ಸಂಚಾರಿ ಪೊಲೀಸ್ ಠಾಣ ವಿರುದ್ಧ ಸಾರ್ವಜನಿಕರ ಆಕ್ರೋಶ

Apr 25, 2026 - 19:38
Apr 25, 2026 - 19:39
 0  2
ಸಂಚಾರಿ ಪೊಲೀಸ್ ಠಾಣ ವಿರುದ್ಧ ಸಾರ್ವಜನಿಕರ ಆಕ್ರೋಶ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಹಾಸನ : ಸಂಚಾರಿ ನಿಯಮ ಪಾಲಿಸಬೇಕಾದ ಸಂಚಾರಿ ಪೊಲೀಸ್ ಠಾಣೆ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ 

 ಹಾಸನ ಸಂಚಾರಿ ಪೊಲೀಸ್ ಠಾಣೆ ಈಗ ನಿಯಮ ಪಾಲಿಸದೆ ಕಾನೂನು ಗಾಳಿಗೆ ತೂರಿದೆ ಎಂದು ವಿನಾಯಕ ನಗರ ನಾಗರೀಕರು ಆರೋಪಿಸಿದ್ದಾರೆ 

 ಸಂಚಾರಿ ಪೊಲೀಸರು ಸಿಸ್ ಮಾಡಿದ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸಲು ಇವರಿಗೆ ಚನ್ನಪಟ್ಟಣದಲ್ಲಿ 16 ಕುಂಟೆ ಜಾಗ ಕೊಟ್ಟಿದಾರೆ ಆದರು ಇವರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ವಿನಾಯಕ ನಗರ ಸಾರ್ವಜನಿಕರು ದೂರಿದ್ದಾರೆ 

 ವಿನಾಯಕ ನಗರದಲ್ಲಿ ಇತ್ತೀಚಿಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿದ್ದಾರೆ ಈ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಅವರು ಸೀಸ್ ಮಾಡಿದ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ ಅಲ್ಲದೆ ರಸ್ತೆಗಳ ಗುಂಡಿ ಬಿದ್ದು ಕಿತ್ತು ಹೋಗಿದೆ ಇದರಿಂದ ವಿನಾಯಕ ನಗರ ನಿವಾಸಿಗಳಿಗೆ ಬಾರಿ ತೊಂದರೆಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ

 ಸಂಚಾರಿ ಪೊಲೀಸರು ಅತಿ ದೊಡ್ಡ ವಾಹನಗಳನ್ನು ರಸ್ತೆಗೆ ನಿಲ್ಲಿಸುವುದರಿಂದ ರಸ್ತೆ ಕಿತ್ತು ಹೋಗಿ ಹಾಳಾಗಿದ್ದು ಇಲ್ಲಿ ನಮ್ಮ ವಾಹನ ಸಂಚರಿಸಲು ಸಾಧ್ಯವಾಗದೇ ಪರದಾಡುವಂತೆ ಆಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ 

 ಶೀಘ್ರದಲ್ಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456