ್ಪ ಮೆಗಳಮನಿ, ಪರಮೇಶಪ್ಪ ಶಿವಣ್ಣ ನವರ,ಮಂಜಯ್ಯ ಹಿರೇಮಠ, ಡಾ. ಗಂಗಯ್ಯ ಕುಲಕರ್ಣಿ ಮುಂತಾದ ವರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
