ಯಾವುದೇ ಭಯ-ಭೀತಿಯಿಲ್ಲದೆ ಪರೀಕ್ಷೆ ಬರೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು
ಭಾಗ್ಯನಗರ: ಮಾರ್ಚ್ 18, 2026 ರಿಂದ ಆರಂಭವಾದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿದ್ದು ಅದರಂತೆ ಇಂದು ಮೊದಲನೇ ದಿನದ ಇಂದು ಪ್ರಥಮ ಭಾಷೆ ಕನ್ನಡ ವಿಷಯ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಗಮವಾಗಿ ಮತ್ತು ಶಾಂತಿಯುತವಾಗಿ ಆರಂಭವಾಗಿವೆ. ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಟ್ಟಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ವೆಬ್ ಕಾಸ್ಟಿಂಗ್ ಮೂಲಕ ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಒಟ್ಟು ವಿದ್ಯಾರ್ಥಿಗಳು 2327 ನೋಂದಾಯಿಸಿಕೊಂಡಿದ್ದು, ಅದರಲ್ಲಿ 26 ವಿದ್ಯಾರ್ಥಿಗಳು ಗೈರಾಜರಾಗಿದ್ದಾರೆ, ಉಳಿದ 23015 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ಬಾಗೇಪಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ 4 ಕೇಂದ್ರಗಳು, ಗ್ರಾಮಾಂತರ ಪ್ರದೇಶದಲ್ಲಿ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮುಖ್ಯ ಆಧೀಕ್ಷರು 9, ಉಪಮುಖ್ಯ ಆಧೀಕ್ಷರು 1,ಕಸ್ಟೋಡಿಯನ್ಸ್ 9, ಸ್ಥಾನಿಕ ಜಾಗೃತದಳ 9,ಮಾರ್ಗಾಧಿಕಾರಿಗಳು 3, ಮೊಬೈಲ್ ಪೋನ್ ಸ್ವಾಧೀನಾಧಿಕಾರಿಗಳು 9, ಕೊಠಢಿ ಮೇಲ್ವಿಚಾರಕರು 160 ಸೇರಿ ಒಟ್ಟು 200 ಸಿಬ್ಬಂದಿಯನ್ನು ಅಯೋಜಿಸಲಾಗಿದೆ. 9 ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ವೈಧ್ಯಕೀಯ ಸೇವೆ, ಓಆರ್ಎಸ್ ಪಾನೀಯ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಆಡಳಿತ ಮಂಡಳಿಯಿoದ ಕೊಠಡಿಗಳಲ್ಲಿ ವಿಧ್ಯುತ್ ಶಕ್ತಿ, ಶೌಚಾಲಯ, ಡೆಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ನಮ್ಮ ಗಡಿಭಾಗದಲ್ಲಿ ಅರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಕಾಳಜಿ ಅಪಾರವಾದದ್ದು ಅ ನಿಟ್ಟಿನಲ್ಲಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರಿಗೆ ವಿಶೇಷ ಕಾಲಿಕ ಸಾಹಿತ್ಯ ಪುಸ್ತಕ ಮತ್ತು ವಿಶೇಷ ಮಾದರಿ ಪ್ರಶ್ನೆ ಪತ್ರಿಕೆ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿತರಣೆ ಮಾಡಿ ಶೇ100 ರಷ್ಟು ಬರವಂತೆ ಸೂಚನೆ ನೀಡಿದ್ದಾರೆ, ಅವರ ಆಶಯoತೆ 100ಕ್ಕೆ ನೂರಾರಾಷ್ಟು ಫಲಿತಾಂಶ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ-ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ
ಈ ಸಂಧರ್ಭದಲ್ಲಿ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ,ದೈಹಿಕ ಶಿಕ್ಷಣ ಪರಿವೀಕ್ಷಕ ಆರ್. ರಂಗನಾಥ್, ಉಪಮುಖ್ಯ ಆಧೀಕ್ಷ ಮಂಜುನಾಥ್, ನಾರಾಯಣಸ್ವಾಮಿ, ಸೇರಿದಂತೆ ಶಿಕ್ಷಕ ಶಿಕ್ಷಕಿಯರು, ಸೇರಿದಂತೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
