ಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾ ಚಿತ್ರ

Mar 1, 2026 - 22:16
 0  3
ಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾ ಚಿತ್ರ

 ಮಾತಂಗಿ ದೀವಟಿಗೆ, ಹಿರಿಮನೆ ಎಸ್ಟೇಟ್, ನಿರ್ಗಮನದ ಹಾದಿಯಲ್ಲಿ, ಭ್ರoಗದ ಬೆನ್ನೇರಿ, ಸ್ಮಶಾನ ಮೌನ... ಎಂಬ ಕಲಾತ್ಮಕ ಸಿನಿಮಾಗಳನ್ನು, ನಿರ್ದೇಶಿಸಿದ, ಸಾಹಿತಿ, ಹಾಗೂ ರಂಗಕರ್ಮಿ ಮಂಜು ಪಾಂಡವಪುರ ಪ್ರಸ್ತುತ ರೈತರ ವಿಷಯ ಆಯ್ಕೆ ಮಾಡಿಕೊಂಡು  ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದರು.
 
 ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಪ್ರಗತಿಪಥ ರೈತ ದಯಾನಂದ ಮೂರ್ತಿಯವರ ಕೃಷಿ ಜೀವನವನ್ನು ಆಧರಿಸಿ ಈ ಸಾಕ್ಷ್ಯ ಚಿತ್ರ ನಿರ್ಮಾಣವಾಗುತ್ತಿದೆ.

   ಈ ಸಾಕ್ಷ್ಯಚಿತ್ರದ ಮಹೂರ್ತವು ಚಳ್ಳೆಕೆರೆಯ ಸಾಯಿಬಾಬಾ ಮಂದಿರದಲ್ಲಿ ಜರುಗಿ, ಸ್ಥಳೀಯ ಐಮಂಗಲ ಗುರುಪೀಠದ ಶ್ರೀ ಹರಳಯ್ಯ ಸ್ವಾಮೀಜಿ ಕ್ಯಾಮರಾ ಚಾಲನೆ ಮಾಡುವ ಮೂಲಕ ಶುಭ ಹಾರೈಸಿದರು. ಹಾಗೆಯೇ ಸಾಕ್ಷ ಚಿತ್ರದ ಮುಖಪುಟವನ್ನು ಬಿಡುಗೊಳಿಸಿ ಸಮಾಜಕ್ಕೆ ರೈತರ ಪರಿಶ್ರಮ ಆಗಬೇಕಿದೆ, ಸಂಘ ಸಂಸ್ಥೆಗಳು ಸರ್ಕಾರ ಕೂಡ ಹಲವಾರು ಯೋಜನೆಗಳನ್ನು ಚರ್ಚಿಸಿ ರೂಪಿಸಬೇಕೆಂದು ತಿಳಿಸಿದರು.

 ನಂತರದ ದಿನ ಚಳ್ಳಕೆರಿಯ ಪ್ರವಾಸಿ ಮಂದಿರದಲ್ಲಿ ಈ ಸಾಕ್ಷ್ಯ ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿ ಜರುಗಿ  ಕನ್ನಡ ಚಲನಚಿತ್ರದ ಸಾಹಿತಿ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಿ ಸಮಾಜಕ್ಕೆ ಅನ್ನ ನೀಡುವ ಈ ದಯಾನಂದ ಮೂರ್ತಿಯವರ ಕೃಷಿ ಕ್ಷೇತ್ರದ ಸಾಧನೆಯನ್ನು ಶ್ಲಾಘಿಸಿ ಮುಂದೆ ಇವರ ಬಗ್ಗೆ ಚಲನಚಿತ್ರವೇ ನಿರ್ಮಾಣ ಆಗಬೇಕೆಂದರು.   
   ಈ ಸಾಕ್ಷ್ಯಚಿತ್ರದ ನಿರ್ದೇಶಕ ಮಂಜು ಪಾಂಡವಪುರ ಮಾತನಾಡಿ ಮುಂದೊಂದು ದಿನ ಸಮಾಜದಲ್ಲಿ ಕೃಷಿ ಕುಂಠಿತವಾಗಿ ಎಲ್ಲರ ಬಳಿಯೂ ಹೇರಳವಾಗಿ ಹಣ ಇರುತ್ತದೆ, ಮೈತುಂಬ ಚಿನ್ನ ಕೂಡ ಇರುತ್ತದೆ, ಆದರೆ ಅನ್ನ,ಆಹಾರ ಇರುವುದಿಲ್ಲ. ಇದಕ್ಕೆ ಬೇಡಿಕೆ ಹೆಚ್ಚಾಗುವ ನಿರ್ಮಾಣ ಉಂಟಾಗುತ್ತದೆ. ಎಂಬ ವಿಷಯಗಳನ್ನು ತಿಳಿಸಿದರು. ಹಾಗಾಗಿ ಈ ರೀತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಬೀದಿ ನಾಟಕಗಳು, ಕಿರು ಚಿತ್ರ, ಸಾಕ್ಷ್ಯ ಚಿತ್ರ, ಮತ್ತು ಚಲನಚಿತ್ರಗಳನ್ನು ನಿರ್ದೇಶಿಸುವ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅಲ್ಲಿ ನೆರೆದಿದ್ದ ಎಲ್ಲ ಪತ್ರಕರ್ತರು ಹಾಗೂ ಸಾಹಿತಿಗಳ ಮುಂದೆ ಹಂಚಿಕೊಂಡರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456