ರಾಜಕೀಯಕ್ಕೆ ಬಂದು 8 ಕೋಟಿ ಕಳೆದುಕೊಂಡೆ ನಗರಸಭೆ ಮಾಜಿ ಅಧ್ಯಕ್ಷರು. ವಲ್ಲಳ್ಳ ಮುನಿಸ್ವಾಮಿ

Mar 29, 2026 - 19:52
 0  1
ರಾಜಕೀಯಕ್ಕೆ ಬಂದು 8 ಕೋಟಿ ಕಳೆದುಕೊಂಡೆ ನಗರಸಭೆ ಮಾಜಿ ಅಧ್ಯಕ್ಷರು. ವಲ್ಲಳ್ಳ ಮುನಿಸ್ವಾಮಿ

ಕೆಜಿಎಫ್: ನಾನು ರಾಜಕೀಯಕ್ಕೆ ಬಂದು ಜನರ ಸೇವೆ ಮಾಡಿ 8 ಕೋಟಿ ಕಳೆದುಕೊಂಡಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ ಬಿಜೆಪಿ ಮುಖಂಡರು ನಗರಸಭೆಯ ಮಾಜಿ ಅಧ್ಯಕ್ಷರು. ವಲ್ಲಳ್ಳ ಮುನಿಸ್ವಾಮಿ

ಅವರು ಓರಿಯಂಟಲ್ ಲೈನ್  ನ ಅವರ ವಾರ್ಡಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ನಾನು ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಸಂಪಾದನೆ ಮಾಡಿದ ಹಣವನ್ನು ಸಮಾಜ ಸೇವೆ ಮಾಡೋಣ ಎಂದು ಉದ್ದೇಶದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎಲ್ಲಾ ನನ್ನ ಕೈಯಿಂದನೇ ಖರ್ಚು ಮಾಡಿದ್ದೇನೆ.ಸಾರ್ವಜನಿಕರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ.ಅದಕ್ಕೆ ನೇರ ಸಾಕ್ಷಿ ಇಲ್ಲಿರುವ ಜನತೆ ಇವರನ್ನು ಕೇಳಿ ಎಂದುಹೇಳಿದರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಶಾಸಕರು,ರೂಪಕಲಾ ಶಶಿಧರ್ ಒಳ್ಳೆಯ  ಸಾರ್ವಜನಿಕರ ಸೇವೆ ಮಾಡುತ್ತಾರೆ ಎಂದು ನಂಬಿದ್ದೇನೆ ಅದೇ ರೀತಿಯಾಗಿ ನಡೆದುಕೊಳ್ಳುತ್ತಿದ್ದರು.ಎರಡನೇ ಬಾರಿ ಆಯ್ಕೆಯಾಗಿ ಶಾಸಕರಾದ ನಂತರ ಅವರು ಬದಲಾಗಿ ಬಿಟ್ಟರು.ಅವರನ್ನು ನಂಬಿಕೊಂಡು ನಾನು ಕೋಟಿಗಟ್ಟಲೆ ಖರ್ಚು ಮಾಡಿದ್ದೇನೆ.ಆದರೂ ನನ್ನನ್ನು ಕೈಬಿಟ್ಟರು.ನಾನು ಯಾರನ್ನು ಅವಲಂಬನೆ ಮಾಡಿಚುನಾವಣೆ ಎದುರಿಸುವದಿಲ್ಲ.ನಾನು ಮಾಡಿರುವ ಸೇವೆ ನನ್ನನ್ನು ಕೈ ಹಿಡಿಯುತ್ತದೆ.ಮುಂದಿನ ನಗರಸಭೆ ಅಧ್ಯಕ್ಷರಾಗಿ,ಇನ್ನೂ ಹಲವಾರು ಸಾರ್ವಜನಿಕ ಸೇವೆ  ಮಾಡಿಯೇ ತೀರುತ್ತೇವೆ  ಎಂದು ಸವಾಲ್ ಎಸೆದರು. 

ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಈ ಮುನಿಸ್ವಾಮಿ ಯಾರುಎಂದು ಇನ್ನು ನಾನು ಹೆಚ್ಚಿನ ಕಷ್ಟಗಳನ್ನು ಪಟ್ಟಿದ್ದೇನೆ ಅದನ್ನು ಮುಂದಿನ ಭಾಗ ಎರಡರಲ್ಲಿ ವಿವರವಾಗಿ ತಿಳಿಸುತ್ತೇನೆ. ಎಂದು ಹೇಳಿದರು.ನಾನು ಎಷ್ಟೋ ಬಡ ಜನತೆಗೆ ನನ್ನ ಕೈಯಲ್ಲಿ ಆಗುವ ಸಹಾಯ ಮಾಡಿದ್ದೇನೆ ಎಂದಿಗೂ ದೇವರು ನನ್ನನ್ನು ಕೈಬಿಡುವುದಿಲ್ಲ ಈ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಬಿಜಿಎಂಎಲ್ ಬಗ್ಗೆ ಇರುವ ಕಾರ್ಮಿಕ ಕುಟುಂಬಸ್ಥರ ಮನೆಗಳನ್ನು ಸ್ವಂತ ಮಾಡಿಕೊಡುತ್ತೇನೆ. ಅದಕ್ಕೆ ನನ್ನ ಹತ್ತಿರ ಒಂದು ಒಳ್ಳೆಯ ಉಪಾಯ ಇದೆ ಅದರ ಮೂಲವಾಗಿ ನಾನು ನಿಮಗೆ ನಿಮ್ಮ ಮನೆಗಳನ್ನು ಸ್ವಂತ ಮಾಡಿಕೊಡುತ್ತೇನೆ ಎಂದು ಹೇಳಿದರು. ನೀವು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಬೇಕು ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456