ಲೋಕ ರಕ್ಷಕನಾದ ಭೂವರಹನಾಥ ಸ್ವಾಮಿಗೆ ರೇವತಿ ನಕ್ಷತ್ರದ ಪಟ್ಟಾಭಿಷೇಕದ ಸಂಭ್ರಮ

Feb 22, 2026 - 10:22
 0  7
ಲೋಕ ರಕ್ಷಕನಾದ ಭೂವರಹನಾಥ ಸ್ವಾಮಿಗೆ ರೇವತಿ ನಕ್ಷತ್ರದ ಪಟ್ಟಾಭಿಷೇಕದ ಸಂಭ್ರಮ

ಮಂಡ್ಯ : ರೇವತಿ ನಕ್ಷತ್ರದ ಶುಭ ದಿನವಾದ ಇಂದು ಲೋಕ ರಕ್ಷಕ, ಭೂ ವ್ಯಾಜ್ಯಗಳ ಪರಿಹಾರಕನಾದ ಭೂದೇವಿ ಸಮೇತ ಶ್ರೀಲಕ್ಷ್ಮಿ ವರಹನಾಥಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಕೃಷ್ಣರಾಜಪೇಟೆ ತಾಲೂಕಿನ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಭೂ ವೈಕುಂಠವೆಂದೇ ಪ್ರಖ್ಯಾತವಾಗಿದ್ದು, ಬೇಡಿ ಬಂದ ಭಕ್ತರ ಕೋರಿಕೆಗಳನ್ನು ಈಡೇರಿಸಿ, ಕರುಣಿಸಿ ಆಶೀರ್ವದಿಸುತ್ತಿರುವ ಭೂವರಹನಾಥ ಸ್ವಾಮಿಯ ಮಹಿಮೆಯಿಂದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿದೆ.

ರೇವತಿ ನಕ್ಷತ್ರದ ಶುಭ ದಿನವಾದ ಎಂದು ದುಷ್ಟ ಹಿರಣ್ಯಾಕ್ಷನನ್ನು ವರಹನಾಥ ಸ್ವಾಮಿಯು ಸಂಹರಿಸಿ ಭೂದೇವಿಯನ್ನು ಸ್ವಸ್ಥಾನದಲ್ಲಿ ಸ್ಥಾಪಿಸಿದ ಗಳಿಗೆಯು ರೇವತಿ ನಕ್ಷತ್ರವಾದ್ದರಿಂದ ಭೂವರಹನಾಥ ಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು 500 ಲೀಟರ್ ಎಳನೀರು 500 ಲೀಟರ್ ಕಬ್ಬಿನ ಹಾಲು ಹಸುವಿನ ತುಪ್ಪ ಜೇನುತುಪ್ಪ ಮೊಸರು ಸುಗಂಧದ ದ್ರವ್ಯಗಳು ಅರಿಶಿಣ ಚಂದನದಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಸುಗಂಧರಾಜ, ತುಳಸಿ, ಪವಿತ್ರ ಪತ್ರೆಗಳು, ಧವನ, ಕಮಲ ಸೇರಿದಂತೆ 58 ಬಗೆಯ ವಿವಿಧ ಪುಷ್ಪಗಳಿಂದ ಪುಷ್ಪಭಿಷೇಕ ಮಾಡಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಿ ಲೋಕಕಲ್ಯಾಣ ಅರ್ಥವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಭೂದೇವಿ ಸಮೇತ ಶ್ರೀ ಲಕ್ಷ್ಮಿ ವರಹನಾಥ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಡಾ. ಶ್ರೀನಿವಾಸ ರಾಘವನ್ ಅವರ ನೇತೃತ್ವದಲ್ಲಿ ಪೂಜೆ ಪುರಸ್ಕಾರಗಳು ಶ್ರದ್ಧಾಭಕ್ತಿಯಿಂದ ನಡೆದವು. ಚೆನ್ನೈ ಹೈಕೋರ್ಟ್ ನ ನ್ಯಾಯಾಧೀಶರಾದ ಸ್ವಾಮಿನಾಥನ್ ಕುಟುಂಬ ವರ್ಗದವರು ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪುಳಿಯೋಗರೆ ಮೊಸರನ್ನ ಉಪ್ಪಿಟ್ಟು ಬಿಸಿಬೇಳೆ ಬಾತ್ ಹಾಗೂ ಸಿಹಿ ಪೊಂಗಲ್ ಪ್ರಸಾದವನ್ನು ವಿತರಿಸಲಾಯಿತು. ಭೂವರಹನಾಥ ಸುಕ್ಷೇತ್ರವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ದೇವಾಲಯವನ್ನು ಹೊಯ್ಸಳ ವಾಸ್ತು ಶಿಲ್ಪ ವೈಭವದ ಮಾದರಿಯಲ್ಲಿ ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ನಿರ್ಮಿಸಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ನಿನ್ನ ಮೂರು ತಿಂಗಳಲ್ಲಿ ಎರಡನೇ ಪ್ರಾಕಾರವು ಲೋಕಾರ್ಪಣೆಯಾಗಲಿದ್ದು ಮೂರನೇ ಪ್ರಕಾರಕ್ಕೆ 176 ಅಡಿ ಎತ್ತರದ ಬೃಹತ್ ರಾಜಗೋಪುರ ಹಾಗೂ 186 ಕಾಲುಗಳ ಮುಖಮಂಟಪವನ್ನು ನಿರ್ಮಿಸಲಾಗುತ್ತಿದೆ ಈ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳು ಭಕ್ತರ ಸಹಕಾರದಿಂದ ನಡೆಯುತ್ತಿದ್ದು ಮೈಸೂರಿನ ಪರಕಾಲ ಮಠದ ಪರಕಾಲ ಸ್ವಾಮಿಗಳು ದೇವಾಲಯದ ಅಭಿವೃದ್ಧಿಯ ನೇತೃತ್ವವನ್ನು ವಹಿಸಿದ್ದಾರೆ ಎಂದು ಶ್ರೀನಿವಾಸ್ ರಾಘವನ್ ತಿಳಿಸಿದರು.   

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456