ಕಾಂಪೌಂಡ್ ಗೆ ರಿಫ್ಲಕ್ಷನ್ ಕನ್ನಡಿ ಅಳವಡಿಕೆ ಅವೈಜ್ಞಾನಿಕ ಪ್ಲಾನ್- ತೇಜಸ್ವಿ ಆರೋಪ

May 9, 2026 - 14:01
 0  2
ಕಾಂಪೌಂಡ್ ಗೆ ರಿಫ್ಲಕ್ಷನ್ ಕನ್ನಡಿ ಅಳವಡಿಕೆ ಅವೈಜ್ಞಾನಿಕ ಪ್ಲಾನ್- ತೇಜಸ್ವಿ ಆರೋಪ

      ಮೈಸೂರು: ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಇರುವ ಕಾಂಪೌಂಡ್ ಗೆ ಮೈಸೂರು ನಗರ ಪಾಲಿಕೆ ರಿಫ್ಲಕ್ಷನ್ ಕನ್ನಡಿ ಅಳವಡಿಕೆ ಮಾಡಿರುವುದು ನೋಡಲು ಆಕರ್ಷಣೆ, ಆದರೆ ಇದನ್ನು ನಿರ್ವಹಣೆ ಮಾಡುವುದು ಕಷ್ಟ ಇದು
ಅವೈಜ್ಞಾನಿಕ ಯೋಜನೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ.

80 ಮೀಟರ್ ಕಾಂಪೌಂಡ್ ಗೆ ರಿಫ್ಲಕ್ಷನ್ ಕನ್ನಡಿ ಅಳವಡಿಸಿದ್ದಾರೆ ಸುಮಾರು 9ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ,ಆದರೆ ಈ ಪ್ರದೇಶದಲ್ಲಿ ರಾತ್ರಿಯಾದರೆ ಅನೈತಿಕ ಚಟುವಟಿಕೆಗಳು ಕುಡುಕರ ಹಾವಳಿ ಹೆಚ್ಚಾಗಿರುತ್ತದೆ, ಕುಡಿದ ಅಮಲಿನಲ್ಲಿ ಈ ರಿಫ್ಲೆಕ್ಷನ್ ಕನ್ನಡಿಯನ್ನು ಧ್ವಂಸ ಮಾಡಿದರೆ ಅಚ್ಚರಿಯಿಲ್ಲ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಈರೀತಿ ಅವೈಜ್ಞಾನಿಕ ಯೋಜನೆಯಿಂದ ಫೋಲಾಗುತ್ತಿರುವುದು ದುರಂತದ ಸಂಗತಿ ಎಂದಿದ್ದಾರೆ.

ಮೈಸೂರಿನ ಮತ್ಯಾವುದೇ ಭಾಗದಲ್ಲಿ ಈ ರೀತಿಯ ಅವೈಜ್ಞಾನಿಕ ಯೋಜನೆಗಳನ್ನು ಮಾಡದಂತೆ ತೇಜಸ್ವಿ ನಾಗಲಿಂಗಸ್ವಾಮಿ ಮೈಸೂರು ನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456