ರಾಯರಿಗೆ ಗಂಧ ಲೇಪನ ಅಲಂಕಾರ ಮತ್ತು ಸುದರ್ಶನ ಹೋಮ

Apr 20, 2026 - 18:41
Apr 20, 2026 - 18:44
 0  7
ರಾಯರಿಗೆ ಗಂಧ ಲೇಪನ ಅಲಂಕಾರ ಮತ್ತು ಸುದರ್ಶನ ಹೋಮ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಶ್ರೀಗಂಧಲೇಪನದ ಅಲಂಕಾರ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ವಿಚಾರಣಾಕರ್ತರಾದ ಹಾವೇರಿ ಶ್ರೀ ಗಿರಿರಾಜಾಚಾರ್ ಮತ್ತು ನೂತನ ವ್ಯವಸ್ಥಾಪಕರಾದ ಶ್ರೀ ನಂದಕಿಶೋರಾಚಾರ್ಯರ ನೇತೃತ್ವದಲ್ಲಿ "ಅಕ್ಷಯ ತೃತೀಯ" ಪ್ರಯುಕ್ತ ಬೆಳಗ್ಗೆ 7:30ಕ್ಕೆ ಶ್ರೀ ಶ್ರೀನಿವಾಸದೇವರ ವಿಗ್ರಹಕ್ಕೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕ ನೆರವೇರಿತು. ನಂತರ ಅರ್ಚಕರಾದ ಇಂದಿರೇಶ ಆಚಾರ್ ಮತ್ತು ಶ್ರೀನಿವಾಸ್ ಆಚಾರ್ಯರಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷವಾಗಿ ಸಂಪೂರ್ಣ ಶ್ರೀಗಂಧ ಲೇಪನದ ಅಲಂಕಾರದೊಂದಿಗೆ ಮಹಾಮಂಗಳಾರತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಜಾನಕಿ ಭಜನಾ ಮಂಡಳಿಯೊಂದಿಗೆ ಶ್ರೀಹರಿ ಭಜನೆ, ಮಹಾರಥೋತ್ಸವ ಮತ್ತು ಕನಕಾಭಿಷೇಕವು ನೆರವೇರಿತು. ಈ ಸಂದರ್ಭದಲ್ಲಿ ಸೇವಾಕರ್ತೃಗಳು, ಶ್ರೀಮಠದ ಶಿಷ್ಯರು, ಭಕ್ತರು, ಶ್ರೀಮಠದ ಸಿಬ್ಬಂದಿಗಳು ಸ್ವಯಂ ಸೇವಕರು ಭಾಗವಹಿಸಿ ತೀರ್ಥ ಫಲಮಂತ್ರಾಕ್ಷತೆ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456