ಮೋಟಾರ್, ಕಾಪರ್ ವೈರ್ ಕಳ್ಳತನ ನಿಯಂತ್ರಣಕ್ಕೆ ಪೊಲೀಸರಿಗೆ ದಬ್ಬೇಘಟ್ಟ ಗ್ರಾಮದ ರೈತರ ಮನವಿ
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ದಬ್ಬೇಘಟ್ಟ ಗ್ರಾಮದಲ್ಲಿ ಕಳೆ 1 ವರ್ಷದಿಂದ 15 ಕ್ಕೂ ಹೆಚ್ಚು ರೈತರ ಮೂಟರ್ ನಲ್ಲಿ ಇದ್ದ ಕಾಪರ್ ವೈರ್ ಜೊತೆಗೆ ಮೋಟರ್ ಕೇಬಲ್, ಕಳ್ಳತನವಾಗಿದ್ದು ಇದರಿಂದ ಬಡ ರೈತರು ಕಂಗಾಲಾಗಿರುವ ಘಟನೆ ದಬ್ಬೇಘಟ್ಟ ಗ್ರಾಮದಲ್ಲಿ ನೆಡೆದಿದೆ
ರೈತರು ಈ ಬೇಸಿಗೆಯ ಬಿಸಿಲಿಗೆ ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳುವುದೇ ಹರಸಾಹಸವಾಗಿದೆ ಆದರೇ ಪದೇ ಪದೇ ಮೋಟರ್ ಗಳನ್ನು ಖದೀಮರು ಕಳ್ಳತನ ಮಾಡುತ್ತಿದ್ದರೆ ನಾವು ಜೀವನ ಮಾಡುವುದಾದರು ಹೇಗೆ ಕಳೆದ ಮೂರು ದಿನಗಳ ಹಿಂದೆ ಮಹೇಂದ್ರ ಎಂಬುವ ಮೂಟರ್ ಅನ್ನು ರಾತ್ರೋ ರಾತ್ರಿ ಕಳ್ಳತನ ಮಾಡಿದ್ರು ಇದರ ವಿರುದ್ದ ಕಿಕ್ಕೇರಿ ಪೋಲೀಸರಿಗೆ ದೂರು ನೀಡಲಾಯಿತು ಆದರೇ ಪೋಲೀಸರು ಯಾವುದೇ ಕ್ರಮ ಕೈಕೊಂಡಿಲ್ಲ.. ನಿಮ್ಮ ಜಮೀನನಲ್ಲಿ ಮೋಟರ್ ಕಳ್ಳತಕ್ಕೆ ನೀವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಉಡಫೆ ಉತ್ತರ ನೀಡುತ್ತಿದ್ದಾರೆ ಎಂದು ದಬ್ಬೇಘಟ್ಟ ರೈತರು ಆಕ್ರೋಷ ವೈಕ್ತಪಡಿಸಿದ್ರು..
ಅದೇ ರೀತಿ ನೆನ್ನೆ ಒಂದೇ ರಾತ್ರಿ ದಬ್ಬೇಘಟ್ಟ ಗ್ರಾಮದ ರಾಮು, ಪ್ರಶಾಂತ್, ಮಂಜು, ಎಂಬ ರೈತರು ಅಳವಡಿಸಿದ್ದ 4 ರೈತರ ಮೋಟರ್ ಗಳನ್ನು ಬಿಚ್ಚಿ ಅದರಲ್ಲಿದ್ದ ಕಾಪರ್ ವೈರ್ ಅನ್ನು ಕಳ್ಳತನ ಮಾಡದ್ದಿದ್ದು ಈ ಕಳ್ಳತನ ಮಾಡಿರುವ ವಿರುದ್ದ ಕಿಕ್ಕೇರಿ ಪೋಲೀಸರಿಗೆ ದೂರು ನೀಡಿದ್ದು ಕೊಡಲೇ ಕಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದಬ್ಬೇಘಟ್ಟ ಗ್ರಾಮಸ್ತರು ಒತ್ತಾಯಿಸಿದ್ರು..
ಈ ಸಂದರ್ಭದಲ್ಲಿ ದಬ್ಬೇಘಟ್ಟ ಗ್ರಾಮದ ಮುಖಂಡರಾದ ಮಂಜೇಗೌಡ್ರು, ಬಾಲು, ಶ್ರೀನಿವಾಸ, ಪುಟ್ಟೇಗೌಡ, ಸೋಮೇಗೌಡ್ರು, ಆಶೋಕ, ಮಣಿಯಮ್ಮ, ನಂಜುಂಡ, ಮನು, ರಾಮು, ರಾಜಣ್ಣ, ಮಂಜೇಗೌಡ್ರು, ಮಂಜುನಾಥ್ ಶೆಟ್ಟಿ, ಸೇರಿದಂತೆ ಹಲವು ರೈತರುಗಳು ಇದ್ದರು..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
