ಕರ್ನಾಟಕ ಮಾದಿಗ ಯುವ ಸಮೂಹದ 2ನೇ ತುರ್ತು ರಾಜ್ಯ ಮಟ್ಟದ ಸಭೆ

Mar 29, 2026 - 19:20
 0  35
ಕರ್ನಾಟಕ ಮಾದಿಗ ಯುವ ಸಮೂಹದ 2ನೇ ತುರ್ತು ರಾಜ್ಯ ಮಟ್ಟದ ಸಭೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೆಂಗಳೂರು :ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ವತಿಯಿಂದ 2ನೇ ತುರ್ತು ರಾಜ್ಯ ಮಟ್ಟದ ಸಭೆಯನ್ನು ದಿನಾಂಕ 29-03-2026 ರಂದು ಲಿಡ್ಕರ್ ಭವನ, ವಸಂತನಗರ, ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಈ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 150ಕ್ಕೂ ಹೆಚ್ಚು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಭೆಗೆ ಉತ್ಸಾಹ ತುಂಬಿದರು.

ಸಭೆಯಲ್ಲಿ ಪ್ರಮುಖವಾಗಿ ಒಳಮೀಸಲಾತಿ ವಿಷಯದಲ್ಲಿ ಮುಂದಿನ ಹೋರಾಟದ ಸ್ಪಷ್ಟ ದಿಕ್ಕು, ತೀರ್ಮಾನಗಳು ಹಾಗೂ ಕಾರ್ಯಯೋಜನೆಗಳನ್ನು ಅಂತಿಮಗೊಳಿಸಲಾಯಿತು. ಜೊತೆಗೆ, ನಡೆಯಲಿರುವ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಮಾದಿಗ ಯುವ ಸಮೂಹ ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಇದರ ಅಂಗವಾಗಿ, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಯುವ ಹೋರಾಟಗಾರರನ್ನು ಸಂಘಟಿಸಿ, “ಚಲೋ ಬಾಗಲಕೋಟೆ – ಚಲೋ ದಾವಣಗೆರೆ” ಅಭಿಯಾನಕ್ಕೆ ಸಂಯೋಜಕರಾದ ಶ್ರೀ ಎಸ್. ಸಂಗಮೇಶ್ ಅವರು ಚಾಲನೆ ನೀಡಿದ್ದಾರೆ.

ಆದ್ದರಿಂದ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದ ಎಲ್ಲಾ ಯುವ ಮುಖಂಡರು, ಯುವಕರು, ಯುವತಿಯರು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಂಘಟಿತರಾಗಿ ಸಮುದಾಯದ ಹಿತಕ್ಕಾಗಿ ಶ್ರಮಿಸಬೇಕೆಂದು ಕರೆ ನೀಡಲಾಗಿದೆ.

ಈ ಕುರಿತು ಕರ್ನಾಟಕ ಮಾದಿಗ ಯುವ ಸಮೂಹದ ಮುಖಂಡರುಗಳಾದ

ಶ್ರೀ ಹನುಮೇಶ್ ಗುಂಡೂರ,

ಶ್ರೀ ಮಲ್ಲಿಕಾರ್ಜುನ ಬಾಂಬೇಕರ,

ಡಾ. ನಾಗೇಶ್ ಕೆ.ಎನ್.,

ಶ್ರೀ ಮುರಳಿಧರ ಮೇಲಿನಮನಿ,

ಶ್ರೀ ರವಿಕುಮಾರ್ ಮರಡಿಪುರ,

ಶ್ರೀ ಪ್ರತಾಪ್ (ಬೆಂಗಳೂರು),

ಶ್ರೀ ನಿಂಗರಾಜ ಗುಳೆ

ಹಾಗೂ ಸಂಯೋಜಕರಾದ ಶ್ರೀ ಎಸ್. ಸಂಗಮೇಶ್ ಅವರು ಸಂಯುಕ್ತವಾಗಿ ಕರೆ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456