ಸಾವಯವ ಕೃಷಿ, ಸಾವಿಲ್ಲದ ಕೃಷಿ :ಮಹಾರಾಷ್ಟ್ರದ ಕೃಷಿ ತಜ್ಞ ಶಾಂತಿನಾಥ ಮೊಳೆ

Mar 6, 2026 - 20:15
Mar 6, 2026 - 20:16
 0  6
ಸಾವಯವ ಕೃಷಿ, ಸಾವಿಲ್ಲದ ಕೃಷಿ :ಮಹಾರಾಷ್ಟ್ರದ ಕೃಷಿ ತಜ್ಞ ಶಾಂತಿನಾಥ ಮೊಳೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಹಾವೇರಿ :-ಅತಿಯಾದ ರಾಸಾಯನ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಇಳುವರಿ ಕಡಿಮೆಯಾಗುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆಯೂ ದುಸ್ಪರಿಣಾಮ ಬೀರುತ್ತಿದೆ. ಆದ್ದರಿಂದ ರೈತರು ರಾಸಾಯನಿಕ ಕೃಷಿ ನಿಲ್ಲಿಸಿ,, ಭೂಮಿಯ ಉಳಿಸಿ, ಸಾವಿಲ್ಲದ, ಸಾವಯವ ಕೃಷಿ ಮಾಡಲು ಮುಂದಾಗಬೇಕೆಂದು ಮಹಾರಾಷ್ಟದ ಪುಣೆಯ ಕೃಷಿ ತಜ್ಞ ಶಾಂತಿನಾಥ ಮೊಳೆ ಹೇಳಿದರು. 

        ಜಿಲ್ಲೆಯ ಸವಣೂರ ತಾಲೂಕಿನ ಇಚ್ಚoಗಿ ಗ್ರಾಮದ ಯುವ ಪ್ರಗತಿಪರ ಕೃಷಿಕ ಶ್ರೀಕಾಂತ ವೀರಭದ್ರಪ್ಪ ಕಳಸದ ಅವರ ರೇಷ್ಮೆ ತೋಟದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾವೇರಿ ಹಾಗೂ ವೇದಾಂತ ಸಂಸ್ಥೆ ಆಯೋಜಿಸಿದ್ದ ರೇಷ್ಮೆ ಬೆಲೆಗಾರರ "ರೈತ ಜಾಗೃತಿ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು ತಮ್ಮ ಭೂಮಿಗೆ ಕೊಟ್ಟಿಗೆ, ಕುರಿ-ಕೋಳಿ ಗೊಬ್ಬರ ಹಾಗೂ ಭೂಮಿಯ ಫಲವತ್ತತೆ ಹೆಚ್ಚಿಸಿ, ರೋಗ ಮತ್ತು ಕೀಟಗಳಿಂದ ಮುಕ್ತ ಮಾಡುವ ಶುದ್ಧ ಸಿಲಿಕಾನ್ ಅಂಶ ಇರುವ, ಆಗ್ರೋಸಿಲ್ ಹಾಗೂ ಆದಿಕ ಕಾರ್ಬನ್ ಇಂಗಾಲ್ ಇರುವ ಕಾರ್ಬೋಸಿಲ್ ಭೂಮಿಗೆ ಹಾಕುವ ಮೂಲಕ ರಾಸಾಯನ ಮುಕ್ತ ಹಾಗೂ ಅನಾರೋಗ್ಯ ಮುಕ್ತ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದ ಅವರು ಸಿಲಿಕಾನ್ ಮಹತ್ವ ಕುರಿತು ಸವಿಸ್ತಾರವಾಗಿ ಮಾತನಾಡಿದರು.

      ಸಾವಯವ ಕೃಷಿ ತಜ್ಞ ಶೇಖರಗೌಡ ಪಾಟೀಲ ಮಾತನಾಡಿ ರೈತ ಮಣ್ಣಿಗಿಳಿದು ಕೃಷಿ ಕಾಯಕ ಮಾಡಿದರೆ ಮಾತ್ರ ಜಗತ್ತಿನ ಇತರ ವೃತ್ತಿಗಳು ಮತ್ತು ದೇಶದ ಅಭಿರುದ್ದಿ ಸುಗಮವಾಗಿ ಸಾಗಲು ಸಾಧ್ಯ ಆದ್ದರಿಂದ ರೈತರು ರೇಷ್ಮೆ ಬೆಳೆ ಜೊತೆ ಕೃಷಿ ಉಪಕಸುಬಗಳಾದ ಹೈನುಗಾರಿಗೆ, ಕುರಿಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಭದ್ರರಾಗಬೇಕು ಎಂದರು.

