ಕಿಕ್ಕೇರಿಯ ವಸಂತೋತ್ಸವ ರಾಜ್ಯದಲ್ಲೇ ವಿಶಿಷ್ಟ ಕಿಕ್ಕೇರಮ್ಮ ದೇವಿಗೆ ಅಶ್ಲೀಲ ಪದಗಳಿಂದ ಬೈದು ಹಬ್ಬ ಆಚರಣೆ!!
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ-ಸಾಮಾನ್ಯವಾಗಿ ದೇವರ ಸೇವೆಯಲ್ಲಿ ಮಾಡುವ ಉಪಚಾರಗಳಲ್ಲಿ ಸಂಗೀತ, ನೃತ್ಯ, ನಾದ ಮುಂತಾದ ಸೇವೆಗಳು ನಡೆಯುವುದನ್ನು ಕೇಳಿದ್ದೇವೆ. ಆದರೆ, ಕಿಕ್ಕೇರಿ ಗ್ರಾಮದಲ್ಲಿ ನಡೆಯುವ ವಾರ್ಷಿಕ ಕಿಕ್ಕೇರಮ್ಮನ ಜಾತ್ರೆಯಲ್ಲಿ ದೇವಿಗೆ ಆಶ್ಲೀಲವಾಗಿ ಬೈದು ಸೇವೆ ಸಲ್ಲಿಸುವ ವಿಚಿತ್ರ ಸಂಪ್ರದಾಯ ಅನೂಚಾನವಾಗಿ ನಡೆದು ಕೊಂಡು ಬಂದಿದೆ.
ಇಲ್ಲಿನ ಕಿಕ್ಕೇರಮ್ಮ ಕೆರೆಯ ಮುಂಭಾಗದಲ್ಲಿ ಯುಗಾದಿ ಹಬ್ಬದ ದಿನದಿಂದಲೇ ರಥೋತ್ಸವದ ಕಾರ್ಯಕ್ರಮಗಳು ಆರಂಭವಾಗುತ್ತವೆ. ಯುಗಾದಿ ಕಳೆದ ಏಳನೆಯ ದಿನವಾದ ಮಾರ್ಚ್ 25ರ ಬುಧವಾರ ಸಂಜೆ 5 ಗಂಟೆಗೆ ಕಿಕ್ಕೇರಮ್ಮನವರ ರಥೋತ್ಸವು ಅದ್ದೂರಿಯಾಗಿ ನೆಡೆಯಿತು , ಗುರುವಾರ ಸಂಜೆ 6 ಗಂಟೆಗೆ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳು ವಿಶಿಷ್ಟವಾಗಿ ನಡೆಯಿತು
ಅಲ್ಲದೆ ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಜನಪದ ವಿಶಿಷ್ಟತೆಯ ವಸಂತೋತ್ಸವ (ವಸಂತ ದೇವರ ಕುಣಿತ) ವಸಂತ ಋತು ಆಗಮನದ ಸಂಕೇತವಾಗಿ ನಡೆಯುತ್ತದೆ. ಆದರೂ, ಕಿಕ್ಕೇರಿಯಲ್ಲಿನ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಮುಂದೆ ನಡೆಯುವ ಆಚರಣೆ ರಾಜ್ಯದ ಬೇರೆಲ್ಲೂ ನಡೆಯುವುದಿಲ್ಲ ಎಂಬುದೇ ವಿಶೇಷ ಪೂಜಾರಿಯೊಬ್ಬ ಪುರುಷನ ಗುಪ್ತಾಂಗದ ಮಾದರಿಯನ್ನು ಅಳವಡಿಸಿಕೊಂಡು ಪೂಜಾ ಕಾರ್ಯ ನೆರವೇರಿಸಿ ದೇವಾಲಯದ ಮುಂದೆ ಸುತ್ತು ಬರುತ್ತಾನೆ. ಸಂತಾನ ಇಲ್ಲದ ಮಹಿಳೆಯರು ಈತನನ್ನು ನೋಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿಯದಾಗಿರುತ್ತೆ
ಹಿಂದಿನಿಂದಲೂ ಗಟ್ಟಿಯಾಗಿದೆ. ಲಕ್ಷ್ಮೀದೇವಿಯು ತನ್ನ ಪತಿ ನರಸಿಂಹಸ್ವಾಮಿಯನ್ನು ಸೇರಲು ನಿರಾಕರಿಸುತ್ತಾಳೆ ಎಂಬ ಕಾರಣಕ್ಕೆ ಜನರೆಲ್ಲ ಸೇರಿ ಕಿಕ್ಕೇರಮ್ಮ (ಲಕ್ಷ್ಮಿ ದೇವಿ) ನಿಗೆ ಮನ ಬಂದಂತೆ ಅವಾಚ್ಯ ಶಬ್ದಗಳಿಂದ. ಎತ್ತರದ ದನಿಯಲ್ಲಿ ನಿಂದಿಸುವ ವಿಚಿತ್ರವನ್ನು ಕಿಕ್ಕೇರಿ ಗ್ರಾಮದಲ್ಲಿ ಮಾತ್ರ ಕಾಣಬಹುದು
ಕಿಕ್ಕೇರಿಯಮ್ಮನ ರಥೋತ್ಸವದಲ್ಲಿ ಪಾಲ್ಗೊಳ್ಳುವ ಜನರು ಲಕ್ಷ್ಮಿದೇವಿಗೆ ಬೈದು ನರಸಿಂಹಸ್ವಾಮಿಯನ್ನು ಸೇರುವಂತೆ ಒತ್ತಾಯಪಡಿಸುವ ವಿಶಿಷ್ಟ ಆಚರಣೆ ಇಂದಿಗೂ ಇಲ್ಲಿ ಕಾಣಬಹುದು. ಆದರೆ, ಇದನ್ನು ಪಾರಂಪರಿಕ ವಾಗಿ ನಡೆಸಿಕೊಂಡು ಬಂದಿರುವ ಈ ಭಾಗದ ಜನರು ಅಶ್ಲೀಲ ಪದ ಬಳಸಿ ಬೈಯಲು ತಾ ಮುಂದು ನಾ ಮುಂದು ಎಂದು ಮುನ್ನುಗ್ಗು ತ್ತಾರೆ. ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ನೆರೆದಿರುವ ಸಂದರ್ಭದಲ್ಲಿ ಕಿಕ್ಕೇರಮ್ಮ ದೇವಿಯನ್ನು ಬೈದು ಗಂಡನ ಮನೆಗೆ ಕಳುಹಿಸುವುದೇ ಈ ಜನಪದ ಉತ್ಸವದ ಉದ್ದೇಶ ಎನ್ನುತ್ತಾರೆ...
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
