ಕಸ್ತೂರಿಬಾ ಶಾಲೆಯಲ್ಲಿ ಈ ಬಾರಿ ಶೇ.100 ರಷ್ಟು ಫಲಿತಾಂಶ ಬರಬೇಕು-ಶಾಸಕ ಸುಬ್ಬಾರೆಡ್ಡಿ ಮನವಿ
ಭಾಗ್ಯನಗರ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಅಭಿವೃದ್ಧಿಗೆ ಸೌಲಭ್ಯಗಳ ಜೊತೆಗೆ ನನ್ನ ವೈಯುಕ್ತಿಕವಾಗಿ ಅನುದಾನ ನೀಡುತ್ತೇನೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ತಾಲ್ಲೂಕಿನ ಗೂಳೂರು ಹೋಬಳಿ ತಿಮ್ಮಂಪಲ್ಲಿ ಗ್ರಾಮದಿಂದ ಭಾಗಾದಮ್ಮ ಕಣಿವೆವರೆಗೆ ಸು.3 ಕೋಟಿ 75 ಲಕ್ಷರೂಗಳ ರಸ್ತೆ ಕಾಮಗಾರಿ ಹಾಗೂ ಜಿ.ಮದ್ವೇಪಲ್ಲಿ ಕಸ್ತೂರಿಬಾ ಬಾಲಕೀಯರ ಶಾಲೆಯ 1 ಕೋಟಿ 8 ಲಕ್ಷರೂಗಳ ಹೆಚ್ಚುವರಿ ಕೊಠಡಿಗಳ ಕಟ್ಟಡಕಾಮಗಾರಿಗೆ ಗುದ್ದಲೀ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾನು ಕಳೆದ ಬಾರಿ ಕಸ್ತೂರಿಭಾ ಬಾಲಕೀಯರ ಶಾಲೆಗೆ ಬೇಟಿ ನೀಡಿದಾಗ ಹಲವು ವಿದ್ಯಾರ್ಥಿಗಳ ಹಾಗೂ ಸ್ವಚತೆಯ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದವು ಕೂಡಲೇ ನಾನು ಸಂಬಂದಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಸರಿಪಡಿಸುವಂತೆ ಖಡಕ್ಕಾಗಿ ಹೇಳಿದ್ದೆ ಆದರೆ ಇಂದು ಅಂತಹ ಸಮಸ್ಯೆಗಳು ಕಾಣುತ್ತಿಲ್ಲ ವಿದ್ಯಾರ್ಥಿನಿಯರು ಕಷ್ಟುಪಟ್ಟು ಓದಬೇಕು ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳು ಬೇರೆ ಲೈಂಗಿಕ ಚಟುವಟಿಕೆಗಳ ಕಡೆ ಗಮನ ಹೋಗುತ್ತೆ ಅದರ ಕಡೆ ಗಮನ ಕೊಡಬೇಡಿ ಇಲ್ಲಿ ಯಾವುದೇ ಸಮಸ್ಯೆ ಬರಲಿ ಕೂಡಲೇ ನನ್ನ ಅಥವಾ ಪೋಲೀಸರಿಗೆ ಮಾಹಿತಿ ನೀಡಿ ಅವರು ತಕ್ಷಣ ಸ್ಪಂದನೆ ನೀಡುತ್ತಾರೆ ಒಟ್ಟಿನಲ್ಲಿ ಚೆನ್ನಾಗಿ ಓದಿ ಒಳ್ಳೆಯ ಫಲಿತಾಂಶ ತಂದು ಶೇ/100 ರಷ್ಟು ಫಲಿತಾಂಶ ತರಬೇಕು ಎಂಬುದೇ ನನ್ನ ಆಸೆ ಈಗ 1 ಕೋಟಿ 8 ಲಕ್ಷರೂಗಳ ವೆಚ್ಚದಲ್ಲಿ ಒಂದು ಒಳ್ಳೆಯ ಕಟ್ಟಡ ನಿರ್ಮಾಣವಾಗುತ್ತೆ ಅದನ್ನು ಸಹಾ ನೀವು ಮಾಡಿಕೊಳ್ಳಬಹುದು ಅವರು ತಿಮ್ಮಂಪಲ್ಲಿ ಗ್ರಾಮದಿಂದ ಭಾಗಾದಮ್ಮ ಕನಮುವರೆಗೆ ರಸ್ತೆ ಮಹಳ ಹದಗೆಟ್ಟಿತ್ತು ಇಂದು ಅದಕ್ಕೆ 3 ಕೋಟಿ 75 ಲಕ್ಷರೂಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗುಡ್‌ಟೆಚ್ ಮತ್ತು ಬ್ಯಾಡ್‌ಟೆಚ್ ಗಮನ: ఆజಯ್ ಸಾರಥಿ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಮಾತನಾಡಿ ಹೆಣ್ಣು ಮಕ್ಕಳಿಗೆ ಗುಡ್‌ಟಚ್ ಮತ್ತು ಬ್ಯಾಡ್ ಟೆಚ್ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಅಮ್ಮ ಟೆಚ್ ಮಾಡಿದರೆ ಗುಡ್ ಟೆಚ್, ಪರಿಚಿತರು ಅಥವಾ ಅಪರಿಚಿತರು ಮಾಡಿದರೆ ಬ್ಯಾಡ್‌ಟೆಚ್ ನಿಮಗೆ ಈ ವಯಸ್ಸಿನಲ್ಲಿ ಬೇರೆ ಏನೇ ಆಲೋಚನೆಗಳು ಇದ್ದರೂ ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ಇರಲಿ ನಿಮ್ಮ ಶಾಲಾ ಆವರಣ ಅಥವಾ ಶಾಲಾ ಮುಂಭಾಗ ಯಾರೇ ಗೇಲಿ ಮಾಡಿದರೂ ಅಥವಾ ರಾಗಿಂಗ್ ಮಾಡಿದರೆ ಕೂಡಲೇ ನನ್ನ ಮೊಬೈಲ್ ನಂಬರ್‌ಗೆ ಸಂಪರ್ಕ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟರಾಮಪ್ಪ, ಲೋಕೋಪಯೋಗಿ ఇలాಖೆ ఎఇఇ ಅರುಣಾಚಲಂ , ಲೋಕೇಶ್, ಜಿಪಂ ಮಧು, ಕಸ್ತೂರಿಬಾ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ, ಮುಖಂಡರಾದ ಹುಬ್ಬಳಿ ಬಯ್ಯಪ್ಪ, ಗುಟ್ಟಪಾಳ್ಯ ಶ್ರೀನಿವಾಸ, ಮಲ್ಲಿಕಾರ್ಜುನ, ಸುಬ್ಬಿರೆಡ್ಡಿ, ವೆಂಕಟರೆಡ್ಡಿ, ನಾಗರಾಜು, ಬೈಯಪ್ಪರೆಡ್ಡಿ, ರಾಜಾರೆಡ್ಡಿ, ಬಾಬು, ಮುನಿರಾಮಿರೆಡ್ಡಿ, ವಿಶ್ವನಾಥರೆಡ್ಡಿ, ಶ್ರೀನಿವಾಸ, ಶ್ರೀರಾಮರೆಡ್ಡಿ, ದೋಬಿ ಶ್ರೀನಿವಾಸ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.... ವರದಿ ಸುಬ್ಬು ಭಾಗ್ಯನಗರ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