            ರೇಷ್ಮೆ ಕೃಷಿಕ ಶ್ರೀಕಾಂತ ವೀರಭದ್ರಪ್ಪ ಕಳಸದ ಮಾತನಾಡಿ ರಾಸಾಯನಿಕ ಬಳಕೆಯಿಂದ ರೋಗಬಾದೆ ಹೆಚ್ಚಾಗಿ ಬೆಳೆ ನಾಶ ಮಾಡುವ ಹಂತದಲ್ಲಿತ್ತು. ಆಗ ಸಾವಯವ ಕೃಷಿ ಪದ್ಧತಿ ಅನುಸರಿಸಿ ಗಂಗಯ್ಯ ಕುಲಕರ್ಣಿಯವರ ಸಲಹೆ ಮೇರೆಗೆ ಬೇವಿನ ಹಿಂಡಿ, ವೇದಾಂತ ಉತ್ಪನ್ನಗಳಾದ ಸಿಲಿಕಾನ್ (ಆಗ್ರೋಸಿಲ್ )ಕಾರ್ಬೋಸಿಲ್, ಮೈಕ್ರೋಸಿಲ್, ಗ್ರೀನ್ಸಿಲ್ -98,ಇತ್ಯಾದಿ ಉತ್ಪನ್ನಗಳನ್ನು ಉಪಯೋಗಿಸಿ ಗುಣಮಟ್ಟದ ಆದಿಕ ಇಳುವರಿ ಪಡೆದು ಸಂತಸದಲ್ಲಿದ್ದೇನೆ ಅದಕ್ಕಾಗಿ ಎಲ್ಲ ರೈತರು ಇವುಗಳನ್ನು ಉಪಯೋಗಿಸಿ ಎಂದರು.

             ಕೃಷಿ ಸಲಹೆಗಾರ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಭಾರತದಲ್ಲಿ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಇತ್ತೀಚಿನ ಅಂಕಿ -ಅಂಶದ ಪ್ರಕಾರ 1.3ಲಕ್ಷ ಹೇಕ್ಟರಕ್ಕೂ ಆದಿಕ ರೇಷ್ಮೆ ಬೆಳೆ ಇದ್ದು ಒಂದು ಲಕ್ಷಕ್ಕೂ ಅದಿಕ ಕುಟುಂಬಗಳೂ ರೇಷ್ಮೆ ಕೃಷಿಯನ್ನೇ ಅವಲಂಬಿಸಿವೆ. ಅದರಂತೆ ಯಾಲಕ್ಕಿ ನಾಡು ಹಾವೇರಿ ಜಿಲ್ಲೆ ಕೂಡಾ ಉತ್ತರಕರ್ನಾಟಕ ಜಿಲ್ಲೆಗಳಲ್ಲಿಯೇ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು. 3.500 ಹೆಕ್ಕಟೆರು ಇದ್ದು 250ಕ್ಕೂ ಅದಿಕ ಕುಟುಂಬಗಳು ರೇಷ್ಮೆ ಕೃಷಿಯನ್ನೇ ಅವಲಂಬಿಸಿವೆ ಆದ್ದರಿಂದ ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ರೇಷ್ಮೆ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಮುಂದಾಗಬೇಕು ಎಂದರು.

         ಎಲ್ಲ ರೈತರು ಹುಲೂಸಾಗಿ ಬೆಳೆದ ರೇಷ್ಮೆ ಬೆಳೆ ನೋಡಿ ಸಂತಸಪಟ್ಟರು. ಹಾವೇರಿ, ಗದಗ, ಧಾರವಾಡ, ಕೊಪ್ಪಳ ಬೆಳಗಾವ ಇತ್ಯಾದಿ ಜಿಲ್ಲೆಗಳ ರೇಷ್ಮೆ ಬೆಲೆಗಾರರು ಆಗಮಿಸಿದ್ದರು.

         ರೈತ ಶ್ರೀಕಾಂತ, ಮಾಜಿ ಯೋಧ ಈಶ್ವರ ಇಟಗಿ, ಕೃಷಿ ತಜ್ಞ ಶಾಂತಿನಾಥ ಮೊಳೆ ಅವರನ್ನು ಸನ್ಮಾನಿಸಲಾಯಿತು. ಔಸದಿ ವಿತರಕರಾದ ಹೊಸರಿತ್ತಿಯ ಗುದ್ದಲಿಶ್ವರ ಆಗ್ರೋ ಮಾಲೀಕರಾದ ಕೊಟ್ರಯ್ಯ ಹಾವೇರಿಮಠ, ಬ್ಯಾಡಗಿಯ ಶ್ರೀ ಗುರು ಆಗ್ರೋ ಸೆಂಟರ ಮಾಲೀಕರಾದ ಉಮೇಶ ಕುಲಕರ್ಣಿ, ಮಂಜು ಡೋಣಿ, ಮೌನೇಶ ಮುಂತಾದವರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456