ಹೊಳಲು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ರಾಮನವಮಿ
ಮಂಡ್ಯ ತಾಲೂಕು ಹೊಳಲು ಗ್ರಾಮದ ಶ್ರೀ ಎಚ್ ಎಮ್ ನಾಯಕ ಸರ್ಕಲ್ ಶ್ರೀ ಪಿರಿಯಾಪಟ್ಟಲದಮ್ಮ ದೇವಸ್ಥಾನ ಹಾಗೂ ಜಂಗಿ ಮೋಹಲ್ ಸರ್ಕಲ್ ನ
ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶ್ರೀರಾಮ ಭಕ್ತ ಮಂಡಳಿ ಗೆಳೆಯರ ಬಳಗದ ವತಿಯಿಂದ ಶ್ರೀ ರಾಮನವಮಿ ಹಾಗೂ ಮೇಲುಕೋಟೆ ಶ್ರೀ ವೈರಮುಡಿ ಬ್ರಹ್ಮೋತ್ಸವದ ಪ್ರಯುಕ್ತ ಈ ದಿನ ಶ್ರೀ ರಾಮನವಮಿ ಹಬ್ಬವನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು. ಶ್ರೀರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಬರುವ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ, ಕೋಸಂಬರಿ, ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಶ್ರೀರಾಮ ಭಕ್ತ ಮಂಡಳಿಯ ಸದಸ್ಯರು ಮಾತನಾಡುತ್ತಾ ಇಡೀ ದೇಶದಲ್ಲಿ ಈ ದಿನ ಶ್ರೀರಾಮದೇವರ ಪೂಜೆಯನ್ನು ಮಾಡುತ್ತಿದ್ದಾರೆ. ಹಾಗೂ ಮೇಲುಕೋಟೆ ಶ್ರೀ ವೈರಮುಡಿ ಬ್ರಹ್ಮೋತ್ಸವ ಇರುವುದರಿಂದ ಈ ದಿನ ನಾವುಗಳು ಈ ಗ್ರಾಮದಲ್ಲಿ ಶ್ರೀ ರಾಮನವಮಿ ಹಾಗೂ ವೈರಮುಡಿ ಬ್ರಹ್ಮೋತ್ಸವ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಮಾಡಿ ಪಾನಕ, ಮಜ್ಜಿಗೆ, ಕೋಸಂಬರಿ,ವಿತರಿಸಿ ನಂತರ ಗ್ರಾಮದವರಿಗೂ ಹಾಗೂ ದೇಶಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಲುಕೋಟೆ
ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ವಾಹನದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಪಾನಕ ಮಜ್ಜಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಭಕ್ತ ಮಂಡಳಿ ಗೆಳೆಯರ ಬಳಗದ ಸದಸ್ಯರಾದ ಕಾರ್ತಿಕ್, ಪವನ್, ರೇವಂತ್ , ಭರತ್, ನವೀನ್ ,ಸಂಜು, ಶಿವು,ನಿಂಗರಾಜ್, ಮಾಹಿತಿ ಹಾಗೂ ಗ್ರಾಮಸ್ಥರು ಶ್ರೀ ರಾಮ ಸೇವಾ ಸಮಿತಿ ಸದಸ್ಯರುಗಳು ಸೇರಿದಂತೆ ಮತ್ತಿತರು ಹಾಜರಿದ್ದರು.
ಚಿತ್ರವರದಿ: ಕೆ.ಪಿ.ಕುಮಾರ್, ಹೊಳಲು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
