ಶೋಷಿತ ಕುಟುಂಬಗಳು ದುಶ್ಚಟ ವ್ಯಸನಗಳಿಗೆ, ಮೌಢ್ಯಾಚರಣೆಗಳಿಗೆ ಅನಗತ್ಯ ಖರ್ಚು ಮಾಡಬೇಡಿ ಶಾಸಕ ಬಿ.ದೇವೇಂದ್ರಪ್ಪ

Apr 22, 2026 - 14:12
Apr 22, 2026 - 14:13
 0  4
ಶೋಷಿತ ಕುಟುಂಬಗಳು ದುಶ್ಚಟ ವ್ಯಸನಗಳಿಗೆ, ಮೌಢ್ಯಾಚರಣೆಗಳಿಗೆ ಅನಗತ್ಯ ಖರ್ಚು ಮಾಡಬೇಡಿ ಶಾಸಕ ಬಿ.ದೇವೇಂದ್ರಪ್ಪ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಜಗಳೂರು: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇಯ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ 119ನೇಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು, ಮಕ್ಕಳಿಗೆ ಶಿಕ್ಷಣವನ್ನು ನೀಡಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ ಎಂದರು. ನಾನು ಸಹ ಸಂಬಳಕ್ಕೆ ಜೀತ ಮಾಡಿ ಜವಾನ ಕೆಲಸವನ್ನು ಪಡೆದುಕೊಂಡು ಇಂದು ಶಾಸಕಾಗಿದ್ದೇನೆ. ಇದು ನಿಮ್ಮ ಋಣ ತೀರಿಸಲು ಅಲ್ಲ ಬದಲಾಗಿ ಅಂಬೇಡ್ಕರ್ ಅವರ ಋಣ ತೀರಿಸಲು ಎಂದರು. ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಬಳಸಿಕೊಳ್ಳಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

ಮಾಜಿ ಜಿಪಂ ಸದಸ್ಯ ಕೆಪಿ ಪಾಲಯ್ಯ, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಕೇವಲ ಪರಿಶಿಷ್ಟರಲ್ಲದೆ ಎಲ್ಲಾ ಸಮುದಾಯಗಳು ಬದುಕುತ್ತಿವೆ ಎಂದರು. 

ಮಹನೀಯರ ಜಯಂತಿಗಳನ್ನು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಆಚರಿಸಬೇಕು ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು. 

ಬಾಬಾ ಸಾಹೇಬರು ಕೊಟ್ಟ ಮತದಾನದ ಹಕ್ಕಿನಿಂದ ಬಲಿಷ್ಟರೆಲ್ಲ ಹಟ್ಟಿ, ಕೇರಿಗಳಿಗೆ ಮತ ಭಿಕ್ಷೆಗಾಗಿ ಬರುತ್ತಾ ಇದ್ದಾರೆ. ಇಂತಹ ಹಕ್ಕು ಕೊಟ್ಟ ಅವರನ್ನ ನಾವೆಲ್ಲ ಪೂಜಿಸಬೇಕು ಎಂದರು. 

ಮಹಿಳೆ ಕೇವಲ ಮಕ್ಕಳು ಹಡೆಯುವ ಮಿಷನ್ ಆಗಿದ್ದಳು ಆದರೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಮುಖ ಕಾರಣರಾಗಿದ್ದಾರೆ ಎಂದರು. ಮೌಡ್ಯತೆಯಲ್ಲಿ ನಲುಗಿದ್ದ ಸಮಾಜವನ್ನು ಇಂದು ಉನ್ನತ ಸ್ಥಾನದ ಹುದ್ದೆಗಳ ಮೂಲಕ ಸಮಾಜದಲ್ಲಿ ಸಮಾನತೆಯ ಜೀವನ ನಡೆಸಲು ಅಂಬೇಡ್ಕರ್ ಅವರ ತ್ಯಾಗ ಮಹತ್ತರವಾಗಿದೆ ಎಂದರು.

