ನಿಷ್ಠೆ ಭಕ್ತಿಯಿಂದ ಆಚರಿಸುವ ಹಬ್ಬ ಪವಿತ್ರ ರಂಜಾನ್-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಭಾಗ್ಯನಗರ: ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿರುವ ಈದ್ಗ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ.ಎಸ್. ಏನ್. ಸುಬ್ಬಾರೆಡ್ಡಿ ಭಾಗಿಯಾಗಿ ಒಂದು ತಿಂಗಳ ರಂಜಾನ್ ಹಬ್ಬದ ಪ್ರಯುಕ್ತ ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ನಾಡಿನಲ್ಲಿ ಸುಖ, ಶಾಂತಿ, ಸೌಹಾರ್ದತೆಯು ನೆಲೆಸಲಿ ಹಾಗೂ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ಶುಭಕೋರಿದ್ದಾರೆ.
ಬಳಿಕ ಮಾತನಾಡಿದ ಅವರು, ಇಂದು ಅತ್ಯಂತ ಪವಿತ್ರವಾದ ದಿನ ರಂಜಾನ್ ಇಂದು ಶ್ರದ್ಧೆ ಹಾಗೂ ಭಕ್ತಿಯ ಸಂಕೇತವಾದ ರಂಜಾನ್ ಹಬ್ಬವು ಎಲ್ಲೆಡೆ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. ಈ ಹಬ್ಬವು ಸಹಾನುಭೂತಿ, ಸಹೋದರತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಗಟ್ಟಿಗೊಳಿಸಲಿ ಎಂದು ಹಾರೈಸುತ್ತೇನೆ.
ಈ ತಿಂಗಳನ್ನು ಉಪವಾಸದ ತಿಂಗಳೆಂದೇ ಕರೆಯಲಾಗುವುದು. ಈ ತಿಂಗಳಲ್ಲಿ ಕುರಾನ್ ಪಠಣ, ದೇವರಿಗೆ ಪ್ರಾರ್ಥನೆ ಸಲ್ಲಿಸುವುದು, ಮಸೀದಿಗಳಿಗೆ ಹೋಗುವುದು, ಇವುಗಳನ್ನು ತಪ್ಪದೇ ಮಾಡುತ್ತಾರೆ. ದಾನ ಹಾಗೂ ಪುಣ್ಯಕಾರ್ಯಗಳನ್ನು ಈ ಅವಧಿಯಲ್ಲಿ ಮುಸ್ಲಿಮರು ಮಾಡುತ್ತಾರೆ. ಗೃಹಸ್ಥನೂ ಬಡವರಿಗೆ ದಾನ ನೀಡಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿದೆ.
ರಂಜಾನ್ ಉಪವಾಸ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ ಮತ್ತು ಯಾವ ಸುಖವನ್ನೂ ಅನುಭವಿಸುವುದಿಲ್ಲ. ಈ ಅವಧಿಯಲ್ಲಿ ವಿವಾದಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಪವಿತ್ರ ರಂಜಾನ್ ಅವಧಿಯಲ್ಲಿ ಕೆಟ್ಟ ಕೆಲಸ ಮಾಡಿದರೆ ಅವರಿಗೆ ಕೆಟ್ಟದಾಗುತ್ತದೆ ಎಂಬ ನಂಬಿಕೆಯಿದೆ ಮತ್ತು ಉಳ್ಳವರು ಅಂದರೆ ಶ್ರೀಮಂತರು, ಸಿರಿವಂತರು ಬಡವರಿಗೆ ಸಹಾಯ ಮಾಡುವ ಸುದಿನವಾಗಿದೆ ತಪ್ಪದೆ ಬಡವರಿಗೆ ಪ್ರತಿಯೊಬ್ಬರೂ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಿ ಎಂದು ತಿಳಿಸುತ್ತೇನೆ.
