ಚಿರತೆ ಕಳೇಬರ ಪತ್ತೆ ಅಧಿಕಾರಿಗಳಿಂದ ತನಿಖೆ ಚುರುಕು
ಸಂತೆಮರಹಳ್ಳಿ: ಚಾಮರಾಜನಗರ ತಾಲೋಕಿನ ಹೊಮ್ಮಾ ಗ್ರಾಮದ ಬಳಿ ಚಿರತೆ ಕಳೇಬರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಸಾಕ್ಷಿಯಾಗಿದೆ.
ಗ್ರಾಮದ ಜಮೀನೊಂದರಲ್ಲಿ ಚಿರತೆ ಕಳೇ ಬರ ಪತ್ತೆಯಾಗಿದ್ದು ಸ್ವಭಾವಿಕವಾಗಿ ಸಾವೋ ಅಥವಾ ವಿಷಪ್ರಾಶನದಿಂದ ಮೃತ ಪಟ್ಟಿದಿಯೇ ಎಂಬ ಅನುಮಾನಗಳು ಮೂಡಿದೆ.ವಿಷಯ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ವರ್ಷಗಳಿಂದಲೂ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಆಗಾಗ್ಗೆ ಕುರಿ, ಮೇಕೆ, ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಕೊಂದು ಹಾಕುತ್ತಿದ್ದೂ ಜನರಲ್ಲಿ ಭಯವನ್ನು ಮಾಡಿತ್ತು ಈಗ ಚಿರತೆ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅನುಮಾನವನ್ನು ಉಂಟುಮಾಡಿದೆ.
ಅರಣ್ಯ ಅಧಿರಿಗಳ ತನಿಖೆಯಿಂದ ಚಿರತೆ ಸಾವಿನ ಬಗ್ಗೆ ತಿಳಿಯಲಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
