ಈ ರವೀಶ ಆಕ್ಕರ ಅವರ "ಒಂದೇ ಜೀವ" ಕಾದಂಬರಿ ಬಿಡುಗಡೆ

Mar 7, 2026 - 14:19
 0  4
ಈ ರವೀಶ ಆಕ್ಕರ ಅವರ "ಒಂದೇ ಜೀವ" ಕಾದಂಬರಿ ಬಿಡುಗಡೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಪುಸ್ತಕದ ಹೆಸರು : ಒಂದೇ ಜೀವ 

ಲೇಖಕರು : ಈ. ರವೀಶ (ಅಕ್ಕರ )

ಪ್ರಕಾಶಕರು : ಈ ರವೀಶ ಅಕ್ಕರ 

Mob: 96114 19145

ಬೆಲೆ : 195

ಪುಟಗಳು: 162

ಈ ರವೀಶ ಆಕ್ಕರ ಅವರ "ಒಂದೇ ಜೀವ" ಕಾದಂಬರಿಯು ಪ್ರೀತಿ ಭಾವನೆಗಳ ಮಹಾಸಂಗಮದ ಪ್ರೇಮ ಕಾದಂಬರಿಯಾಗಿದ್ದು. ತುಂಬ ಸುಂದರವಾಗಿ ಮೂಡಿಬಂದಿದೆ.   30 ವರ್ಷಗಳ ಹಿಂದೆ ಪ್ರೀತಿ ಎಂದರೆ ಹೇಗೆ ಇರುತ್ತದೆ ಎನ್ನುವ ವಿಶ್ಲೇಷಣೆಯ ಸೊಗಡನ್ನು ಸೊಗಸಾಗಿ ಚಿತ್ರೀಸಿದ್ದಾರೆ. ಸೌಮ್ಯ ಸ್ವಭಾವದ ಕಥಾನಾಯಕ ರಜತ್ ಗೆ ಗೆಳೆಯನ ಮದುವೆಯಲ್ಲಿ ಮನಸಿಗೆ ಒಪ್ಪುವಂತಹ ಮನದಕನ್ಯೆ ಯ ಜೊತೆಗೆ ಮೊದಲ ನೋಟದಲ್ಲೇ ಮೊದಲ ಪ್ರೀತಿಯಾಗುತ್ತದೆ.

ಆ ಪ್ರೀತಿಗೆ ಅವಳು ಒಪ್ಪಿಗೆ ಕೊಟ್ಟು ತನ್ನ ಪ್ರೀತಿಯನ್ನು ಉಳಿಸಿಕೊಂಡು ಅವಳ ಜೊತೆಗೆ ಬಾಳುವನೇ...? ಅಪ್ಪ ಅಮ್ಮನಿಗೆ ಹೊರೆಯಾಗಿ ಕೆಲಸಕ್ಕೆ ಹೋಗದ ಬೇಜವಾಬ್ದಾರಿಯ 'ಅರವಿಂದ " ಮದುವೆಯಾದ ಮೇಲೆ ಹೆಂಡತಿಯ ಜವಾಬ್ದಾರಿ ತೆಗೆದುಕೊಂಡು ಬದುಕು ಕಟ್ಟಿಕೊಳ್ಳಲು ಯಶಸ್ವಿಯಾಗುವನೇ....,? 

ಕಥಾ ನಾಯಕಿ ಶ್ರೀದೇವಿ ಜೀವನದ ಉದ್ದಕ್ಕೂ ಕಷ್ಟವನ್ನು ನುಂಗಿ ನಗುವ ಅವಳ ಸಹನೆ ಅಗಮ್ಯ ತ್ಯಾಗ ಪ್ರೀತಿ ತಾಳ್ಮೆ ಗೆ  ಪ್ರತಿಫಲ ಸಿಕ್ಕಿ ಬದುಕಿನ ಜೊತೆಗೆ ಸಾಗುವಳೇ....? ಅತ್ತೆ ಮನೆಯಲ್ಲಿ ಪಡುವ ಪಡು ಎಲ್ಲ ಹೆಣ್ಣಿಗೆ  ಕಟ್ಟಿಟ್ಟ ಬುತ್ತಿ ಆ ಹೆಣ್ಣಿನ ಮನದ ಅನುಭವಗಳು ಈ ಕಾದಂಬರಿಯಲ್ಲಿ ಜೀವ ಪಡೆದುಕೊಂಡಿದೆ.

