ಶಿಕ್ಷಕರು ನಾವೆಲ್ಲ ಒಂದೇ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ನೂತನ ಅಧ್ಯಕ್ಷ ನಾರಾಯಣಸ್ವಾಮಿ 

May 6, 2026 - 16:45
 0  1
ಶಿಕ್ಷಕರು ನಾವೆಲ್ಲ ಒಂದೇ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ನೂತನ ಅಧ್ಯಕ್ಷ ನಾರಾಯಣಸ್ವಾಮಿ 

       ಕೆಜಿಎಫ್: ಶಿಕ್ಷಕರು ನಾವೆಲ್ಲಾ ಒಂದೇ. ನಮ್ಮಲ್ಲಿ ಯಾವುದೇ ಭೇದಭಾವ ಹಾಗೂ ಭಿನ್ನಾಭಿಪ್ರಾಯಗಳು ಇಲ್ಲ. ಶಿಕ್ಷಕರಿಗೆ ಯಾವುದೇ ಕಷ್ಟ ಬಂದರೂ ನಮ್ಮ ಸಂಘ ಮುಂಚೂಣಿಯಲ್ಲಿದ್ದು ಅವರ ಕಷ್ಟಗಳಲ್ಲಿ ಭಾಗಿಯಾಗುತ್ತೇವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು. 

ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಲ್. ನರಸಿಂಹಮೂರ್ತಿ ನೂತನ ತಂಡಕ್ಕೆ ಶುಭ ಕೋರಿ ಮಾತನಾಡುತ್ತಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ದೊಡ್ಡ ಸಂಘಟನೆಯಾಗಿದ್ದು, ಯಾವುದೇ ಚುನಾವಣೆ ಇಲ್ಲದೆ ಕೆ.ಜಿ.ಎಫ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  ಅವಿರೋಧವಾಗಿ  ಒಮ್ಮತದಿಂದ ಸದಸ್ಯರ ಹಾಗೂ ಪದಾಧಿಕಾರಿಗಳ ಆಯ್ಕೆಯಾದದ್ದು ಒಂದು ಇತಿಹಾಸ ಎಂದು ತಿಳಿಸಿದರು. ಐದು ವರ್ಷಗಳ ಅವಧಿಯಲ್ಲಿ ಎರಡುವರೆ ವರ್ಷಗಳ ಕಾಲ  ನಾರಾಯಣಸ್ವಾಮಿ   ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಳಿದ ಅವಧಿಗೆ ಮತ್ತೋರ್ವ ಕ್ರಿಯಾಶೀಲ ಸದಸ್ಯರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಈಗಾಗಲೇ ಎಲ್ಲರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ. ಎಲ್ಲರೂ ಒಂದಾಗಿದ್ದರೆ ಏನು ಬೇಕಾದರೂ ಸಾಧನೆ  ಮಾಡಲು ಸಾಧ್ಯ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ. ಇದರಲ್ಲಿ ಪ್ರಮುಖ ಪಾತ್ರ ವಹಿಸಿ ನಮಗೆ ಮಾರ್ಗದರ್ಶನ ನೀಡಿದ ನಮ್ಮ ಕ್ಷೇತ್ರದ ಶಾಸಕರಾದ ಡಾ.ರೂಪಕಲಾ ಶಶಿಧರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು

 

ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಪಿ.ವಿ. ಶ್ರೀನಿವಾಸ್ ಮಾತನಾಡಿ ಶಿಕ್ಷಕರ ಸೇವೆ ಮಾಡಲು ನಾವು ಸದಾ ಸಿದ್ಧ ಎಂದು ನುಡಿದರು.
 
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಕೆ. ಶ್ರೀನಿವಾಸ್,  ತ್ಯಾಗರಾಜ್, ಭಾರತಿ, ಛಾಯಾದೇವಿ, ನಾಗವೇಣಿ, ಜಿ.ಶ್ರೀನಿವಾಸಮೂರ್ತಿ, ನೌಕರರ ಸಂಘದ ಎಸ್.ಕೃಷ್ಣಮೂರ್ತಿ, ರವಿಚಂದ್ರನ್ ನಾಯ್ಡು, ವಿವಿಧ ವೃಂದ ಸಂಘಗಳ ಅಧ್ಯಕ್ಷರಾದ ಮಾಲತೇಶ್, ಡಾ. ಬಾಬು, ಅಶ್ವಥ್, ಗಂಗಾಧರ್, ಸುಬ್ರಮಣಿ, ಅಂಬಿಕಾ, ಮಲ್ಲಿಗ, ಆನಂದ ಕುಮಾರ್ ಎಲ್ಐಸಿ ಶ್ರೀನಿವಾಸ್ ದವಣೇಶ್,ಕೆ ವಿ ಆನಂದ್, ಕೃಷ್ಣಪ್ಪ, ನಾರಾಯಣಸ್ವಾಮಿ ಇತರೆ ಶಿಕ್ಷಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456