ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ
ಮಂಡ್ಯ ತಾಲೂಕು ಹೊಳಲು ಗ್ರಾಮದ ಕಾವೇರಿ ಗೆಳತಿಯರ ಬಳಗ ಹಾಗೂ ಇಂದಿರಾ ಯುವತಿ ಬಳಗದ ವತಿಯಿಂದ ನಿಂಗರಾಜಮ್ಮನವರ
(ಕಾವೇರಿ ಗೆಳತಿಯರ ಬಳಗದ ಅಧ್ಯಕ್ಷ) ಅಧ್ಯಕ್ಷತೆಯಲ್ಲಿ ಈ ದಿನ ಮಕ್ಕಳು ಮತ್ತು ಮಹಿಳೆಯರಿಗಾಗಿ ಆಟೋ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಚಾಲನೆಯನ್ನು ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ರೈತ ಸಂಘದ ರೈತ ಮುಖಂಡರಾದ ಲತಾ ಶಂಕರ್ ಅವರು ಬಾಲ್ ಎಸೆಯುವುದರ ಮುಖಾಂತರ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗ್ರಾಮೀಣ ಭಾಗದ ಮಹಿಳೆಯರು ಗದ್ದೆ, ಹೊಲ, ಕುರಿ, ಮೇಕೆ, ಹಸು,ಎಂದು ತಮ್ಮ ಕೆಲಸವನ್ನು ಮಾಡುತ್ತಾ ಜೀವನ ಕಳೆಯುತ್ತಾರೆ.
ಆದರೆ ಇಂತಹ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಂಡು ಮಹಿಳೆಯರು ಮನೆಯಿಂದ ಹೊರ ಬಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಮನಸ್ಸುಗೂ ಆನಂದ ಹಾಗೂ ಹುಮ್ಮಸ್ಸಿನಿಂದ ಇರಬಹುದು ಎಂದು ಹೇಳಿದರು.
ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿಯಾದ ಭಾಗ್ಯಮ್ಮ ಮಾತನಾಡುತ್ತಾ ಕಾವೇರಿ ಗೆಳತಿಯರ ಬಳಗದ ಅಧ್ಯಕ್ಷರಾದ ನಿಂಗರಾಜಮ್ಮನವರು ಮಹಿಳಾ ದಿನಾಚರಣೆಯ ಪ್ರಯುಕ್ತ ಇಂತಹ ಅನೇಕ ಕಾರ್ಯಕ್ರಮಗಳನ್ನು ಹೊಳಲು ಗ್ರಾಮದಲ್ಲಿ ಮಾಡುತ್ತಾ ಬಂದಿದ್ದಾರೆ. ಗ್ರಾಮದ ಹಿರಿಯರಿಗೆ ವಿವಿಧ ರಂಗದಲ್ಲಿ ಸಮಾಜ ಸೇವೆ ಮಾಡಿದ ಮಹಿಳೆಯರನ್ನು ಗುರುತಿಸಿ ಇಂತಹ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುತ್ತಾ ಬಂದಿದ್ದಾರೆ ಅವರ ಕೆಲಸವನ್ನು ಶ್ಲಾಘಿಸಿದರು.
ಹೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮ್ಯಾ ಚೇತನ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇಂತಹ ಆಟೋಟಗಳಿಂದ ಮನಸ್ಸಿಗೆ ಸ್ಪೂರ್ತಿ ಆಗುತ್ತದೆ ಹಾಗೂ ಇಂಥ ಕಾರ್ಯಕ್ರಮಗಳಿಂದ ಮಹಿಳೆಯರನ್ನು ಗುರುತಿಸಬಹುದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡೈರಿ ಅಧ್ಯಕ್ಷರಾದ ಸಾವಿತ್ರಮ್ಮ,
ಮಾಜಿ ಅಧ್ಯಕ್ಷರಾದ ಪದ್ಮ, ನಿರೂಪಮ,
ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಸದಾಶಿವಮೂರ್ತಿ,
ಬಿಲ್ ಕಲೆಕ್ಟರ್ ರಾಘವೇಂದ್ರ, ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸುಜಾತ,
ಹಾಗೂ ಇಂದಿರಾ ಯುವತಿ ಮಂಡಳಿ, ಮತ್ತು ಕಾವೇರಿ ಗೆಳತಿಯರ ಬಳಗದ ಪದಾಧಿಕಾರಿಗಳು ಸದಸ್ಯರು ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತರು,
ಉಪಸ್ಥಿತರಿದ್ದರು.
ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತ, ರನ್ನಿಂಗ್ ರೈಸ್,
ಮಹಿಳೆಯರಿಗಾಗಿ ಪಾಸಿಂಗ್ ದ ಬಾಲ್ (ಬಿಸಿ ತುಪ್ಪ), ಮ್ಯೂಸಿಕಲ್ ಚೇರ್, ಕೆರೆ ದಡ ಆಟ, ರನ್ನಿಂಗ್ ರೈಸ್, ರಿಂಗ್ ಎಸೆತ, ಬಾಂಬೆ ಆಟ, ಇನ್ನು ಮುಂತಾದ ಆಟಗಳನ್ನು ಆಯೋಜಿಸಲಾಗಿತ್ತು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