ಹಾಗು ಮುಸ್ಲಿಂ ಧರ್ಮಗುರುಗಳ ಮತ್ತು ಮುಸ್ಲಿಂ ಬಾಂದವರ ಬೇಡಿಕೆಯಂತೆ ಉತ್ತಮ ಗುಣ ಮಟ್ಟದಲ್ಲಿ ಶಾದಿಮಹಲ್ ನಿರ್ಮಿಸಿ ಕೊಡಲಾಗಿದೆ, ಅಲ್ಪ ಸಂಖ್ಯಾತರ ಹಾಸ್ಟೆಲ್, ಕಟ್ಟಡ ನಿರ್ಮಾಣವಾಗಿದೆ ಅತೀ ಶೀಘ್ರದಲ್ಲೇ ಉದ್ಘಾಟನೆ ಮಾಡಲು ಸಿದ್ದವಾಗಿದೆ ಮತ್ತು ಖಬಾರಸ್ತಾನ್ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿ ಅವಶ್ಯಕತೆ ಇದೆ ಹಾಗೂ ಶಾದಿಮಹಲ್ ಅವರಣ ಜಾಗ ಸರ್ವೇ ಮಾಡಿಸಿ ತಡಗೋಡೆ ನಿರ್ಮಾಣ ಮಾಡಿಕೊಡಲಾಗುವುದು ಹಾಗೂ ಈದ್ಗ ಮೈದಾನ ವಿಸ್ತರಣೆಗೆ ಅರ್ಧ ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಭರವಸೆ ನೀಡಿ ಮತ್ತೊಮ್ಮೆ ರಂಜಾನ್ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ನಮಾಜ್ ಮಾಡಿದರು. ನಂತರ ಈ ಗಣ್ಯರು ಮುಸ್ಲಿಂ ಬಂಧುಗಳಿಗೆ ಶುಭಾಶಯ ಕೋರಿದರು.
ಈದ್ಗಾಗಳಲ್ಲಿ ನಮಾಜ್ ಮಾಡಿದ ನಂತರ ಪಟ್ಟಣದ ಮುಸ್ಲಿಂ ಬಂಧುಗಳು ಪರಸ್ಪರ ಆಲಿಂಗನ, ಹಸ್ತ ಲಾಘವ(ಮುಸಾಫಹತ್)ದ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಮಾಜ್‌ಗೆ ಬರುವಾಗ ಮುಸ್ಲಿಂ ಬಂಧುಗಳೆಲ್ಲರೂ ಒಟ್ಟುಗೂಡಿ ತಕ್‌ಬೀರ್ ಹೇಳುತ್ತ ಸಂತಸಪಟ್ಟರು.
ಈ ಸಂಧರ್ಭದಲ್ಲಿ ಚಿಮುಲ್ ಅಧ್ಯಕ್ಷ ವಿ. ಮಂಜುನಾಥರೆಡ್ಡಿ, ಕೆಡಿಪಿ ಸದಸ್ಯ ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ, ಜಾಮಿಯಾ ಮಸೀದಿ ಧರ್ಮ ಗುರು ಮೌಲನ ಮಹ್ಮದ್ ರಿಯಾಜ್, ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ಸಮುದಾಯದ ಮುಖಂಡರಾದ ಮನನ್, ನಿಜಮುದ್ದಿನ್ ಬಾಬು ಜಾಮೀಯ ಮಸೀದಿಅಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಅಧ್ಯಕ್ಷ, ನಿಸಾರ್ ಅಹ್ಮದ್, ಕೆ.ಡಿ.ಪಿ.ಸದಸ್ಯ ರಿಜ್ವಾನ್ ಸಾಬ್, ಪುರಸಭೆ ಮಾಜಿ ಸದಸ್ಯರಾದ ಕೊಡಿಕೊಂಡ ನೂರುಲ್ಲಾ, ಜೆಬಿವುಳ್ಳ, ಹಸೀನಾ ಮನ್ಸೂರ್, ನಾಮ ನಿರ್ದೇಶನ ಸದಸ್ಯ ಅನ್ಸಾರ್ ಬಾಷ, ಮಾಜಿ ಸದಸ್ಯ, ಆರೀಫ್, ಹಿರಿಯ ಮುಖಂಡರಾದ ಬಶೀರ್ ಸಾಬ್, ಮಾಲೀಕ್, ಕಲೀಮ್ ವುಳ್ಳ, ತಿಮ್ಮಸಂದ್ರ ಅನ್ಸಾರ್, ಮುನೀರ್ ಹಜರತ್, ಚೋಟು, ಗಾರ್ಮೆಂಟ್ಸ್ ಜಾಕಿರ್, ಕಾಂಗ್ರೇಸ್ ಪಟ್ಟಣ ಅಧ್ಯಕ್ಷ ವಾಸೀಮ್, ಖಾನ್, ಉಪಾಧ್ಯಕ್ಷ ಶೇಬ್ಬೀರ್, ಫೈರೋಜ್, ಆಸೀಫ್, ಸೇರಿದಂತೆ ಅನೇಕ ಗಣ್ಯರು, ಸಾವಿರಾರು ಮುಸ್ಲಿಂ ಬಾಂದವರು ಇದ್ದರು...
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
