ಸಾಮಾಜಿಕ ರಾಜಕೀಯವಾಗಿ ಪ್ರಭಲರಾಗಲು ಸಂವಿಧಾನ ಕಾರಣ :ಪಿಎಸ್ ಐ ಮೋಹನ್ ಕುಮಾರ್
ಸಂತೆಮರಹಳ್ಳಿ: ಸಮೀಪದ ಕಮರವಾಡಿ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಸಂಘದ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಈ ವೇಳೆಯಲ್ಲಿ ಸಂತೆಮರಹಳ್ಳಿ ಪಿ ಎಸ್ ಐ ಮೋಹನ್ ಕುಮಾರ್ ಮಾತನಾಡಿ ವಿಶ್ವದಲ್ಲಿ ಅತ್ಯುತ್ತಮ ಸಂವಿಧಾನ ಪಡೆದುಕೊಟ್ಟ ಮಹಾನ್ ಚೇತನ ಡಾ ಬಿ ಆರ್ ಅಂಬೇಡ್ಕರ್ ಎಂದರು.ಪ್ರಪಂಚದಲ್ಲಿ ಅತ್ಯುತ್ತಮ ಸಂವಿಧಾನ ಇರುವುದು ಹೆಮ್ಮೆಯ ವಿಷಯ, ಇಂದಿಗೂ ಸಂವಿಧಾನದ ಅಡಿಯಲ್ಲಿ ಭಾರತದ 145 ಜನಸಂಖ್ಯೆ ಜೀವನ ನಡೆಸುವುದಕ್ಕೆ ಕಾರಣ ಡಾ ಬಿ ಆರ್ ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನವೆ ಕಾರಣ, ನಾವು ಸಾಮಾಜಿಕ, ರಾಜಕೀಯವಾಗಿ ಪ್ರಬಲರಾಗಿರಲು ಸಂವಿಧಾನವೆ ಮೂಲ ಕಾರಣ ಎಂದು ಮರೆಯಬಾರದು ಎಂದು ತಿಳಿಸಿದರು.
ನಂತರ ಶಿಕ್ಷಕರಾದ ರಾಜಪ್ಪ ಮೌರ್ಯ ಮಾತನಾಡಿ ಪುಸ್ತಕಗಳನ್ನು ಅನುಸರಣೆ ಮಾಡಿ ನಾವು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವುದರ ಮೂಲಕ ದೇಶದ ಪ್ರಗತಿ ಸಾಧ್ಯ ಎಂದರು.
ಪ್ರಪಂಚದ 195 ದೇಶಗಳು ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಾರೆ ಆದರೆ ನಮ್ಮ ದೇಶದಲ್ಲಿ ಒಂದು ಜಾತಿಗೆ ಸೀಮಿತ ಮಾಡಿರುವುದು ನೋವಿನ ವಿಚಾರ ಎಂದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಅಂದೇ ಜಾತಿ ಪದ್ಧತಿ ನಾಶ ಮಾಡಬೇಕೆಂಬ ಕೂಗು ಕೇಳಿ ಬಂದಿತು ಆದರೆ ಅವರನ್ನು ಒಂದು ಜಾತಿಗೆ ಸೀಮಿತ ಮಾಡಿರುವುದು ಸಹ ನೋವಿನ ಸಂಗತಿ ಇಂತಹ ಎಷ್ಟೋ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತ ಮಾಡಿರುವುದು ದುಃಖದ ಸಂಗತಿ ಎಂದರು.
1949 ರಲ್ಲಿ ಹಿಂದೂ ಬಿಲ್ ಕೋಡ್ ಮಸೂದೆಯನ್ನು ಮಂಡಿಸಿ ಮಹಿಳೆಯಾರ ವಿಮೋಚನೆಗೆ ಹೋರಾಡಿದ ಮಹಾನ್ ಚೇತನ್ ಡಾ ಬಿ ಆರ್ ಅಂಬೇಡ್ಕರ್, ಶಿಕ್ಷಣದಿಂದ ಸಮಾಜವನ್ನು ಕಟ್ಟುವಂತ ಕೆಲಸವನ್ನು ಮಾಡುವತ್ತ ಜನತೆ ಸಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡರಾದ ಬಸವರಾಜ್, ಮಹಾದೇವಯ್ಯ, ಶಿವಣ್ಣ, ನಾಗರಾಜ್, ಹಾಗೂ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