ಪ್ರೀತಿಸುವ ಪ್ರೇಮಿಗಳ  ಬದುಕಿನಲ್ಲಿ ಬರುವ ತಿರುವುಗಳು ಸಂದರ್ಭದ ವಿವರಣೆ  ಪ್ರೀತಿ ತೊರೆದು ತ್ಯಾಗದ ಬದುಕಿನ ದಾರಿ ಅಷ್ಟು ಸುಲಭದಲ್ಲ ಎಲ್ಲ ವಿಷಯಗಳನ್ನು ರಸವತ್ತಾಗಿ ಮತ್ತು ಅಚ್ಚು ಕಟ್ಟಾಗಿ ಬರೆದುಕೊಂಡು ಹೋಗಿದ್ದಾರೆ. ಇಂದು ಭಾವನೆಗಳು ಕುಸಿತ ಎಷ್ಟರ ಮಟ್ಟಿಗೆ ಎಂದರೆ ಸ್ವಾರ್ಥ ವೇ ಬದುಕು ಪ್ರೀತಿ ಎಂದರೆ ಇಷ್ಟೇನಾ..? ಮರೆತು ಸಾಗಿದರೆ ಸಾಕು ಪ್ರೀತಿ ಭಾವನೆಗೆ ಹಂಗೇಕೆ ಎನ್ನುವ ಹಂತದಲ್ಲಿ ನಾವು ಜೀವಿಸುತ್ತಿದ್ದೇವೆ.ಬದುಕು ಕಟ್ಟಿಕೊಳ್ಳಲು ಪಡುವ ಪಾಡು ಅಂದಿನ ದಿನಗಳ ಪ್ರೀತಿ ಹೇಗೆ ಇರುತಿತ್ತು? ಭಗ್ನವಾದ ಪ್ರೀತಿಯ ನಿವೇದನೆ ನಿಸ್ವಾರ್ಥ ದ ಪ್ರೀತಿಯ ಪರಿಚಯ ಭಾವನೆಗಳು ಸಂವೇದನೆಗಳು ಪತ್ರದಲ್ಲಿ ರವಾನೆಯಾಗಿ ಭಾವನೆ ಗಳೇ ಉಸಿರಾಡುತಿತ್ತು. ಮಾತುಗಳಿಗೆ ಅಧಿಕ ಬೆಲೆ ಇತ್ತು ಕಾಯಿನ್ ಬಾಕ್ಸ್ ನಲ್ಲಿ ಮಾತನಾಡಲು ಹತೊರೆದ ಆ ದಿನಗಳು ಮರೆಯಾಗಿ  ಅಂದಿನ ದಿನಗಳು ಹೇಗೆ ಇತ್ತು ಎಂದು ಈ ಕಾದಂಬರಿ ಓದುವಾಗ ಕಣ್ಣಿನ ಮುಂದೆ ಬರುತ್ತದೆ. ಮೊಬೈಲ್ ಫೋನ್ ಗಳು ಬಂದ ಮೇಲೆ ಭಾವನೇ ಶೂನ್ಯವಾಗಿ ಪ್ರೀತಿಯ ಮೌಲ್ಯ ಕುಸಿದು ಹೋಗುತ್ತಿರುವ ಇಂದಿನ ದಿನಗಳಿಗೆ ಇಂದಿನ ಯುವ ಜನತೆಗೆ ಇಂತಹ ಕಾದಂಬರಿಯ ಅವಶ್ಯಕತೆಯಿದೆ ಎನ್ನುವಂತಹ ಸಂದೇಶವನ್ನು ಕೊಡುವ ಕಾದಂಬರಿಯು ರವೀಶ್ ಅವರದ್ದು. ಹೇಳುವುದಕ್ಕಿಂತ ಓದಿ ತಿಳಿದುಕೊಂಡರೆ ಕಾದಂಬರಿಯ ವಿಶೇಷತೆ ಅರಿಯುತ್ತದೆ. ಜಡತ್ವವೇ ತುಂಬಿರುವ ಇಂದಿನ ದಿನಗಳಲ್ಲಿ ಇಂತಹ ಪ್ರೇಮ ಕಾದಂಬರಿ ಗಳು ಮತ್ತಷ್ಟು ಬರ ಬೇಕು ಈ ರವೀಶ ಅವರ ಕಾದಂಬರಿಯ ಯಶಸ್ಸು ಕಾಣಲಿ ಮತ್ತಷ್ಟು ಸಾಹಿತ್ಯ ಕ್ಷೇತ್ರ ಬೆಳಗಬೇಕು.

ವಾಣಿ ಮೈಸೂರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456