ಕರುನಾಡ ನಿಧಿ ಕನ್ನಡ ವಾರಪತ್ರಿಕೆಯ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

Apr 7, 2026 - 15:12
 0  15
ಕರುನಾಡ ನಿಧಿ ಕನ್ನಡ ವಾರಪತ್ರಿಕೆಯ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕರುನಾಡ ನಿಧಿ ಕನ್ನಡ ವಾರಪತ್ರಿಕೆ 2ನೇ ವಾರ್ಷಿಕೋತ್ಸವ: ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಹಬ್ಬ ಅದ್ದೂರಿಯಾಗಿ ನೆರವೇರಿತು. 

ಬೆಂಗಳೂರು, ಏಪ್ರಿಲ್ 04: ಕರುನಾಡ ನಿಧಿ ಕನ್ನಡ ವಾರಪತ್ರಿಕೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಹಬ್ಬ ಅದ್ದೂರಿಯಾಗಿ ನೆರವೇರಿತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯರು, ಸಾಧಕರು ಹಾಗೂ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಮಕ್ಕಳಿಗೆ “ಕರುನಾಡ ಕಲಾ ಭೂಷಣ ರಾಜ್ಯ ಪ್ರಶಸ್ತಿ”, “ಕರುನಾಡ ನಿಧಿ ರಾಜ್ಯ ಪ್ರಶಸ್ತಿ”, “ಮಹಿಳಾ ಸೇವಾ ರತ್ನ ರಾಜ್ಯ ಪ್ರಶಸ್ತಿ”, “ಮಾಧ್ಯಮ ಮಿತ್ರ ರಾಜ್ಯ ಪ್ರಶಸ್ತಿ” ಹಾಗೂ “ಆದರ್ಶ ಸೇವಾ ರತ್ನ ರಾಜ್ಯ ಪ್ರಶಸ್ತಿ”ಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕರುನಾಡ ನಿಧಿ “ಈ-ಪೇಪರ್” ಅನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಡಾ.ನಿರ್ಮಲಾ ಯಲಿಗರ್ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಪಡೆಯುವ ವಿಧಾನಗಳು ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಕರುನಾಡ ನಿಧಿ ಪತ್ರಿಕೆಯು ಕಾಲದೊಂದಿಗೆ ಹೆಜ್ಜೆ ಹಾಕುತ್ತಾ ಓದುಗರಿಗೆ ಇನ್ನಷ್ಟು ಸುಲಭವಾಗಿ, ವೇಗವಾಗಿ ಹಾಗೂ ಎಲ್ಲಿಂದಲೂ ಲಭ್ಯವಾಗುವಂತೆ ಈ-ಪೇಪರ್ ಮತ್ತು ವೆಬ್‌ಸೈಟ್ ಪರಿಚಯಿಸಿರುವುದು ಶ್ಲಾಘನೀಯ ಎಂದರು.

ಈ-ಪೇಪರ್‌ನ ಪ್ರಮುಖ ವೈಶಿಷ್ಟ್ಯಗಳ ಕುರಿತು ಅವರು ವಿವರಿಸಿ, ಓದುಗರು ಯಾವುದೇ ಸ್ಥಳದಲ್ಲಿದ್ದರೂ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಪತ್ರಿಕೆಯನ್ನು ಓದಬಹುದು, ಸಮಯದ ಮಿತಿಯಿಲ್ಲದೆ ಯಾವಾಗ ಬೇಕಾದರೂ ವೀಕ್ಷಿಸಬಹುದು, ಪರಿಸರ ಸ್ನೇಹಿಯಾಗಿ ಕಾಗದ ಬಳಕೆಯನ್ನು ಕಡಿಮೆ ಮಾಡಬಹುದು ಹಾಗೂ ಹಳೆಯ ಸಂಚಿಕೆಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ ಎಂದು ಹೇಳಿದರು.

