ದಶಕದ ರಸ್ತೆ ಸಮಸ್ಯೆಗೆ ಮುಕ್ತಿ: ಜೈಭೀಮ್ ಶ್ರೀನಿವಾಸ್ ನೇತೃತ್ವದಲ್ಲಿ ರೈತರೇ ನಿರ್ಮಿಸಿಕೊಂಡರು ರಸ್ತೆ
ಬೇತಮಂಗಲ: ಇಲ್ಲಿಗೆ ಸಮೀಪದ ಟಿ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಐಸಂದ್ರ ಮಿಟ್ಟೂರು ಗ್ರಾಮದಲ್ಲಿ 10 ವರ್ಷಗಳಿಂದ ರೈತರು ತಮ್ಮ ತೋಟಗಳಿಗೆ ಹೋಗಲು ಸೂಕ್ತ ರಸ್ತೆ ಇಲ್ಲದೆ ಪರದಾಡುತ್ತಿದ್ದರು ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಜೈಭೀಮ್ ಶ್ರೀನಿವಾಸ್ ಅವರ ಮಧ್ಯಸ್ಥಿಕೆ ಹಾಗೂ ರೈತರ ಒಗ್ಗಟ್ಟಿನ ಫಲವಾಗಿ ನೂತನ ರಸ್ತೆ ನಿರ್ಮಾಣ ಮಾಡಲಾಯಿತು.
ಕಳೆದ 10 ವರ್ಷಗಳಿಂದ ಈ ಭಾಗದ ರೈತರು ತಮ್ಮ ತೋಟಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೆ ಪರದಾಡುತ್ತಿದ್ದರು. ಮಳೆಗಾಲದಲ್ಲಂತೂ ಗೊಬ್ಬರ ಸಾಗಿಸಲು ಅಥವಾ ಬೆಳೆದ ಫಸಲನ್ನು ಮಾರುಕಟ್ಟೆಗೆ ತರಲು ಹರಸಾಹಸ ಪಡಬೇಕಿತ್ತು, ಈ ವೇಳೆ ಕೆಲವು ರೈತರು ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಗಮನಕ್ಕೆ ತಂದಾಗ ಅವರೇ ರೈತರ ನಡುವೆ ಮದ್ಯಸ್ತಿಕೆ ವಹಿಸಿ ರೈತರೊಂದಿಗೆ ರಸ್ತೆ ಹಾದು ಹೋಗುವ ಜಾಗದ ಮಾಲೀಕರನ್ನು ಮತ್ತು ರೈತರನ್ನು ಒಂದುಗೂಡಿಸಿ ಸರಣಿ ಸಭೆಗಳನ್ನು ನಡೆಸಿ ರೈತರಿಗೆ ಅನುಕೂಲವಾಗಲಿ ಎಂದು ಖುದ್ದಾಗಿ ಸ್ಥಳದಲ್ಲೇ ನಿಂತು ಜೆಸಿಬಿ ಯಂತ್ರದ ಮೂಲಕ 14 ಅಡಿ ಅಗಲ 1 ಕಿಲೋಮೀಟರ್ ಉದ್ದದಷ್ಟು ರಸ್ತೆಯನ್ನು ರೈತರ ಸಮ್ಮುಖದಲ್ಲಿ ನಿರ್ಮಾಣ ಮಾಡಲಾಯಿತು.
ರೈತರಿಂದ ಅಭಿನಂದನೆ: ಈ ವೇಳೆ ಸ್ಥಳೀಯ ರೈತರು ಮಾತನಾಡಿ, ನೂರಾರು ಎಕರೆ ತೋಟಗಳಿಗೆ ವಾಹನ ಸಂಚಾರ ಸುಲಭವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಂಬೇಡ್ಕರ್ ಯುವ ವೇದಿಕೆಯ ಜೈಭೀಮ್ ಶ್ರೀನಿವಾಸ್ ರವರ ಈ ಮಾದರಿ ಕಾರ್ಯಕ್ಕೆ ರೈತರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎವೈವಿಕೆ ಸಂಘಟನೆಯ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಜಿಲ್ಲಾಧ್ಯಕ್ಷ ಗೋವಿಂದ್, ಯುವ ಘಟಕ ಅಧ್ಯಕ್ಷ ಕಿಶೋರ್, ಹೋಬಳಿ ಅಧ್ಯಕ್ಷ ಸಂಜು ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
