ಅವರೆ ಬೇಳೆ ಮೇಳ. ವಸ್ತ್ರಂ ಬೃಹತ್ ಪ್ರದರ್ಶನ ವೀಕ್ಷಿಸಲು ಸಾಗರದಂತೆ ಹರಿದು ಬಂದ ಮಹಿಳೆಯರು

Feb 27, 2026 - 23:37
 0  22
ಅವರೆ ಬೇಳೆ ಮೇಳ. ವಸ್ತ್ರಂ ಬೃಹತ್ ಪ್ರದರ್ಶನ ವೀಕ್ಷಿಸಲು ಸಾಗರದಂತೆ ಹರಿದು ಬಂದ ಮಹಿಳೆಯರು

ಶಾಸಕ ಹೆಚ್.ಟಿ.ಮಂಜು ಅವರ ಧರ್ಮಪತ್ನಿ ರಮಾ ಮಂಜು ಅವರು ಅವರೇಬೇಳೆ ಮೇಳದ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು ಕೆ.ಆರ್.ಪೇಟೆ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಅವರೇ ಬೇಳೆ ಮೇಳವು ನಡೆಯುತ್ತಿರುವುದು ಸಂತೋಷ ತಂದಿದೆ.

ಅವರೇ ಬೆಳೆಯನ್ನು ಬಳಸಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸ್ಥಳದಲ್ಲಿಯೇ ಬಿಸಿ ಬಿಸಿಯಾಗಿ ತಯಾರಿಸಿ ನೀಡಲಾಗುತ್ತಿದೆ, ಹೆಣ್ಣು ಮಕ್ಕಳ ಅವಶ್ಯಕತೆಗಳಿಗೆ ಪೂರಕವಾದ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳು, ಕುರ್ತೀಗಳು , ಚೂಡಿದಾರ್, ಲೆದರ್ ಬ್ಯಾಗ್, ಗೊಂಬೆಗಳು, ಕರಕುಶಲ ಉತ್ಪನ್ನಗಳು, ಪರಿಶುದ್ಧವಾದ ಕೂರ್ಗ್ ಜೇನು, ಸಾವಯವ ಉತ್ಪನ್ನಗಳು ಸೇರಿದಂತೆ ವಸ್ತ್ರಂ ಲೈಫ್ ಸ್ಟೈಲ್ ಪ್ರದರ್ಶನವನ್ನು ಕೂಡ ಏರ್ಪಡಿಸಿರುವುದು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಂತೋಷ ತಂದಿದೆ. 

ಕೃಷ್ಣರಾಜಪೇಟೆ ತಾಲೂಕಿನ ಜನರು ಈ ಮೇಳ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರಿ ರಿಯಾಯಿತಿ ದರದಲ್ಲಿ ದೊರೆಯುತ್ತಿರುವ ಉತ್ಪನ್ನಗಳನ್ನು ಖರೀದಿಸಿ ಸಂಭ್ರಮಿಸಬೇಕು ಎಂದು ರಮಾ ಮಂಜು ಮನವಿ ಮಾಡಿದರು.  

ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನಮ್ಮ ಸುಬ್ಬಣ್ಣ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಾಲಾಶ್ರೀ ಗೌಡ ಪಾಟೀಲ್, ಮಂಡ್ಯ ಜಿಲ್ಲಾ ಪಡಿತರ ವಿತರಕರ ಸಂಘದ ಗೌರವಾಧ್ಯಕ್ಷ ಡಾ.ಅಂಚನಹಳ್ಳಿ ಸುಬ್ಬಣ್ಣ, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ, ಮಹಿಳಾ ಹೋರಾಟಗಾರ್ತಿ ಮತ್ತಿಘಟ್ಟ ಲತಾ, ರಾಜೇಶ್ವರಿ ಪ್ರೇಮಕುಮಾರ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಆಮಿನ ಬಾನು ಕಲೀಲ್ ಅವರೆಬೇಳೆ ಮೇಳ ಹಾಗೂ ಬೃಹತ್ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. 

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456