ಶ್ರೀಮತಿ ಎನ್.ಎಸ್. ಮಹಾಲಕ್ಷ್ಮಿ ಅವರು ಮಾತನಾಡಿ, ಕರುನಾಡ ನಿಧಿ ವಾರಪತ್ರಿಕೆ ಇನ್ನಷ್ಟು ಬೆಳೆಯಲಿ ಹಾಗೂ ಸಮಾಜ ಸೇವಕರನ್ನು ಪರಿಚಯಿಸುವ ಕಾರ್ಯವನ್ನು ಮುಂದುವರಿಸಲಿ ಎಂದು ಆಶಿಸಿದರು. ಹಿರಿಯ ಸಾಹಿತಿ ಶ್ರೀ ಮಾಚಿಕೃಷ್ಣ ಅವರು ಸಂಪಾದಕರಾದ ಸೈಯದ್ ಸಲ್ಮಾನ್ ಅವರ ಕಾರ್ಯವನ್ನು ಪ್ರಶಂಸಿಸಿ, ತಮ್ಮದೇ ಶೈಲಿಯಲ್ಲಿ ಅವರನ್ನು “ಮುತ್ತುರಾಜ” ಎಂದು ಕರೆಯುವೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.

ಬೇಸ್ಕಾಂ ಅಧಿಕಾರಿಗಳಾದ ಶ್ರೀಮತಿ ಸುಮಾ ಪಿ.ಜಿ ಅವರು, ಕರುನಾಡ ನಿಧಿ ಪತ್ರಿಕೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸುವ ಮಹತ್ವದ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಡಾ.ಗೀತಾ ಹೆಚ್ ಕೈವಾರ ಅವರು ಪತ್ರಿಕೆಯು ಇನ್ನಷ್ಟು ಜನರ ವಿಶ್ವಾಸವನ್ನು ಗಳಿಸಲಿ ಎಂದು ಆಶೀರ್ವದಿಸಿದರು.

ಇನ್ನೂ ಹಲವು ಗಣ್ಯರು ತಮ್ಮ ಮಾತುಗಳಲ್ಲಿ ಪತ್ರಿಕೆಯ ಬೆಳವಣಿಗೆಗೆ ಶುಭಾಶಯಗಳನ್ನು ತಿಳಿಸಿ, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸ್ಥಾನವನ್ನು ಪಡೆಯಲಿ ಎಂದು ಹಾರೈಸಿದರು. ಸಿಎಂ ಗಣೇಶ್ ಗೌಡ ಅವರು, ಕರುನಾಡ ನಿಧಿ ಪತ್ರಿಕೆಗೆ ಬೆನ್ನೆಲುಬಾಗಿ ನಿಂತು ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಎನ್.ಎಸ್. ಮಹಾಲಕ್ಷ್ಮಿ, ಡಾ. ನಿರ್ಮಲಾ ಯಲಿಗರ್, ಡಾ. ಗೀತಾ ಹೆಚ್ ಕೈವಾರ, ಶ್ರೀ ಮಹಾದೇವ್ ಕೆಎಎಎಸ್ (BESCOM), ಶ್ರೀಮತಿ ಸುಮಾ ಪಿ.ಜಿ (BESCOM), ಡಾ. ಜಯನ್ ಎಸ್,  ಶ್ರೀ ಎಂ.ಸಾಧಿಕ್ ಅಹಮದ್,  ಪ್ರೊ. ಪೂರ್ವಚಾರ ಎಂ, ಸಿಎಂ ಗಣೇಶ್ ಗೌಡ, ಡಾ.ಎಸ್.ಪಿ. ಆಚಾರ್ಯ ಹಾಗೂ ಮಾಯಾ ದೀಕ್ಷಿತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕರುನಾಡ ನಿಧಿ ಪತ್ರಿಕೆಯ ಸಂಪಾದಕರಾದ ಸೈಯದ್ ಸಲ್ಮಾನ್ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಉಪಸಂಪಾದಕರು ಹಾಗೂ ತಂಡದ ಸದಸ್ಯರು, ಶ್ರೀ ಹರೀಶ್ ಹೆಚ್ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾಧಕರು ಪ್ರಶಸ್ತಿಗಳನ್ನು ಸ್ವೀಕರಿಸಿ ಸಂತೋಷದಿಂದ ಮನೆಗೆ ಹಿಂತಿರುಗಿದರು. ಒಟ್ಟಾರೆ, ಕರುನಾಡ ನಿಧಿ ವಾರಪತ್ರಿಕೆಯ ಈ ವಾರ್ಷಿಕೋತ್ಸವ ಕಾರ್ಯಕ್ರಮವು ಸಾಂಸ್ಕೃತಿಕ ಸಂಭ್ರಮದೊಂದಿಗೆ ಯಶಸ್ವಿಯಾಗಿ ನೆರವೇರಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456