ಬೇತಮಂಗಲದ ಹಳೇ ಬಡಾವಣೆಯಲ್ಲಿ ಶ್ರೀ ಗಂಗಮ್ಮ ದೇವಿಯ 8ನೇ ವರ್ಷದ ಊರಹಬ್ಬ
ಬೇತಮಂಗಲ: ಇಲ್ಲಿನ ಹಳೇ ಬಡಾವಣೆಯ ಶ್ರೀ ಗಂಗಮ್ಮ ದೇವಿಯ 8ನೇ ವರ್ಷದ ಊರ ಹಬ್ಬವು ಭಕ್ತಿ ಭಾವದಿಂದ ವಿಜೃಂಭಣೆಯಿಂದ ನಡೆಯಿತು. ವರ್ಷಕೊಮ್ಮೆ ನಡೆಯುವ ಗ್ರಾಮ ದೇವತೆಯ ಉತ್ಸವದಲ್ಲಿ ಸಾವಿರಾರು ಭಕ್ತರು ದೇವಿಯ ಕೃಪೆಗೆ ಪಾತ್ರರಾದರು.
ಬೇತಮಂಗಲದ ಹಳೇ ಬಡಾವಣೆಯಲ್ಲಿ ರಾಜ ವಿಕ್ರಮಾದಿತ್ಯ ತಿರುವಯ್ಯಾರ್ ನಿರ್ಮಿಸಿರುವ ಸುಮಾರ 1122 ವರ್ಷಗಳ ಇತಿಹಾಸವುಳ್ಳ ಶ್ರೀ ಗಂಗಮ್ಮ ದೇವಿಯ ಗ್ರಾಮ ಹಬ್ಬವು ಸಡಗರದಿಂದ ಆಚರಿಸಿದರು, ಹಬ್ಬದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಯಂ ಕಾರ್ಯಗಳು ಆರಂಭವಾದವು ದೇವಿಗೆ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು.
ದೀಪಾಲಂಕಾರ: ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಗಂಗಮ್ಮ ದೇವಿಯ ಮೂರ್ತಿ ರೂಪದಲ್ಲಿ ವಿದ್ಯುತ್ ದೀಪಾಲಂಕಾರ ಅಳವಡಿಸಿರುವುದು ಗ್ರಾಮಕ್ಕೆ ಮೆರುಗು ತಂದಿತು.
ದೇವಿಯ ಭವ್ಯ ಮೆರವಣಿಗೆ: ಶ್ರೀ ಗಂಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಮೆರವಣಿಗೆಯುದ್ಧಕ್ಕೂ ತಮಟೆ ವಾದ್ಯ ಅಮ್ಮನ ವೇಷ ಧರಿಸಿ ಕುಣಿದು ಮೆರುಗು ನೀಡಿದವು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
