ನಶೆ ಮುಕ್ತ ಮೈಸೂರು ನಿರ್ಮಾಣದತ್ತ ಪೊಲೀಸರ ನಡೆ :- ತೇಜಸ್ವಿ ನಾಗಲಿಂಗಸ್ವಾಮಿ ಅಭಿನಂದನೆ
ಮೈಸೂರು: ನಶೆ ಮುಕ್ತ ಮೈಸೂರು ನಿರ್ಮಾಣದತ್ತ ಪೊಲೀಸರ ನಡೆ ಅಭಿನಂದನೀಯ ಎಂದು ಯುವ ನಾಯಕ ತೇಜಸ್ವಿ ನಾಗಲಿಂಗಸ್ವಾಮಿ ತಿಳಿದಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಮೈಸೂರಿನ ಕೆಲ ಭಾಗಗಳಲ್ಲಿ ಮಾದಕ ದ್ರವ್ಯ ಹೆಚ್ಚು ಮಾರಾಟ, ಸೇವನೆ ಮತ್ತು ಉತ್ಪಾದನಾ ಘಟಕಗಳನ್ನು ತೆರೆದಿರುವುದರ ವಿರುದ್ಧ ಕನ್ನಡ ಕ್ರಾಂತಿದಳ ಸಂಘಟನೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಶೆ ಮುಕ್ತ ಮೈಸೂರು ನಿರ್ಮಾಣ ಮಾಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಾಗಿತ್ತು.
ಇದಾದ ನಂತರ ಪೋಲಿಸ್ ಇಲಾಖೆಯು ನಿರಂತರ ಕಾರ್ಯಾಚರಣೆ ಮಾಡುತ್ತಾ ಬಂದು ಮಾದಕ ವಸ್ತುಗಳ ದಂಧೆ ಕೋರರನ್ನು ಮಟ್ಟಹಾಕುವ ಮೂಲಕ ಮೈಸೂರು ನಗರವನ್ನು ನಶೆ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ನಗರ ಪೋಲಿಸ್ ಇಲಾಖೆಯು ನಿರಂತರ ಕಾರ್ಯಾಚರಣೆ ಮಾಡುವ ಮೂಲಕ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮೈಸೂರು ಪೋಲಿಸ್ ಆಯ್ತರಾದ ಸಿಮಾ ಲಾಟ್ಕರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡ ಹೋರಾಟಗಾರರು ಮಾದಕ ವಸ್ತುಗಳ ನಿರ್ಮೂಲನೆಯ ವಿಷಯದಲ್ಲಿ ಸದಾ ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸುವುದಾಗಿ ತೇಜಸ್ವಿ ತಿಳಿಸಿದ್ದಾರೆ.
ಹಗಲು ರಾತ್ರಿ ಎನ್ನದೆ ನಿರಂತರ ಕಾರ್ಯಾಚರಣೆ ಮಾಡುತ್ತಿರುವ ಮೈಸೂರಿನ
ಪೋಲಿಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತೇಜಸ್ವಿ ನಾಗಲಿಂಗ ಸ್ವಾಮಿ ಅಭಿನಂದಿಸಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
