ಸಂಗೀತಾ, ದಿಶಾ, ಅರ್ಚನಾನವೋದಯ ಪರೀಕ್ಷೆ ಯಶೋಧ ಆಯ್ಕೆ
ಸುರಪುರ: ಜವಾಹರ್ ನವೋದಯ ವಿದ್ಯಾಲಯದ ನಡೆಸುವ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆ ಯಲ್ಲಿ ಕುರುಬನ ತಳ್ಳಳ್ಳಿ ಗ್ರಾಮದ ಬಾಲಕಿ ಯಶೋಧ ತಂದೆ ರಮೇಶ ನಾಯ್ಕೋಡಿ 100 ಅಂಕಗಳಿಗೆ ಪ್ರತಿಶತ 95 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಂಡಸೊಲ್ಲಾಪುರದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸಂಕೇಶ್ವರಹಾಳದ ಶ್ರೀ ಕೆ.ಆರ್.ನವೋದಯ ತರಬೇತಿ ಕೇಂದ್ರದಲ್ಲಿ ಉತ್ತಮ ತರಬೇತಿ ಪಡೆದು ಉತ್ತೀರ್ಣಳಾಗಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಕೆ. ತಳ್ಳಳ್ಳಿ ಗ್ರಾಮಸ್ಥರು ಹಾಗೂ ದಂಡಸೊಲ್ಲಾಪುರ ಶಾಲೆಯ ಶಿಕ್ಷಕರು ಮತ್ತು ಬಾಲಕಿಗೆ ಉತ್ತಮ ತರಬೇತಿ ನೀಡಿದ ಸಂಕೇಶ್ವರಹಾಳ ಶಾಲೆಯ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
