ರಂಗೋಲಿ ಚಿತ್ತಾರ ಪುಸ್ತಕ ಬಿಡುಗಡೆ

Jan 3, 2026 - 12:56
 0  29
ರಂಗೋಲಿ ಚಿತ್ತಾರ ಪುಸ್ತಕ ಬಿಡುಗಡೆ

ಉದಯಿಸುವ ಸೂರ್ಯ ಕಿರಣಗಳೊಂದಿಗೆ ಪ್ರಕಾಶಮಾನವಾಗಿರುವನು. ನೋಡುಗರ ಮನಸ್ಸನ್ನು ಸೆಳೆಯುವನು‌. ತಾನೇ ಒಂದು ರಂಗೋಲಿಯಂತೆ ಕಂಗೊಳಿಸುವನು. ತನ್ನ ಬೆಳಕನ್ನು ಚದುರಿಸುವಲ್ಲಿ ಬಗೆ ಬಗೆಯ ಬಣ್ಣಗಳನ್ನು ಪಸರಿಸುವನು‌‌. ನೋಡುಗರ ಮನಸ್ಸನ್ನು ಸೂರೆಗೊಳಿಸುವನು. ತಾನೇ ಒಂದು ಅಪರೂಪದ ಚಿತ್ರವಾಗಿ ಕಂಗೊಳಿಸುವನು.

 ಅದೇ ರೀತಿಯಾಗಿ ಶ್ರೀಮತಿ ರಮಾ ಕೆ ಕಲಘಟಗಿ ಅವರ ತಮ್ಮ ನಾಲ್ಕನೆಯ ಪುಸ್ತಕವಾದ "ರಂಗೋಲಿಯ ಚಿತ್ತಾರ" ಪುಸ್ತಕದಲ್ಲಿ ನಾನಾ ರೀತಿಯ ರಂಗೋಲಿಗಳ ಸಮೂಹವನ್ನು ನಾವು ಕಾಣಬಹುದು. ದೈವತ್ವ, ಪರಿಸರ, ದೇಶಪ್ರೇಮ, ಪ್ರೀತಿ ಮಮಕಾರ, ದೈವ ಲೀಲೆಗಳು, ನಾನಾ ದೇವರುಗಳ ರೂಪಗಳು, ನಾಡಿನ ಕಲೆ ಮತ್ತು ಸಂಸ್ಕೃತಿ ತೋರುವುದರಲ್ಲಿ ಈ ರಂಗೋಲಿಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಎಲ್ಲಾ ವರ್ಗದ ಜನರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಇವರ ಈ ಪುಸ್ತಕ ಎಲ್ಲರ ಕೈ ಸೇರಲೆಂದು ಮನಃಪೂರ್ತಿಯಾಗಿ ಹಾರೈಸುತ್ತೇನೆ. ಎಲ್ಲರೂ ಈ ಪುಸ್ತಕವನ್ನು ಕೊಂಡು ಅದರಲ್ಲಿರುವ ರಂಗೋಲಿ ಗಳನ್ನು ಕಲಿತು, ಅಳವಡಿಸಿಕೊಳ್ಳುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ. ಅಷ್ಟೇ ಅಲ್ಲದೆ ಇಂತಹ ರಂಗೋಲಿ ಪುಸ್ತಕ ಅಚ್ಚಾಗಿ ಉಳಿಯಲಿ. ಮುಂದಿನ ಯುವ ಜನರಿಗೆ ದಾರಿದೀಪವಾಗಲಿ ಮತ್ತು ಮಾಹಿತಿ ಪುಸ್ತಕ ವಾಗಲಿ ಎಂದು ಇಚ್ಚಿಸುತ್ತೇನೆ. ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಮತ್ತು ಅವರಿಗೆ ಅಭಿನಂದಿಸುತ್ತೇನೆ. ನನಗೆ ಬೆನ್ನುಡಿಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿರುವ ಮೇಡಂ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಇಂತಿ 

 ಡಾ ಎಸ್ ವೀರೇಶ್ ಕುಮಾರ್ 

 ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತು 

 ಸಂಸ್ಥಾಪಕರು ಅಧ್ಯಕ್ಷರು

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456