ನ್ಯೂ ಅಲೈಯನ್ಸ್ ಕಾಮರ್ಸ್ ಕಾಲೇಜಿನಲ್ಲಿ ಭವ್ಯ ಆಟೋ ಎಕ್ಸ್‌ಪೋ ಹಾಗೂ ಟಾಲೆಂಟ್ ಹಂಟ್ 2K26 ಉದ್ಘಾಟನೆ
ಚನ್ನರಾಯಪಟ್ಟಣ: ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ನ್ಯೂ ಅಲೈಯನ್ಸ್ ಕಾಮರ್ಸ್ ಕಾಲೇಜಿಯಲ್ಲಿ ನಿನ್ನೆ ಭವ್ಯವಾಗಿ ಆಟೋ ಎಕ್ಸ್‌ಪೋ ಹಾಗೂ ಕಾಲೇಜಿನ ಪ್ರತಿಷ್ಠಿತ ವಾರ್ಷಿಕ ಕಾರ್ಯಕ್ರಮವಾದ ಟಾಲೆಂಟ್ ಹಂಟ್ 2K26 ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಈ ಆಟೋ ಎಕ್ಸ್‌ಪೋದಲ್ಲಿ ವಿವಿಧ ರೀತಿಯ ವಾಹನಗಳು ಪ್ರದರ್ಶನಗೊಂಡವು.
ವಿಶೇಷವಾಗಿ ವಿನ್ಟೇಜ್ ವಾಹನಗಳು, ಆಕರ್ಷಕ ಸೂಪರ್ ಬೈಕ್‌ಗಳು ಹಾಗೂ ವಿಭಿನ್ನ ಮಾದರಿಯ ಕಾರುಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ವಾಹನ ಪ್ರದರ್ಶನದ ಜೊತೆಗೆ ಡ್ರೈವಿಂಗ್ ಕೌಶಲ್ಯ ಪ್ರದರ್ಶನವೂ ನಡೆದಿದ್ದು, ಪ್ರೇಕ್ಷಕರಲ್ಲಿ ಉತ್ಸಾಹ ತುಂಬಿತು.
ಕಾರ್ಯಕ್ರಮಕ್ಕೆ ಅನೇಕ ಗಣ್ಯರೊಂದಿಗೆ ಸಾವಿರಾರು ಜನರು ಭೇಟಿ ನೀಡಿ ಅದನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಮಾನವಾಗಿ ಕಾರ್ಯಕ್ರಮವನ್ನು ಆಸ್ವಾದಿಸಿದರು. ಈ ಕಾರ್ಯಕ್ರಮವು ಕಾಲೇಜಿನ ಚಟುವಟಿಕೆಗಳ ವೈವಿಧ್ಯತೆಯನ್ನು ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರತಿಬಿಂಬಿಸುವಂತಿತ್ತು.
ಇದೇ ಸಂದರ್ಭದಲ್ಲಿ ಕಾಲೇಜಿನ ಹೆಮ್ಮೆಯ ವಾರ್ಷಿಕ ಉತ್ಸವವಾದ ಟಾಲೆಂಟ್ ಹಂಟ್ 2K26 ಉದ್ಘಾಟನೆ ಕೂಡ ನೆರವೇರಿತು. ಈ ಉತ್ಸವವು ವಿದ್ಯಾರ್ಥಿಗಳ ಅಡಗಿರುವ ಪ್ರತಿಭೆಯನ್ನು ಹೊರತೆಗೆದು ತರುವ ವೇದಿಕೆಯಾಗಿದ್ದು, ಸಾಂಸ್ಕೃತಿಕ ಹಾಗೂ ನಿರ್ವಹಣಾ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಒದಗಿಸುತ್ತದೆ.
ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮನ್ವಯದಿಂದ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. DYSP ಕುಮಾರ್ ಸರ್ ಅವರು ರಸ್ತೆ ನಿಯಮಗಳನ್ನು ಪಾಲಿಸಲು ಸಲಹೆ ನೀಡಿದರು. ಹಾಗೂ ವಾಹನ ಸ್ಟಂಟ್ ಪ್ರದರ್ಶನಗಳನ್ನು ಮೈದಾನದಲ್ಲಿ ಸುರಕ್ಷಿತವಾಗಿ ಮಾಡಬೇಕು ರಸ್ತೆಯಲ್ಲಿ ವೀಲಿಂಗ್ ಮಾಡಬಾರದು, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಚಲಿಸಬಾರದು ಎಂದು ಹಿತ ನುಡಿದರು. ಮುಂದಿನ ದಿನಗಳಲ್ಲಿ ಟಾಲೆಂಟ್ ಹಂಟ್ 2K26 ಕಾರ್ಯಕ್ರಮಗಳು ಇನ್ನಷ್ಟು ವೈವಿಧ್ಯಮಯವಾಗಿ ನಡೆಯಲಿವೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
