ದಿವಂಗತ ಪ್ರೊಫೆಸರ್ ನಂಜುಂಡಸ್ವಾಮಿಯವರ 90 ನೇ ಹುಟ್ಟುಹಬ್ಬ ಆಚರಣೆ
ಸಂತೆಮರಹಳ್ಳಿ: ಇಲ್ಲಿನ ರೈತ ಸಂಘದ ಕಛೇರಿಯಲ್ಲಿ ದಿವಂಗತ ಪ್ರೊ ನಂಜುಂಡಸ್ವಾಮಿಯವರ 90 ನೇ ಜನ್ಮ ದಿನ ಆಚರಣೆಯನ್ನು ಆಚರಿಸಲಾಯಿತು.ಈ ವೇಳೆಯಲ್ಲಿ ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಣ್ಣ ಮಾತನಾಡಿ ಪ್ರೊ ನಂಜುಂಡಸ್ವಾಮಿಯವರು ರೈತರ ಪರ ನಿಂತು ಹಲವಾರು ಚಳುವಳಿಗಳಲ್ಲಿ ಭಾಗವಹಿಸಿ ರೈತ ಸಂಘಕ್ಕೆ ಆಧಾರವಾಗಿ ನಿಂತು ತನು ಮನ ಎಲ್ಲವನ್ನು ನೀಡಿರುವ ಅದ್ಬುತ ವ್ಯಕ್ತಿ ಎಂದರೆ ತಪ್ಪಾಗಲಾರದು.
ಇಂದಿಗೂ ಹಲವಾರು ರೈತ ಸಂಘಟನೆಗಳಿಗೆ ಮಾದರಿಯಾಗಿದೆ, ಕರ್ನಾಟಕದಲ್ಲಿ ರೈತರ ಕೂಗಿಗೆ ಸ್ಪಂದನೆ ಮಾಡಿದಂತ ಏಕೈಕ ರೈತ ಮುಖಂಡ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೋಕು ರೈತ ಸಂಘದ ಅಧ್ಯಕ್ಷ ಹೆಗ್ಗವಾಡಿಪುರ ಮಹದೇವ್ ಸ್ವಾಮಿ,ರೈತ ಮುಖಂಡರಾದ ಪುಟ್ಟೇಗೌಡ, ಶಿವ ಮೂರ್ತಿ, ವೀರನಪುರ ನಾಗಪ್ಪ, ಅಶೋಕ ಮಹೇಶ್, ರೇಚಣ್ಣ, ಸಿದ್ದಾ ಶೆಟ್ಟಿ ಭಾಗವಹಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
