ಹೇಮಾವತಿ ನಾಲೆ ಕಾಮಗಾರಿಯ ಸಮೀಪ ಅನಾಥ ಚಿರತೆ ಮರಿ ಪ್ರತ್ಯಕ್ಷ ಸಾರ್ವಜನಿಕರಿಂದ ರಕ್ಷಣೆ
ಚಿಕ್ಕನಾಯಕನಹಳ್ಳಿ:ಪಟ್ಟಣದ 6ನೇ ವಾರ್ಡ್ ಸಮೀಪದ ಕೇದಿಗೆಹಳ್ಳಿ ಹೊಸೂರಿನಲ್ಲಿ ಹೇಮಾವತಿ ನಾಲೆ ಕಾಮಗಾರಿಯ ಸಮೀಪ ಅನಾಥ ಚಿರತೆ ಮರಿ ಪ್ರತ್ಯಕ್ಷ ಸಾರ್ವಜನಿಕರಿಂದ ರಕ್ಷಣೆ ಶನಿವಾರ ಮಧ್ಯಾಹ್ನದ ಸಮಯದಲ್ಲಿ ಹೇಮಾವತಿ ಕಾಮಗಾರಿ ಸಮೀಪದಲ್ಲಿ ತಾಯಿಯಿಂದ ಅಗಲಿದ ಚಿರತೆ ಮರಿ ಅನಾಥವಾಗಿ ಓಡಾಡುತ್ತಿದ್ದನ್ನು ಗಮನಿಸಿದ ಕೇದಿಗೆಹಳ್ಳಿ ಗ್ರಾಮದ ಯುವಕ ಕಿಟ್ಟಿ ಆ ಚಿರತೆ ಮರಿಯನ್ನು ಧೈರ್ಯದಿಂದ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಈ ಚಿರತೆಯ ಮನೆಗೆ 3 ರಿಂದ 4 ತಿಂಗಳು ವಯಸ್ಸಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿರತೆಗಳ ಕಾಟ ಹೆಚ್ಚಾಗುತ್ತಿದ್ದು ಚಿರತೆಮರಿಯನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
