ರಾಮಲಿಂಗಪ್ಪ ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳಿಂದ ಅನ್ನದಾನ ಹಣ್ಣುಹಂಪಲು ವಿತರಣೆ

Mar 6, 2026 - 20:21
 0  68
ರಾಮಲಿಂಗಪ್ಪ ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳಿಂದ ಅನ್ನದಾನ ಹಣ್ಣುಹಂಪಲು ವಿತರಣೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಭಾಗ್ಯನಗರ: ಸುಮಾರು 20 ವರ್ಷಗಳಿಂದ ಕ್ಷೇತ್ರದಲ್ಲಿ ಹಲಾವಾರು ಸಮಾಜಮುಖಿ ಕೆಲಸಗಳು ಮಾಡಿ ಆಹಾರ ಕಿಟ್ಟುಗಳ ವಿತರಣೆ,ಮಹಿಳೆಯರಿಗೆ ಭಾಗಿನ ಅರ್ಪಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಲು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಆರ್ಥಿಕ ನೇರವು ನೀಡುವುದು ಸೇರಿದಂತೆ ಅನೇಕ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ನಮ್ಮ ನೆಚ್ಚಿನ ನಾಯಕ ರಾಮಲಿಂಗಪ್ಪ ಅಣ್ಣನವರಿಗೆ ದೇವರು ಅರೋಗ್ಯ ಅಶ್ವರ್ಯ ನೀಡಿ ಕಾಪಾಡಲಿ ಎಂದು ಯುವ ಮುಖಂಡ ಪ್ರದೀಪ್ ಶುಭ ಹಾರೈಸಿದ್ದಾರೆ.

ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷರ ರಾಮಲಿಂಗಪ್ಪ ನವರ ಹುಟ್ಟುಹಬ್ಬದ ಪ್ರಯುಕ್ತ ರಾಮಲಿಂಗಪ್ಪ ಅಭಿಮಾನಿ ಬಳಗದ ವತಿಯಿಂದ ಗೂಳೂರು ವೃತ್ತದಲ್ಲಿ ಬಡವರಿಗೆ ಅನ್ನದಾನ, ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ,ರಥು ವೃದ್ದಾಶ್ರಮದ ವೃದ್ಧರಿಗೆ, ಅನ್ನದಾನ ಮತ್ತು ಹಣ್ಣು ಹಂಪಲು ವಿತರಣೆ ಮಾಡಿ ಮಾತನಾಡಿದ ಅವರು ರಾಮಲಿಂಗಪ್ಪ ಅಣ್ಣ ನವರಿಗೆ ದೇವರು ಆಯುರಾರೋಗ್ಯ, ರಾಜಕೀಯವಾಗಿ ಒಳ್ಳೆಯ ಐಶ್ವರ್ಯ, ನೀಡಲಿ ಎಂದು ಬಯಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ವನಜಾಕ್ಷಿ, ಗಂಗುಳಮ್ಮ, ಮುಖಂಡರಾದ ಗೂಳೂರು ಲಕ್ಷೀನಾರಾಯಣ ರಾಯಲ್ ನರೇಶ್, ಮಂಜುನಾಥ್, ಲಾಯರ್ ಸತೀಶ್, ಪ್ರದೀಪ್, ಲೋಕೇಶ್,ಸೇರಿದಂತೆ ಮತ್ತಿತರರು ಇದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456