ವಿಜೃಂಭಣೆಯಿಂದ ಜರುಗಿದ ಬೀರೇಶ್ವರ ಜಾತ್ರಾ ಮೋಹತ್ಸವ
ಸಂತೆಮರಹಳ್ಳಿ: ಸಮೀಪದ ಕಾವುದವಾಡಿ ಗ್ರಾಮದಲ್ಲಿ ಶ್ರೀ ಬೀರೇಶ್ವರ ಜಾತ್ರಾ ಮೋಹತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಶಿವರಾತ್ರಿ ಹಬ್ಬದ ಮರುದಿನ ಸೋಮವಾರ ಶ್ರೀ ಬೀರೇಶ್ವರ ಸ್ವಾಮಿ ಜಾತ್ರಾ ಮೋಹತ್ಸವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುವುದು ಬಹಳ ವಿಶೇಷವಾಗಿದೆ.
ಶಿವರಾತ್ರಿ ಹಬ್ಬದ ದಿನದಂದು ಬೀರೇಶ್ವರ ದೇವಾಲಯದ ಅರ್ಚಕರ ತಂಡ ಟಿ ನರಸೀಪುರ ತಾಲೋಕಿನ ತಡಿ ಮಾಲಂಗಿ ಗ್ರಾಮದ ಕಾವೇರಿ ನದಿಯ ದಡದಲ್ಲಿ ಬಸವನನ್ನು ಸ್ವಚ್ಛ ಗೊಳಿಸಿ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಹೊಸ ಮಾಲಂಗಿ ಮಾರ್ಗವಾಗಿ ಕಾವುದವಾಡಿ ಮಂಟೇಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೋಮವಾರ ಬೆಳಿಗ್ಗೆಯಿಂದಲೇ ಕಾವುದವಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸತ್ತಿಗೆ ಸುರಪಾಣಿ ಜೊತೆಗೆ ಬಸವನನ್ನು ಮೆರವಣಿಗೆ ಮುಕಾಂತರ ಬೀರೇಶ್ವರ ದೇವಾಲಯಕ್ಕೆ ತೆರಳುವುದು ವಾಡಿಕೆಯಾಗಿದೆ ಎಂದು ಗೌಡಕೆ ಮಹದೇವಸ್ವಾಮಿ ತಿಳಿಸಿದರು.
ಶ್ರೀ ಬೀರೇಶ್ವರ ಸ್ವಾಮಿ ದೇವರ ದರ್ಶನ ಪಡೆಯಲು ವಿವಿಧ ರಾಜ್ಯ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತಿದಿಗಳು ಆಗಮಿಸಿದ್ದು ಭಕ್ತದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0