ಕರುನಾಡ ನವ ನಿರ್ಮಾಣ ವೇದಿಕೆ ಸಂಸ್ಥಾಪಕ ಮಹಾಲಿಂಗಪ್ಪ ಜೆ ಹೆಚ್.ಎಂ.ಹೊಳೆ ಮಾತನಾಡಿ, ತನ್ನ ಮಕ್ಕಳು ತೀರಿಕೊಂಡಾಗ ಕೂಡ ಮನಸ್ಸು ವಿಚಲಿತವಾಗದೆ ಸಂವಿಧಾನ ರಚನೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು. ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು. ದಲಿತ ಎಂದರೆ ಕೇವಲ ಮಾದಿಗ ಸಮುದಾಯವಲ್ಲ ಸಾಮಾಜಿಕ ವಲಯದಲ್ಲಿ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯಗಳು ದಲಿತರೇ ಎಂದರು. ಕಾರ್ಮಿಕ ಕಾಯ್ದೆ ಅಡಿಯಲ್ಲಿ ಮಹಿಳೆಯರಿಗೆ ಹೆರಿಗೆ ರಜೆ ಭತ್ಯೆ, 8ತಾಸು ಮಾತ್ರ ಕೆಲಸದ ಸಮಯ ಮಾಡಿದ್ದು ಅಂಬೇಡ್ಕರ್ ಅವರು ಅದನ್ನ ಎಲ್ಲರೂ ಸಹ ಮರೆಯುವಂತಿಲ್ಲ ಎಂದರು. 

ದಲಿತ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ಸತೀಶ್ ಮಲೆಮಾಚಿಕೆರೆ ಮಾತನಾಡಿ, ದಸಂಸ ಸಂಸ್ಥಾಪಕ ಪ್ರೊ.ಕೃಷ್ಣಪ್ಪನವರು ಹಾಕಿ ಕೊಟ್ಟ ದಾರಿಯಲ್ಲಿ ಅಂಬೇಡ್ಕರ್, ಬಾಬು ಜಗಜೀ 

ವನ್ ರಾಮ್ ಅವರ ವಿಚಾರಧಾರೆಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸಂಘಟನೆ ಬದ್ಧವಾಗಿದೆ ಎಂದರು. ಎಲ್ಲಾ ಧರ್ಮಗಳಿಗೆ ಧರ್ಮಗ್ರಂಥಗಳಿವೆ ಅದರಲ್ಲಿ ಕೆಲವು ಕಟ್ಟು ಕಥೆಗಳು ಇರಬಹುದು ಆದರೆ ಭಾರತ ದೇಶಕ್ಕೆ ಸಂವಿಧಾನ ಎಂಬ ಗ್ರಂಥ ಎಲ್ಲರ ಬದುಕನ್ನು ಬದುಕನ್ನು ಬದಲಿಸಿ ಒಳ್ಳೆಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. 

ಈ ಸಂದರ್ಭದಲ್ಲಿ ರೈತ ಸಂಘಟನೆಯ ತಾಲ್ಲಕು ಅಧ್ಯಕ್ಷ ಭರಮಸಮುದ್ರ ಕುಮಾರ್, ಮಹಿಳಾ ಹೋರಾಟಗಾರ್ತಿ ಎಸ್.ಆರ್.ಇಂದಿರಾ,ಬಂಜಾರ ಸಮಾಜದ ಮುಖಂಡ ಕುಮಾರ್ ನಾಯ್ಕ್ ,ಮಾಜಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯರಾದ ಕಾರ್ತಿಕ್, ನವೀನ್, ಗ್ರಾಮದ ಹಿರಿಯ ಮುಖಂಡರಾದ ವಾಸುದೇವರೆಡ್ಡಿ,ಸುಧಾಮರೆಡ್ಡಿ, ವೆಂಕಟೇಶ್, ಸಣ್ಣತಿಮ್ಮಣ್ಣ, ಅಂಗಡಿ ಆನಂದ,ಶಿವಲಿಂಗಪ್ಪ, ಕಾಂಗ್ರೇಸ್ ಪಕ್ಷದ ತಾಲ್ಲೂಕು ಮುಖಂಡರಾದ ವಿಜಯ್ ಕೆಂಚೋಳ್, ರಮೇಶ್ ಸರ್ಕಾರ್, ಗುರು,ದಸಂಸ ಗ್ರಾಮ ಘಟಕದ ಪದಾಧಿಕಾರಿಗಳಾದ ದುರುಗಪ್ಪ, ಚಂದ್ರಶೇಖರ್ , ಮೈಲಾರಪ್ಪ ಮಹಾಂತೇಶ್,ರಸಿಕಲಿಂಗೇಶ್, ಸೇರಿದಂತೆ ಗ್ರಾಮಸ್ಥರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456