ಜನತಾ ಬಾಲ ಬಹುಮುಖ ಪ್ರತಿಭೆ ಪ್ರಶಸ್ತಿಗೆ ಭಾಜನರಾದ ಪುಟ್ಟ ಬಾಲಕ, ಸಾಧಕ ತಾನೀಶ್.ಎನ್
ಬೆಂಗಳೂರು : ವಿಶ್ವಮಟ್ಟದ ಸಾಧಕ, ಪುಟ್ಟ ಬಾಲಕ, ಗ್ರ್ಯಾಡ್ ಮಾಸ್ಟರ್, ಕ್ರೇಜಿ ಟ್ಯಾಲೆಂಟ್ ಖ್ಯಾತಿಯ ವಿಶ್ವದಾಖಲೆಗಳ ಸರದಾರ ಲಕ್ಕೂರಿನ ತಾನೀಶ್.ಎನ್ ಗೆ ಬೆಂಗಳೂರಿನ ಕೆ.ಎಲ್.ಇ.ಕಾನೂನು ಕಾಲೇಜು ಹತ್ತಿರ, ಅರಮನೆ ವೆನ್ಯೂ, ಉಲ್ಲಾಳ್ ಇಲ್ಲಿ ಜನತಾ ನ್ಯೂಸ್ ಕನ್ನಡ ಅರ್ಪಿಸುವ ಜನತಾ ಅವಾರ್ಡ್ಸ್-2026 ರ ಸಾಲಿನಲ್ಲಿ ಜನತಾ ಬಾಲ ಬಹುಮುಖ ಪ್ರತಿಭೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜನತಾ ನ್ಯೂಸ್ ಕನ್ನಡ ಚಾನೆಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆರ್ಯನ್ ಭಾರದ್ವಾಜ್ ರವರು ಮಾತನಾಡುತ್ತಾ "ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಗುರ್ತಿಸಿಕೊಂಡಿರುವ, ಸಕಲಕಲವಲ್ಲಭ ಶೀರ್ಷಿಕೆಯ ಅಪ್ಪಟ್ಟ ಗ್ರಾಮೀಣ ಪ್ರತಿಭೆ ಬಾಲಕ ತಾನೀಶ್.ಎನ್ ಗೆ ಜನತಾ ಬಾಲ ಬಹುಮುಖ ಪ್ರತಿಭೆ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದು ನಮಗೆ ನಮ್ಮ ಚಾನೆಲ್ ಗೆ ಸಂತಸ ತಂದಿದೆ. ಬಾಲಕನ ಸಾಧನೆ ಇನ್ನೂ ಎತ್ತರಕ್ಕೆ ಸಾಗಲಿ ಎಂದು ಶುಭಾಶಯ" ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಹೆಚ್.ಶಿವರಾಮೇಗೌಡ ರವರು ಮಾತನಾಡುತ್ತಾ "ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರಿನ ಈ ಪುಟ್ಟ ಪ್ರತಿಭೆಯ ಸಾಧನೆಗಳು ಅನನ್ಯ. ಪೋಷಕರ ಕಾಳಜಿ, ಮಗುವಿನ ಏಕಾಗ್ರತೆ, ಶ್ರದ್ದೆ ಇಂದು ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿದೆ. ಈ ಬಾಲಕ ಮುಂದೊಂದು ದಿನ ವಿಶ್ವಮಟ್ಟದಲ್ಲಿ ಅಪ್ರತಿಮ ಸಾಧಕನಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಬಾಲಕನಿಗೆ ಶುಭವಾಗಲಿ" ಎಂದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ತಾನೀಶ್.ಎನ್ ಮಾತನಾಡುತ್ತಾ "ಜನತಾ ಬಾಲ ಬಹುಮುಖ ಪ್ರತಿಭೆ" ಪ್ರಶಸ್ತಿ ನೀಡಿ ಗೌರವಿಸಿದ ಜನತಾ ನ್ಯೂಸ್ ಕನ್ನಡ ಚಾನೆಲ್ ನ ಎಲ್ಲಾ ಸಿಬ್ಬಂದಿಗಳಿಗೆ ನನ್ನಯ ಹೃದಯಪೂರ್ವಕ ಧನ್ಯವಾದಗಳು , ನನ್ನಯ ಮುಂದಿನ ಮತ್ತಷ್ಟು ಸಾಧನೆಗಳಿಗೆ ಇದು ಶ್ರೀರಕ್ಷೆ" ಎಂದರು.
ಕಾರ್ಯಕ್ರಮದಲ್ಲಿ ಜನತಾ ನ್ಯೂಸ್ ಕನ್ನಡ ಮುಖ್ಯಸಂಪಾದಕರಾದ ಲಿಂಗೇ ಗೌಡ, ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್, ಧೃವಂತ್, ನೀತು ವನಜಾಕ್ಷೀ, ಸ್ತ್ರೀರೋಗ ತಜ್ಞರಾದ ಡಾ.ಪದ್ಮಿನಿ ಪ್ರಸಾದ್, ನಟ ಆರ್.ಕೆ ಚಂದನ್, ತಾನೀಶ್.ಎನ್ ತಾಯಿ ಶ್ರೀಮತಿ ಶ್ವೇತನಾಗರಾಜ್, ತಂದೆ ಲಕ್ಕೂರು ಎಂ.ನಾಗರಾಜ್ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
