ರಾಮಸಾಗರದಲ್ಲಿ ವೈಭವದಿಂದ ನಡೆದ ಶ್ರೀ ಚೆನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ
ಬೇತಮಂಗಲ: ಇಲ್ಲಿಗೆ ಸಮೀಪದ ಸಮಾರು 80 ವರ್ಷಗಳ ಇತಿಹಾಸವುಳ್ಳ ಪ್ರಸಿದ್ಧ ರಾಮಸಾಗರ ನದಿಯ ದಡದಲ್ಲಿ ನೆಲೆಸಿರುವ ಶ್ರೀ ಭೂನೀಳಾ ಸಮೇತ ಚೆನ್ನಕೇಶವ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಬ್ರಹ್ಮರಥೋತ್ಸವ ಅಂಗವಾಗಿ ಬೆಳಗಿನಿಂದಲೇ ಸ್ವಾಮಿಗೆ ವಿಶೇಷ ಪೂಜೆ, ಪಂಚಾಬ್ರುತ ಅಭಿಷೇಕ ವಿಶೇಷ ಪುಷ್ಪಾಲಂಕಾರ ಹಾಗೂ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ರಥೋತ್ಸವಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.
ಈ ವೇಳೆ ಗ್ರಾಮಸ್ಥರು ಮಾತನಾಡಿ ರಾಮಸಾಗರ ನದಿಯ ದಡದ ಮೇಲೆ ನೆಲೆಸಿರುವ ಗ್ರಾಮದ ಇತಿಹಾಸವುಳ್ಳ ಶ್ರೀ ಭೂನೀಲಾ ಪ್ರಸನ್ನ ಚೆನ್ನಕೇಶವ ಬ್ರಹ್ಮರಥೋತ್ಸವವನ್ನು ಗ್ರಾಮಸ್ಥರು ಸುಮಾರು 80 ವರ್ಷಗಳಿಂದ ನಡೆಸಿಕೊಂಡು ಬರುತಿದ್ದು ಯಾವುದೇ ಜಾತಿ ಭೇದ ಭಾವ ವಿಲ್ಲದೆ ಗ್ರಾಮಸ್ಥರ ಸಹಕಾರದಿಂದ ಒಗ್ಗಟ್ಟಿನಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ರಥಾರೋಹಣ & ಸಂಭ್ರಮ:
ಮಧ್ಯಾಹ್ನ ನಿಗದಿತ ಶುಭ ಮುಹೂರ್ತದಲ್ಲಿ ಶ್ರೀ ಚೆನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ತಂದು ಭವ್ಯವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ಗೋವಿಂದ ಗೋವಿಂದ ಎಂಬ ನಾಮ ಸ್ಮರಣೆ & ಜಯಘೋಷಗಳ ನಡುವೆ ರಥವು ಪ್ರಮುಖ ಬೀದಿಗಳಲ್ಲಿ ಸಾಗಿತು. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ತೇರು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಹರಕೆ ಸಲ್ಲಿಕೆ: ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಬಾಳೆಹಣ್ಣು ಮತ್ತು ಉಪ್ಪು ಚಿಲ್ಲರೆ ಹಣ ದವನ ರಥಕ್ಕೆ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಸಮರ್ಪಿಸಿದರು.
ಅನ್ನಸಂತರ್ಪಣೆ: ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಪಾನಕ ಮಜ್ಜಿಗೆ ಕೋಸಂಬರಿಯನ್ನು ವಿತರಿಸಲಾಯಿತು.
ಮೇ 05 ಪುಷ್ಪಪಲ್ಲಕ್ಕಿ ಹಾಗೂ ಕರಗ ಮಹೋತ್ಸವ: ಶ್ರೀ ಭೂನೀಳಾ ಸಮೇತ ಪ್ರಸನ್ನ ಶ್ರೀ ಚೆನ್ನಕೇಶವ ಬ್ರಹ್ಮರಥೋತ್ಸವ ಮತ್ತು ಶ್ರೀ ಪಟಳಮ್ಮ ದೇವಿಯ ಹೂವಿನ ಕರಗ ಅಂಗವಾಗಿ ಮೇ 05 ರಂದು ರಾತ್ರಿ ರಸಮಂಜರಿ ಕಾರ್ಯಕ್ರಮ ಹಾಗೂ ಕರಗ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಗ್ರಾಮದ ಯುವಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಚಿತ್ರ 01 ರಾಮಸಾಗರದಲ್ಲಿ ಶ್ರೀ ಭೋನಿಳಾ ಸಮೇತ ಪ್ರಸನ್ನ ಶ್ರೀ ಚೆನ್ನಕೇಶವ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
