ಕೊಳವೆಬಾವಿ ದುರಸ್ಥಿಯಲ್ಲಿ ಅವ್ಯವಹಾರ ಶಂಕೆ -ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಎಲ್.ಬಾಬು
ಕೆಜಿಎಫ್:ಮೇ:೬: ನಗರಸಭೆ ವ್ಯಾಪ್ತಿಯ ನಾನ್ ಮೈನಿಂಗ್ ಹಾಗೂ ಮೈನಿಂಗ್ ಭಾಗಗಳಲ್ಲಿರುವ ೩೫ ವಾರ್ಡ್ಗಳಲ್ಲಿ ೫೭೭ ಕೊಳೆವಭಾವಿಗಳು ಸುಸ್ಥಿತಿಯಲ್ಲಿ ಇದ್ದು ಸರಿ ಸುಮಾರು ೮೭ ಕೋಳವೆಬಾವಿಗಳಲ್ಲಿ ನೀರು ಇಲ್ಲದೆ ಬತ್ತಿ ಹೋಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೇಳಲಾಗಿರುವ ಪ್ರಶ್ನೆಗೆ ನಗರಸಭೆ ಅಧಿಕಾರಿಗಳು ಉತ್ತರವನ್ನು ನೀಡಿದ್ದಾರೆ ಆದರೆ ೫೭೭ಕೋಳವೆಬಾವಿಗಳು ಇದ್ದರು ಸಹ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬೃಹುತ್ಕಾರವಾಗಿ ಕಾಡುತ್ತಿದೆ ಏಕೆ ಎಂದು ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಎಲ್.ಬಾಬು ಪ್ರಶ್ನೆ ಮಾಡಿ ಇದರಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಶಂಕೆ ಇದ್ದು ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ನಗರದ ಲೋಕೋಪಯೋಗಿ ಇಲಾಖೆ ಅಥಿತಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಎಲ್.ಬಾಬು ೩೫ ವಾರ್ಡ್ಗಳಲ್ಲಿನ ಕೋಳವೆಬಾವಿಗಳ ದುರಸ್ಥಿಗಾಗಿ ಪ್ರತಿ ತಿಂಗಳು ಸರಿ ಸುಮಾರು ೭ ರಿಂದ ೮ ಲಕ್ಷ ಹಣವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗುತ್ತಿದೆ ಆದರು ಸಹ ವಾರ್ಡ್ಗಳಲ್ಲಿರುವ ಕೊಳವೆಬಾವಿಗಳ ದುರಸ್ಥಿ ಕೆಲಸ ಮಾತ್ರ ನಡೆಯುತ್ತಿಲ್ಲ ದುರಸ್ತಿ ಮಾಡುವ ಸಂದರ್ಭದಲ್ಲಿ ಎಷ್ಟು ಪೈಪ್ಗಳನ್ನು ಬಿಡಲಾಗುತ್ತದೆ ಎಷ್ಟು ಪೈಪ್ಗಳನ್ನು ದುರಸ್ಥಿಪಡಿಸಿ ಅಳವಡಿಸಲಾಗುತ್ತದೆ ಎಂಬುದರ ಬಗ್ಗೆ ಇಂಜಿನೀಯರ್ಗಳು ಸ್ಥಳ ಪರಿಶೀಲನೆ ನಡೆಸುವುದೇ ಇಲ್ಲ ಅಷ್ಟರಮಟ್ಟಿಗೆ ನಗರಸಭೆ ಹದಗೆಟ್ಟಿದ್ದು ಶೀಘ್ರದಲ್ಲೇ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಮತ್ತು ಲೋಕಾಯುಕ್ತ ಅಧಿಕಾರಿಗಳು ನಗರಸಭೆಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಚಿತ್ರ:೦೨: ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಎಲ್.ಬಾಬು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
