ನ್ಯಾಯಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಚಿತ್ರಪಠ ಹಿಡಿದು ನ್ಯಾಯುತ ಹೋರಾಟ
ಭಾಗ್ಯನಗರ: ಸುಮಾರು ನಮ್ಮ ತಾತ ಮುತ್ತಾನ ಕಾಲದಿಂದ ಸುಮಾರು 70-80 ವರ್ಷಗಳಿಂದ ನಾವು ಯಲ್ಲoಪಲ್ಲಿ ಸರ್ವೇ ನಂಬರ್ 216/2 ರಲ್ಲಿ ಮಳೆ ಆಧಾರಿತ 20 ಎಕರೆ ಜಮೀನು ಇದ್ದು ಅದರಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದೆವು ಆದರೆ ನಮ್ಮ ಕುಟುಂಬದ ವಯುಕ್ತಿಕ ಕಾರಣಗಳಿಂದ ಸುಮಾರು 11 ಎಕರೆ ಜಮೀನು ಖಾಸಗಿ ವ್ಯಕ್ತಿಗಳಿಗೆ ರೂ ಎಕರೆ 7ಲಕ್ಷ್ಮ ರಂತೆ
ಸುಮಾರು 80 ಲಕ್ಷ ರೂಪಾಯಿ ಗಳಿಗೆ ಮಾರಾಟ ಮಾಡಲಾಗಿದ್ದು ಉಳಿದ 9 ಎಕರೆ ಜಮೀನುನಲ್ಲಿ ವಾಡಿಕೆಯಂತೆ ಮಳೆ ಆಧಾರಿತ ಬೆಳೆಗಳನ್ನು ಬೆಳೆದು ವ್ಯವಸಾಯ ಮಾಡುತ್ತಿದ್ದ ನಮ್ಮ ಕುಟುಂಬ ಅನಾರೋಗ್ಯ ಕಾರಣದಿಂದ ಸುಮಾರು 1-2 ವರ್ಷಗಳಿಂಗ ಯಾವುದೇ ಬೆಳೆ ಮತ್ತು ವ್ಯವಸಾಯ ಮಾಡುತ್ತಿಲ್ಲ,
ಅದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ನಮ್ಮ ಪರಬಾರೆಯಲ್ಲಿರುವ 9 ಎಕರೆ ಜಮೀನು ಲಪಠಾಯಿಸಲು ಸಂಚುರೂಪಿಸಿ ನಮ್ಮ ಜಮೀನಲ್ಲಿ ಜೆ ಸಿ ಬಿ ಮೂಲಕ ಮುಳ್ಳು ಮತ್ತು ಕಲ್ಲು ಗುಡ್ಡೆಗಳು ತೆರವು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.ಆಗ ನಮ್ಮ ಹಿರಿಯರಿಗೆ ಮಾಹಿತಿ ನೀಡಿ ನಮ್ಮ ಜಮೀನು ಒತ್ತುವರಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಕೊಡಲೇ ನಾವೆಲ್ಲರೂ ಎಚ್ಚತ್ತಿಕೊಳ್ಳಬೇಕು ಎಂದು ಮಾಹಿತಿ ನೀಡಿದಾಗ ಹಿರಿಯರು ಎರಡು ಕಡೆಯವರನ್ನು ಮಾತನಾಡಿಸಿ ನಮಗೆ 2.5 ಕೋಟಿ ರೂಪಾಯಿ ಹಣ ನೀಡಿದಾಗ ನಾವು ಜಾಗವನ್ನು ಬಿಟ್ಟಕೊಡಬೇಕು ಎಂದು ಮಾತುಕತೆ ನಡೆಸಿದ್ದಾರೆ, ಅದರಂತೆ ನಾವು ಕೂಡ ಸುಮಾರು ಎರಡು ಮೂರು ವರ್ಷಗಳ ಕಾಲ ಕಾದು ನೋಡಿದರು ಯಾವುದೇ ಪ್ರಯೋಜನೆ ಇಲ್ಲ
ಈಗ ಕಳೆದ ಮೂರು ನಾಲ್ಕು ದಿನಗಳಿಂದ ನಮ್ಮ 9 ಎಕರೆ ಜಮೀನಿನಲ್ಲಿ ದೌರ್ಜನ್ಯವಾಗಿ ಪ್ರವೇಶಿಸಿ ಜೆ ಸಿ ಬಿ ಮತ್ತು ಟ್ರಾಕ್ಟರ್ ವಾಹನಗಳನ್ನು ಬಳಸಿ ಜಮೀನು ಸಮತಾಟ್ಟು ಕಾಮಗಾರಿ ನಡೆಸುತ್ತಿದ್ದಾರೆ, ಇದನ್ನ ಪ್ರಶ್ನೆ ಮಾಡಿದರೆ, ನಮ್ಮ ಮೇಲೆ ವಿನಾಕಾರಣ ದೌರಾಜನ ಗಲಾಟೆ ತೆಗೆಯುತ್ತಾರೆ.ಹಾಗಾಗಿ ನಾವು ನಮ್ಮ ಕುಟುಂಬದವರು ಇಂದು ನಮ್ಮ ಜಮೀನನಲ್ಲಿ ನಡೆಯುತ್ತಿರುವ ಅಕ್ರಮ ಪ್ರವೇಶ ಕಾಮಗಾರಿ ನಿಲ್ಲಿಸುವಂತೆ ಸಂವಿಧಾನ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಹಿಡಿದು ನ್ಯಾಯುತ ಹೋರಾಟ ಮಾಡುತ್ತಿದ್ದೇವೆ ನಮಗೆ ದಲಿತ ಸಂಘನೆ ಬೆಂಬಲ ಸೂಚಿಸಿದೆ, ನಮಗೆ ನ್ಯಾಯ ಬೇಕು, ಇಲ್ಲ ಜಮೀನು ಇಲ್ಲವಾದರೆ ನಮ್ಮ ನ್ಯಾಯುತ ಹೋರಾಟ ಮುಂದುವರಿಯುತ್ತದೆ ಹಾಗೂ ನಾವು ಈಗಾಗಲೇ ನಮ್ಮ ಕುಟುಂಬ ಸದಸ್ಯರು ತಹಸೀಲ್ದಾರ್ ಕಚೇರಿಯಲ್ಲಿ ಧಾರಾಖಸ್ತುಗೆ ಅರ್ಜಿ ಹಾಕಲಾಗಿದೆ ಎಂದರು. ಈ ಸಂಧರ್ಭದಲ್ಲಿ,ಮನೋಹರ, ಗೌತಮಿ, ಮಂಜುಳಾ, ಜನಾರ್ದನ್, ನಂದಿನಿ, ನಾರಾಯಣಮ್ಮ, ಪಾರ್ವತಮ್ಮ, ಶಿವಪ್ಪ,ನಾರಾಯಣಸ್ವಾಮಿ, ಶಶಿಕಲಾ, ದಲಿತ ಮುಖಂಡರಾದ ಗಂಗುಳಮ್ಮ, ವನಜಾಕ್ಷಿ, ವಿಜಯ್ ನಾರಾಯಣ ಸ್ವಾಮಿ, ಸೇರಿದಂತೆ ಮನೋಹರ್ ಕುಟುಂಬಸ್ಥರು, ದಲಿತ ಮಹಿಳಾ ಮುಖಂಡರು, ದಲಿತ ಮುಖಂಡರು ಇದ್ದರು...
What's Your Reaction?
Like
3
Dislike
0
Love
1
Funny
1
Angry
0
Sad
0
Wow
1
