ವಿಜೃಂಭಣೆಯಿಂದ ಜರುಗಿದ ಊರುಕಾತೇಶ್ವರಿ, ತೆಳ್ಳನೂರು ದೇವಿ, ಶಂಭುಲಿಂಗೇಶ್ವರ ಕೊಂಡೋತ್ಸವ
ಸಂತೆಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದ ಗ್ರಾಮ ದೇವತೆಯಾದ ಉರುಕಾತೇಶ್ವರಿ ಹಾಗೂ ಶಂಭುಲಿಂಗೇಶ್ವರ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಪ್ರತಿವರ್ಷದ ಮಾರ್ಚ್ ತಿಂಗಳ ಲ್ಲಿ ನಡಿಯುವ ಕೊಂಡೋತ್ಸವ ಬಹಳ ವಿಶೇಷತೆಯಿಂದ ನಡೆಯುವ ಪ್ರಮುಖ ಗ್ರಾಮ ದೇವತೆ ಹಬ್ಬವಾಗಿದೆ.
ಗ್ರಾಮದ ಗ್ರಾಮಸ್ಥರು ಜಾತಿ ಬೇಧ ಮರೆತು ಮಾಡುವ ವರ್ಷದ ಕೊನೆಯಲ್ಲಿ ಮಾಡುವ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು.
ಗ್ರಾಮದ ಬೀದಿ ಬೀದಿಗಳಲ್ಲೂ ಮಹಿಳೆಯರು ರಂಗೋಲಿ ಇಟ್ಟು ದೇವರ ದರ್ಶನ ಮಾಡುವುದರ ಮುಕಾಂತರ ಹಬ್ಬಕ್ಕೆ ಮೆರಗು ನೀಡುತ್ತಾರೆ.
ಬೆಳಿಗ್ಗೆ 6 ಗಂಟೆಗೆ ಶಿವಲಿಂಗೇಶ್ವರ ಅರ್ಚಕರ ಮನೆ ಮುಂದೆ ಭಕ್ತರ ಜಮಾಯಿಸಿ ಸತ್ತಿಗೆ ಸುರಪಾನಿ , ವಾದ್ಯ, ತಮಟೆ ಜೊತೆ ಹೊರಟು ಉರುಕಾತೇಶ್ವರಿ ದೇವಾಲಯಕ್ಕೆ ತೆರಳಿ ಭದಿಗಳು ಕೂಗುತ್ತಾ ಅಲ್ಲಿನ ಅರ್ಚಕರನ್ನು ಪ್ರೇರೇಪಿಸುವುದು ಬಹಳ ವಿಶೇಷವಾಗಿದೆ.
ನಂತರ ಅಲ್ಲಿನ ತೆಳ್ಳನೂರು ದೇವಾಲಯ ಅರ್ಚಕರು ಗ್ರಾಮದ ಯಲ್ಲಗೆ ಸೇರಿರುವ ಮರವನ್ನು ಓಡಿ ಹೋಗಿ ತಬ್ಬಿ ಕೊಳ್ಳುವುದರಿಂದ ಆ ಮರವನ್ನು ಗ್ರಾಮಸ್ಥರು ಜೊತೆ ಒಗ್ಗೂಡಿ ಅಂದೆ ಕಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸಾಗಿ ಊರುಕಾತೇಶ್ವರಿ ದೇವಾಲಯಕ್ಕೆ ತರಳಿ ಇದೆ ದಿನ ಮರಕ್ಕೆ ಬೆಂಕಿ ಹಾಕಿ ಕೆಂಡ ಮಾಡಿ ಕೆಂಡದ ರಾಶಿ ಮಾಡುತ್ತಾರೆ.
ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಕಾಂತರ ಊರುಕಾತೇಶ್ವರಿ ದೇವಾಲಯದಕ್ಕೆ ತೆರಳಿ, ದೇವಾಲಯ ಮುಂದೆ ರಾಶಿಯಾಗಿರು ಕೆಂಡದ ರಾಶಿಯನ್ನು ಕೊಳಗೆಯಲ್ಲಿ ಎರಡು ಕೈ ಗಳಿಂದ ತುಂಬಿ ಮೈ ಮೇಲೆ ಹಾಕಿ ಕೊಳ್ಳುವುದನ್ನು ನೋಡಲು ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ಅಕ್ಕ ಪಕ್ಕದ ಗ್ರಾಮಗಳಾದ ಬಾನಹಳ್ಳಿ, ಮೂಗೂರು ಅಲಹಳ್ಳಿ, ಕಮರವಾಡಿ ಸಂತೆಮರಹಳ್ಳಿ ಬಸವಟ್ಟಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಭಕ್ತರು ಸೇರಿ ದೇವರ ದರ್ಶನ ಪಡೆಯುತ್ತಾರೆ.
ಬಂದಿರುವಂತಹ ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
