ಚರಂಡಿ ಸ್ಲಾಬ್ ಕುಸಿತ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ
ಚಾಮರಾಜನಗರ: ಯಳಂದೂರು ತಾಲೋಕಿನ ಹೊನ್ನೂರು ಗ್ರಾಮದಲ್ಲಿ ಚರಂಡಿ ಸ್ಲಾಬ್ ಕುಸಿದು ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಸ್ಥಳೀಯರು ಗ್ರಾ ಪಂ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಪರಿಶೀಷ್ಟ ಜನಾಂಗದ 6ನೇ ವಾರ್ಡಿನ ಲಾಲಿ ಸಿದ್ದಯ್ಯನ ಮನೆಯಿಂದ ತೆರಳುವ ರಸ್ತೆಗೆ ನಿರ್ಮಾಣ ಮಾಡಿರುವ ಚರಂಡಿ ಸ್ಲಾಬ್ ಕುಸಿದು ಒಂದು ತಿಂಗಳು ಕಳೆದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಈ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಈ ರಸ್ತೆಯ ಮೂಲಕ ಹಾದು ಹೋಗಬೇಕು ಆದರೆ ಚರಂಡಿ ಸ್ಲಾಬ್ ಕುಸಿತದಿಂದ ದ್ವಿಚಕ್ರ ವಾಹನಗಳು ತೆರಳಲು ಸಾಧ್ಯವಾಗದ ಪರಿಸ್ಥಿತಿಯ ನಿರ್ಮಾಣವಾಗಿದೆ.
ನಡುವೆ ವಯೋ ವೃದ್ಧರು ಹಾಗೂ ಸಣ್ಣ ಪುಟ್ಟ ಮಕ್ಕಳು ತಿರುಗಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇನ್ನಾದರೂ ಇತ್ತ ಗಮನ ಹರಿಸಿ ಚರಂಡಿ ಕುಸಿದಿರುವ ಸ್ಲಾಬ್ ನ್ನು ದುರಸ್ತಿಪಡಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
