ಸಂತೆಮರಹಳ್ಳಿ ಹೋಬಳಿ ವಿವಿಧ ಗ್ರಾಮಗಳ ರಸ್ತೆಗಳ ನಿರ್ಮಾಣದ ಗುದ್ದಲಿ ಪೂಜೆಗೆ ಚಾಲನೆ

Jan 11, 2026 - 16:08
 0  41
ಸಂತೆಮರಹಳ್ಳಿ ಹೋಬಳಿ ವಿವಿಧ ಗ್ರಾಮಗಳ ರಸ್ತೆಗಳ ನಿರ್ಮಾಣದ ಗುದ್ದಲಿ ಪೂಜೆಗೆ ಚಾಲನೆ

ಚಾಮರಾಜನಗರ : ತಾಲೋಕಿನ ಬಾಗಳಿ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಗುದ್ದಲಿ ಪೂಜೆ ನೆರೆವೇರಿಸಿದರು.

 ಸಂತೆಮರಹಳ್ಳಿ ಹೋಬಳಿಯ ಚುಂಗಡಿಪುರ, ಕುದೇರು ಹಾಗೂ ಬಾಗಳಿ ಗ್ರಾಮಗಳಲ್ಲಿ 80 ಲಕ್ಷಕ್ಕೂ ಅಧಿಕ ರೂ ವೆಚ್ಚದಲ್ಲಿ ರಸ್ತೆಅಭಿವೃದ್ಧಿ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರೆವೇರಿಸಿದರು.

ಈ ಬಳಿಕ ಮಾತನಾಡಿ ಕಳೆದ ಎರಡು ವರೆ ವರ್ಷಗಳಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಭಿವೃದ್ಧಿಯತ್ತ ಸಾಗುತ್ತಿರುವುದು ವಿರೋಧ ಪಕ್ಷದವರಿಗೆ ನುಂಗಲಾರದ ತುತ್ತಗಿದೆ ಎಂದರೆ ತಪ್ಪಾಗಲಾರದು ಎಂದರು.

5 ಗ್ಯಾರಂಟಿ ಯೋಜನೆಳು ರಾಜ್ಯದ ಎಲ್ಲಾ ಜನತೆಗೆ ತಲುಪುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಮುಖ್ಯ ಮಂತ್ರಿಯಾಗಿ ಹೊರಹೋಮ್ಮಿದ್ದಾರೆ ಎಂದರು.

 

ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ದುಡಿಯುವುದರ ಜೊತೆಗೆ ಎಲ್ಲಾ ಸಮುದಾಯವನ್ನು ಪರಿಗಣಿಸಿ ಅಭಿವೃದ್ಧಿ ಮಾಡುವುದಗಿ ತಿಳಿಸಿದರು. ಮುಖ್ಯಮಂತ್ರಿ ಸ್ಪರ್ಧೆ ಮಾಡುವ ವರುಣ ಕ್ಷೇತ್ರದಿಂದ ಕೊಳ್ಳೇಗಾಲ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಗಳನ್ನ ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಬಾಗಳಿ ಗ್ರಾ ಪಂ ಅಧ್ಯಕ್ಷೆ ರತ್ನಮ್ಮ ದೊರೆಸ್ವಾಮಿ, ಗ್ರಾ ಪಂ ಸದಸ್ಯರಾದ ಲಕ್ಷ್ಮಿ ಮುಖಂಡರಾದ ಬಾಗಳಿ ಚಂದ್ರು, ರೇವಣ್ಣ, ಯೋಗೇಶ್, ರಾಜೇಂದ್ರ ಸ್ವಾಮಿ, ಕುದೇರು ಲಿಂಗಣ್ಣ, ಸೊತ್ತನ ಹುಂಡಿ ಸೋಮಣ್ಣ, ದೇಶವಳ್ಳಿ ಮಾದೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456