ಕೆ.ಹೊಸಹಳ್ಳಿ ಗ್ರಾಮದ ಡೇರೆದ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ
ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಡೇರೆದ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವ ಅಂಗವಾಗಿ ಮಹಿಳೆಯರ ಕುಂಭಕಳಸ ಡೊಳ್ಳು,ವಾದ್ಯಗಳೊಂದಿಗೆ ಭಾಗವಹಿಸಿ ಸಂಭ್ರಮಿಸಿದರು.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 101 ಕುಂಭಗಳಿಗೆ ಗ್ರಾಮದ ಪೂಜ್ಯರಿಂದ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಲಾಯಿತು.
ವಿಶೇಷ ಉತ್ಸಾಹದೊಂದಿಗೆ ಪಾಲ್ಗೊಂಡ ಮಹಿಳೆಯರು ಗ್ರಾಮದ ಸುರಕ್ಷೆ ಮತ್ತು ಸಮೃದ್ಧಿಯ ಸಂಕಲ್ಪದೊಂದಿಗೆ ಪಲ್ಲಕ್ಕಿ ಉತ್ಸವ,ರಥದ ಕಳಸವನ್ನು ಪೂಜ್ಯರ ನೇತೃತ್ವದಲ್ಲಿ 101 ಕುಂಭಗಳನ್ನು ಗ್ರಾಮದಲ್ಲಿ ಭವ್ಯ ಮೆರವಣಿಗೆಯ ಮೂಲಕ ಹೊತ್ತುಕೊಂಡು ಬಂದು ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದರು. ಸಾಯಂಕಾಲ ಕಳಸ,ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀನಾಗಲಿಂಗೇಶ್ವರ ದೇವಸ್ಥಾನ ತಲುಪುತ್ತಿದ್ದಂತೆ ರಥೋತ್ಸವವು ಪ್ರಾರಂಭವಾಯಿತು.
ಗುರುವಾರ ಬೆಳಗ್ಗೆಯಿಂದಲೇ ಆರಂಭವಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿದರೆ ಗ್ರಾಮದ ಆರಾಧ್ಯ ದೈವ ನಾಗಲಿಂಗೇಶ್ವರ ಮೂರ್ತಿಗೆ ಮಾಡಲಾಗಿದ್ದ ಅಭಿಷೇಕ, ಪುಷ್ಪರ್ಚನೆ ಮತ್ತು ಬಣ್ಣ ಬಣ್ಣದ ಲೈಟ್ ಗಳಿಂದ ಕಂಗೊಳಿಸುತ್ತಿದ್ದ ದೇವಸ್ಥಾನ ಬಂದ ಭಕ್ತಾದಿಗಳನ್ನು ಕೈಬೀಸಿ ಕರೆಯುವಂತಿತ್ತು.
ಸಾವಿರಾರು ಭಕ್ತಾದಿಗಳು ರಥಕ್ಕೆ ಹೂ ಹಣ್ಣು ಉತ್ತತ್ತಿ ಎಸೆದು ದೇವರಿಗೆ ಹರಕೆಗಳನ್ನು ಹೊತ್ತು ಧಿರ್ಘದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಇಷ್ಟಾರ್ಥಗಳ ಬೇಡಿಕೆಗಳನ್ನು ಈಡೇರಿಸುವಂತೆ ಮೊರೆ ಇಟ್ಟರು. ವಿಶೇಷವಾಗಿ ದೇವಸ್ಥಾನ ವತಿಯಿಂದ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಊರಿನ ಪರಮ ಪೂಜ್ಯರು, ಗುರು ಹಿರಿಯರು, ಮಹಿಳೆಯರು, ಯುವಕ ಯುವ ತಿಯರು ಹಾಗೂ ಪೊಲೀಸ್ ಸಿಬ್ಬಂದಿಗಳು, ಜೆಸ್ಕಾಂ ಸಿಬ್ಬಂದಿಗಳು, ಕೆ. ಹೊಸಹಳ್ಳಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
