ಕನ್ನಡ ಸಂಘ ದಿವ್ಯ ಜ್ಯೋತಿ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಟೈಲರಿಂಗ್ ತರಬೇತಿ
ಕೆಜಿಎಫ್: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ತನ್ನ ಬದುಕನ್ನು ತಾನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕನ್ನಡ ಸಂಘ ಮತ್ತು ದಿವ್ಯ ಜ್ಯೋತಿ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕನ್ನಡ ಸಂಘ ಆವರಣ ದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಕುಚ್ಚು ಕಟ್ಟುವುದು. ಬ್ಯೂಟಿ ಪಾರ್ಲರ್. ಹಾಗೂ ಟೈಲರಿಂಗ್ ತರಬೇತಿಯನ್ನು ಒಂದು ತಿಂಗಳ ಕಾಲ ನೀಡುವ ಮೂಲಕ ತರಬೇತಿ ಪಡೆದ ಮಹಿಳೆಯರಿಗೆ ತರಬೇತಿ ಪತ್ರವನ್ನು ನೀಡಿ ಗೌರವಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಂಘದ ತಾಲೂಕ ಅಧ್ಯಕ್ಷರು. ವಿ. ಪ್ರಸನ್ನ ರೆಡ್ಡಿ ಮಾತನಾಡಿ ಈಗಿನ ಕಾಲದಲ್ಲಿ ಸಂಸಾರ ನಿಭಾಯಿಸುವುದು ಕಷ್ಟ ಅದಕ್ಕೆ ಪರ್ಯಾಯವಾಗಿ ಮಹಿಳೆಯರು. ಸ್ವವಲಂಬಿತರಾಗಿ ಜೀವನ ನಡೆಸಿ ತನ್ನ ಕುಟುಂಬವನ್ನು ಪೋಷಣೆ ಮಾಡಲು ತಾವು ಟೈಲರಿಂಗ್,ಬ್ಯೂಟಿ ಪಾರ್ಲರ್ ಅಂತಹ ತರಬೇತಿಗಳನ್ನು ಪಡೆದಾಗತಮ್ಮ ಕಷ್ಟ ಕಾಲದಲ್ಲಿ ತಮ್ಮನ್ನು ಕೈ ಹಿಡಿಯುತ್ತದೆ ಎಂದರು.
ಎಲ್ಲಿ ತರಬೇತಿ ಪಡೆದ ನೀವುಗಳುತಮ್ಮ ಕುಟುಂಬ ಹಾಗೂ ಅಕ್ಕಪಕ್ಕದ ಮನೆಯವರಿಗೂ ತರಬೇತಿಯ ಮಾಹಿತಿಯನ್ನು ನೀಡಿ ಇತರರಿಗೂ ತಿಳಿಸಿಕೊಡಬೇಕು ಅದರಿಂದ ಸಮಾಜದಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.
ದಿವ್ಯ ಜ್ಯೋತಿ ಟ್ರಸ್ಟ್ ಅಧ್ಯಕ್ಷರು,ಸುನೀತಾ ಮಾತನಾಡಿ ನಮ್ಮ ಟ್ರಸ್ಟ್ ನ ಉದ್ದೇಶ ಒಂದೇ ಮಹಿಳೆಯರಿಗೆ ಪರ್ಯಾಯವಾಗಿ ಉದ್ಯೋಗ ನೀಡಿ ಗೌರವಿತ ಬದುಕು ನಡೆಸಬೇಕು ಎನ್ನುವುದುನಮ್ಮಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಯಾವುದೇ ಫೀಸು ಇರೋದಿಲ್ಲ ಮಧ್ಯಮ ವರ್ಗದವರಿಗೆ ಮತ್ತಷ್ಟು ಅನುಕೂಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳಾದ •ಉಪಾಧ್ಯಕ್ಷರು,ತ್ಯಾಗರಾಜ್.ಅಶ್ವಥ್ ರಾಧಾ ಪ್ರಕಾಶ್.ಫ್ರೂಟ್ಸ್ ಮಂಜು.
ರಾಮಚಂದ್ರ .ವಿ. ರಘು. ಮೊದಲಾದವರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
