ಕಾನೂನು ಎಲ್ಲರಿಗೂ ಒಂದೇ
ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಕಾಲ ಒಂದಿತ್ತು. ಆದರೆ, ಅದು ಈಗ ಅನ್ವಯಿಸುವುದಿಲ್ಲ. ಏಕೆಂದರೆ, ಇತ್ತೀಚೆಗೆ ಘನ ನ್ಯಾಲಯಗಳು ತೀರ್ಪು ನೀಡುತ್ತಿರುವ ಆದೇಶಗಳು ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಾಗಿವೆ.
ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಶ್ರೀ, ಪ್ರಜ್ವಲ್ ರೇವಣ್ಣ ಅವರಿಗೆ ಮಾನ್ಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025 ರಲ್ಲಿ "ಜೀವಾವಧಿ" ಶಿಕ್ಷೆ ನೀಡಿ ಆದೇಶ ನೀಡಿತ್ತು. ಮಾನ್ಯ ನ್ಯಾಯಧೀಶರಾದ ಶ್ರೀ, ಸಂತೋಷ ಗಜಾನನ್ ಭಟ್, ಅವರು ತೀರ್ಪು ನೀಡಿದ್ದರು. ತಮಿಳುನಾಡಿನ ಸಾತಂಕುಲಂನಲ್ಲಿ 2020 ರಲ್ಲಿ ನಡೆದ ತಂದೆ ಮಗನ ಲಾಕಪ್-ಡೆತ್ ಪ್ರಕರಣದಲ್ಲಿ ತೀವ್ರ ಹಲ್ಲೆ ನಡೆಸಿ, ಕೊಲೆ ಮಾಡಿದ ಆರೋಪದ ಮೇಲೆ, 9 ಪೊಲೀಸ್ ಅಧಿಕಾರಿಗಳಿಗೆ ಮಧುರೈ ವಿಶೇಷ ನ್ಯಾಯಾಲಯ "ಮರಣ ದಂಡನೆ" ತೀರ್ಪು ನೀಡಿ ಏಪ್ರಿಲ್ - 2026 ರಲ್ಲಿ ಆದೇಶ ನೀಡಿತ್ತು. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ, ಯೋಗೇಶ್ ಗೌಡ ಹತ್ಯ ಪ್ರಕರಣದಲ್ಲಿ ಶಾಸಕ ಶ್ರೀ, ವಿನಯ್ ಕುಲಕರ್ಣಿ ಸೇರಿ 16 ಜನ ಅಪರಾಧಿಗಳಿಗೆ ಮಾನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ "ಜೀವಾವಧಿ" ಶಿಕ್ಷೆ ನೀಡಿ ತೀರ್ಪು ನೀಡಿದೆ. ಮಾನ್ಯ ಹಿರಿಯ ನ್ಯಾಯಾಧೀಶರಾದ ಶ್ರೀ, ಸಂತೋಷ ಗಜಾನನ್ ಭಟ್ ಅವರು ಆದೇಶ ಹೊರಡಿಸಿದ್ದರು.
ಅದೇ ರೀತಿಯಾಗಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಸೇರಿ 15 ಕ್ಕಿಂತ ಹೆಚ್ಚು ಆರೋಪಿಗಳಿಗೆ ಅಂತಿಮ ಆದೇಶ ಕಾಯ್ದಿರಿಸಿ ನ್ಯಾಯಾಂಗ ಬಂಧನ ಆದೇಶದ ತೀರ್ಪು ಆಗಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಘನ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ಜನಸಾಮಾನ್ಯರಲ್ಲಿ ಮಂದಹಾಸ ತಂದಿದವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎನ್ನುವ ಮಾತು ಜಗಜ್ಜಾಹಿರವಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿ ಘನ ನ್ಯಾಯಾಲಯಗಳು ತೀರ್ಪು ನೀಡುತ್ತಿವೆ. "ನ್ಯಾಯ ಎಲ್ಲರಿಗೂ ಒಂದೇ" (Rule of Law) ಎಂಬುದು ಕಾನೂನು ಆಡಳಿತದ ತತ್ವವಾಗಿದೆ. ಕಾನೂನಿನ ಮುಂದೆ ಅದೆಷ್ಟೇ, ದೊಡ್ಡವರಿರಲಿ-ಚಿಕ್ಕವರಿರಲಿ, ಶ್ರೀಮಂತರಿರಲಿ-ಬಡವರಿರಲಿ, ಪ್ರಭಾವಿಯಾಗಿರಲಿ-ಸಾಮಾನ್ಯ ವ್ಯಕ್ತಿಯಾಗಿರಲಿ, ಎಲ್ಲರಿಗೂ ಕಾನೂನು ಒಂದೇ ಎಂದು ತೋರಿಸಿಕೊಟ್ಟಂತಾಗಿದೆ. ಡಾ|| ಬಿ. ಆರ್. ಅಂಬೇಡ್ಕರ್ ರಚನೆಯ ಸಂವಿಧಾನದ ಪ್ರಕಾರ, ಪ್ರತಿಯೊಬ್ಬ ನಾಗರೀಕನಿಗೂ ಒಂದೇ ರೀತಿಯ ಕಾನೂನು ಅನ್ವಯವಾಗುತ್ತದೆ ಎಂಬುದು ಘನ ನ್ಯಾಯಾಲಯಗಳು ತೀರ್ಪು ನೀಡಿವೆ. ಪ್ರಜಾಪ್ರಭುತ್ವದಲ್ಲಿ "ಕಾನೂನು ಎಲ್ಲರಿಗೂ ಒಂದೇ" ಎಂಬುದು ಎತ್ತಿಹಿಡಿದಿವೆ. ಈ ರೀತಿಯ ನ್ಯಾಯ ಸಮ್ಮತವಾದ ತೀರ್ಪುಗಳು ಜನಸಾಮಾನ್ಯರಿಗೆ ಸ್ವಾಗತಾರ್ಹವಾಗಿವೆ. ಮುಂದಿನ ದಿನಗಳಲ್ಲಿಯೂ ಸಹ ಮಾನ್ಯ ಘನ ನ್ಯಾಯಾಲಯಗಳು ಉತ್ತಮವಾದ, ನ್ಯಾಯಸಮ್ಮತವಾದ ಮತ್ತು ಸಮಾನತೆಯುಳ್ಳ ತೀರ್ಪುಗಳು ನೀಡಲಿ.
-ಡಾ || ಶಿವಕುಮಾರ. ಲಾ. ಸೂರ್ಯವಂಶ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
