ನೂರು ಮಕ್ಕಳ ನಡಿಗೆ ಬುದ್ಧ ಮಾರ್ಗದ ಕಡೆಗೆ ಎನ್ನುವ ಧ್ಯೇಯದೊಂದಿಗೆ ಕಾರ್ಯಕ್ರಮ
ಬೆಂಗಳೂರಿನ ಲೋಕರತ್ನ ಬುದ್ಧ ವಿಹಾರ ಸ್ಪೂರ್ತಿಧಾಮದಲ್ಲಿ ವೈಶಾಖ ಬುದ್ಧ ಪೂರ್ಣಿಮೆಯ ದಿನದಂದು, ನೂರು ಮಕ್ಕಳ ನಡಿಗೆ ಬುದ್ಧ ಮಾರ್ಗದ ಕಡೆಗೆ ಎನ್ನುವ ಧ್ಯೇಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಸ್ಪೂರ್ತಿಧಾಮದ ಸಂಸ್ಥಾಪಕರು ಹಾಗೂ ಐಪಿಎಸ್ ನಿವೃತ್ತ ಅಧಿಕಾರಿಗಳಾದಂತಹ ಶ್ರೀಯುತ ಎಸ್ ಮರಿಸ್ವಾಮಿ ರವರು ನೆರವೇರಿಸಿಕೊಟ್ಟರು. ಬುದ್ಧ ಜಗತ್ತಿಗೆ ಶಾಂತಿಯನ್ನು ನೀಡಿದ ವ್ಯಕ್ತಿಯಾಗಿದ್ದು, ಬುದ್ಧನ ನೆಲದಲ್ಲಿ ಈಗ ನಾವುಗಳು ಯುದ್ಧದ ಭೀತಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ, ಬುದ್ಧನ ತತ್ವಗಳನ್ನು ಎಲ್ಲರೂ ಅರಿತುಕೊಂಡರೆ ಶಾಂತಿ ಸಹನೆ ಎಲ್ಲವೂ ತಾನಾಗಿಯೇ ದೊರಕುತ್ತದೆ. ದೇಶದಲ್ಲಿ ಅಭಿವೃದ್ಧಿಯ ಕೆಲಸಗಳು ತನ್ನಷ್ಟಕ್ಕೆ ತಾನೇ ಮುಂದುವರಿಯುತ್ತವೆ. ಮೂಢನಂಬಿಕೆ ಮತ್ತು ಕಂದಾಚಾರಗಳ ಅವೈಜ್ಞಾನಿಕ ವ್ಯವಸ್ಥೆಯಿಂದ ನಾವುಗಳೆಲ್ಲರೂ ಹೊರಗಡೆ ಬಂದರೆ, ವಿಜ್ಞಾನದ ಹಾದಿ ತಾನಾಗಿಯೇ ಗೋಚರಿಸುತ್ತದೆ ಎಂದು ಹೇಳಿದರು. ಎಲ್ಲರೂ ಬುದ್ಧ ಮಾರ್ಗದಲ್ಲಿ ನಡೆಯೋಣ, ಬುದ್ಧರ ತತ್ವಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಬೆನ್ನೆಲುಬಾಗಿದ್ದ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ಶ್ರೀಯುತ ಶಿವಶಂಕರಯ್ಯನವರು ಇಂದಿನ ವಿಶೇಷ ದಿನದ ಉಸ್ತುವಾರಿಯನ್ನು ವಹಿಸಿಕೊಂಡಿದ್ದು ಅಚ್ಚುಕಟ್ಟಾಗಿ ನೆರವೇರಿಕೊಟ್ಟರು. ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಪುಟಾಣಿ ಮಕ್ಕಳು ಬುದ್ಧನ ವೇಷದಾರಿಗಳಾಗಿ ಬೋಧಿಸತ್ವದ ಧ್ಯಾನದಲ್ಲಿ ತೊಡಗಿಸಿಕೊಂಡರು. ಪೋಷಕರು ಬುದ್ಧನ ಪ್ರತಿರೂಪವನ್ನು ತನ್ನ ಮಕ್ಕಳ ವೇಷದಲ್ಲಿ ನೋಡುತ್ತಾ ಬುದ್ದದಮ್ಮಕ್ಕೆ, ಬೋಧಿಸತ್ವಕ್ಕೆ ನಮಸ್ಕರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
