ಬಾನಹಳ್ಳಿ ಪಿಎಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಮಹೇಶ್ವರಿ ನಟರಾಜ್ ಅವಿರೋಧ ಆಯ್ಕೆ
ಸಂತೆಮರಾಹಳ್ಳಿ: ಸಮೀಪದ ಬಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ಉಪಾಧ್ಯಕ್ಷರಾಗಿ ಮಹೇಶ್ವರಿ ನಟರಾಜ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
11 ಸದಸ್ಯರ ಸಂಖ್ಯೆ ಬಲ ಇರುವ ಹಿನ್ನೆಲೆಯಲ್ಲಿ ಯಾವುದೇ ಸದಸ್ಯ ನಾಮ ಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಮಹೇಶ್ವರಿ ನಟರಾಜ್ ಅವರನ್ನ ನೂತನ ಬಾನಹಳ್ಳಿ PACC ಬ್ಯಾಂಕ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ನಾಗೇಶ್ (ಸಹಕಾರ ಇಲಾಖೆ ) ಘೋಷಣೆ ಮಾಡಿದರು.
ಈ ವೇಳೆಯಲ್ಲಿ ನೂತನ ಉಪಾಧ್ಯಕ್ಷೆ ಮಹೇಶ್ವರಿ ನಟರಾಜ್ ಮಾತನಾಡಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ದುಡಿಯುವುದರ ಜೊತೆಗೆ ಸಂಘದ ಸದಸ್ಯರನ್ನು ಒಮ್ಮತವಾಗಿ ತಗೆದುಕೊಂಡು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರೇವಣ್ಣ ಸ್ವಾಮಿ ನಿರ್ದೇಶಕರಾದ ರವೀಶ್ ಕುಮಾರ್, ಟಿ ಸಿ ನಾಗೇಶ್, ನಂಜುಂಡಯ್ಯ, ಮಂಜುನಾಥ್ ಎಚ್ ಪಿ , ಟಿ ಎಂ ಪುಟ್ಟೇಗೌಡ, ಮಂಜುನಾಥ್ ಕೆ ಬಿ, ಶಿವನಾಗಮ್ಮ ಹಾಗೂ ಮೇಲ್ವಿಚಾರಕರಾದ ರಾಚಪ್ಪ, ಮುಖ್ಯ ನಿರ್ವಹಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಮಹೇಶ್ ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
