"ಸಡಗರ ಸಂಭ್ರಮದಿಂದ ಹೊಳಲು ಗ್ರಾಮದ ಗಂಗಾಮತಸ್ಥರ ಕುಲದೇವತೆಯಾದ ಕಾಳಮ್ಮ ದೇವಿ ಹಬ್ಬ"
ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಗಂಗಾಮತಸ್ಥರ ಕುಲದೇವತೆಯಾದ
ಶ್ರೀ ಕಾಳಿಕಾಂಬ ದೇವಿಯ
(ಕಾಳಮ್ಮ ದೇವಿ) ಹಬ್ಬವನ್ನು ಸಡಗರ ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.
ಗುರುವಾರ ರಾತ್ರಿ ದೇವಿಗೆ ತಂಬಿಟ್ಟಿನ ಆರತಿಯೊಂದಿಗೆ ತಮಟೆ ನಗಾರಿಯೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ
ಶ್ರೀ ಕಾಳಮ್ಮ ದೇವಿಯ ದೇವಸ್ಥಾನಕ್ಕೆ ಮಕ್ಕಳು ಮಹಿಳೆಯರು ತೆರಳಿ ಪೂಜೆ ಸಲ್ಲಿಸಲಾಯಿತು.
ಈ ದಿನ ಶುಕ್ರವಾರ ಮಧ್ಯಾಹ ಗ್ರಾಮದ ಶ್ರೀರಾಮ ಮಂದಿರದಿಂದ ಮಕ್ಕಳು ಮಹಿಳೆಯರು ಬಾಯಿ ಬೀಗದೊಂದಿಗೆ ತಮಟೆ ನಗಾರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಖಂಡರು ಎಲ್ಲರೂ ಸೇರಿ ಮೆರವಣಿಗೆ ಮುಖಾಂತರ
ಶ್ರೀ ದೊಡ್ಡಮ್ಮತಾಯಿ ದೇವಸ್ಥಾನ,
ಶ್ರೀ ಬಲಮುರಿ ಗಣಪತಿ ದೇವಸ್ಥಾನ ಪೂಜೆ ಸಲ್ಲಿಸಿ, ಶ್ರೀ ಕಾಳಮ್ಮ ದೇವಿಯ ದೇವಸ್ಥಾನಕ್ಕೆ ಎಲ್ಲರೂ ಹೆಡಿಗೆಯೊಂದಿಗೆ ಮೆರವಣಿಗೆ ಮುಖಾಂತರ ತೆರಳಿ ಗ್ರಾಮದ ಪ್ರತಿಯೊಂದು ಕುಟುಂಬದವರು ದೇವಿಗೆ ಪೂಜೆ ಸಲ್ಲಿಸಿ ಮನೆಯಿಂದ ತಂದಂತಹ ಪೂಜೆ ಸಾಮಗ್ರಿಗಳೊಂದಿಗೆ ಅಲ್ಲೇ ಅಡಿಗೆ ಮಾಡಿ ಅಮ್ಮನಿಗೆ ಅರ್ಪಿಸಲಾಯಿತು.
ಹಬ್ಬದ ಪ್ರಯುಕ್ತ ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು.
ಗ್ರಾಮದ ಗಂಗಾಮತಸ್ಥರ ಮುಖಂಡರಾದ ನಾರಾಯಣಪ್ಪನವರು ಮಾತನಾಡುತ್ತಾ ನಮ್ಮ ಹಿರಿಯರಾದ ರವಳಯ್ಯ, ಬೋರಯ್ಯ , ರಾಮಸಿದ್ದಯ್ಯ, ಕರಿಯಪ್ಪನವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹಿಂದಿನಿಂದಲೂ ಈ ಹಬ್ಬವನ್ನ ಬಹಳ ವಿಜೃಂಭಣೆಯಿಂದ ಮೂರು ವರ್ಷಕ್ಕೊಮ್ಮೆಆಚರಿಸುತ್ತಿದ್ದೇವೆ, ಹೊಳಲು ಗ್ರಾಮಕ್ಕೆ ಹಾಗೂ ಎಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ.
ಈ ಹಬ್ಬದಿಂದ ಗ್ರಾಮಕ್ಕೆ ರೈತರಿಗೆ ಸಮೃದ್ಧಿಯಾಗಲೆಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳೆಯರು ಮಕ್ಕಳು ಮುಖಂಡರು ಗಂಗಾಮತಸ್ಥರ ಕುಲಬಾಂಧವರು ದೇವರ ದರ್ಶನ ಪಡೆದು ಪುನೀತರಾದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
