ಹೆಗ್ಗೋಠಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧ ಆಯ್ಕೆ
ಚಾಮರಾಜನಗರ: ತಾಲೋಕಿನ ಹೆಗ್ಗೋಠಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮಿತ ಅಧ್ಯಕ್ಷರಾಗಿ ನಂಜುಂಡಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಪಾಪ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ನಾಗೇಶ್ ಘೋಷಣೆ ಮಾಡಿದರು.
ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷರಾದ ನಂಜುಂಡಸ್ವಾಮಿ ಮಾತನಾಡಿ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ಅಭಿನಂದನೆಗಳನ್ನ ಸಲ್ಲಿಸುವುದರ ಜೊತೆಗೆ ನಮ್ಮ ಹಾಲು ಸಂಘ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತೇನೆ ಎಂದರು.
ರೈತರ ಸಂಕಷ್ಟದಲ್ಲಿ ಭಾಗಿಯಾಗಿ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನ ಒದಗಿಸುವುದರ ಜೊತೆಗೆ ಹೈನುಗಾರಿಕೆಯನ್ನು ನಂಬಿರುವಂತ ರೈತರ ಬೆನ್ನೆಲುಬಾಗಿ ನಿಂತು ಕಾಲ ಕಾಲಕ್ಕೆ ಸರಿಯಾದ ರೀತಿಯಲ್ಲಿ ಸಾಲ ಕೊಡಿಸುವುದಾಗಿ ತಿಳಿಸಿದರು.
ಸರಿಯಾದ ತಾಂತ್ರಿಕ ಜ್ಞಾನ ಮತ್ತು ನಿರ್ವಹಣೆಯೊಂದಿಗೆ ಹೈನುಗಾರಿಕೆಯು ಗ್ರಾಮೀಣ ಭಾಗದ ಯುವಕರಿಗೆ ಮತ್ತು ರೈತರಿಗೆ ಆರ್ಥಿಕವಾಗಿ ಸದೃಢರಾಗಲು ಮಾರ್ಗವಾಗಿದೆ ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎಚ್ ಎಚ್ ಪರಶೈವಮೂರ್ತಿ, ಬಿ ಗುರುಮಾಲ್ಲಪ್ಪ, ಪುಟ್ಟಮಲ್ಲಪ್ಪ, ಮಲ್ಲೇಶ್,ಎಚ್ ಬಿ ಮಹೇಶ್, ಚಿನ್ನಮ್ಮ, ಸುಬ್ಬಮ್ಮ, ರಮೇಶ್, ಎಂ ಮಹೇಶ್,ಮಹಾದೇವಯ್ಯ ಹಾಗೂ ಮುಖಂಡರಾದ ಮಲಿ ಯೂರು ಕುಮಾರ್, ದುಂಡಮಾದಯ್ಯ, ರಂಗಸ್ವಾಮಿ, ಕುಮಾರ್, ಉಮೇಶ್, ಬಸವಣ್ಣ, ನವೀನ್, ಚಂದು, ನಂದೀಶ್, ಮಲ್ಲೇಶ್, ನಾಗೇಂದ್ರ ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
